Categories: ಮನರಂಜನೆ

‘ಮಹಾವತಾರ’ವೆತ್ತಿದ ವಿಕ್ಕಿ ಕೌಶಲ್‍; ಪರಶುರಾಮನಾಗಿ ನಟನೆ

ಬಾಲಿವುಡ್‍ ನಟ ವಿಕ್ಕಿ ಕೌಶಲ್‍ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ‘ಛಾವಾ’ ಚಿತ್ರದಲ್ಲಿ ಛತ್ರಪತಿ ಸಾಂಭಿಜಿ ಆಗಿ, ‘ಸ್‍ಯಾಮ್‍ ಬಹದ್ದೂರ್‍’ ಚಿತ್ರದಲ್ಲಿ ಸ್ಯಾಮ್‍ ಮಾಣಿಕ್‍ಷಾ ಆಗಿ, ಸರ್ದಾರ್‍ ‘ಉಧಮ್‍’ ಚಿತ್ರದಲ್ಲಿ ಉಧಮ್‍ ಸಿಂಗ್‍ ಆಗಿ ಹಲವು ಅವತಾರಗಳನ್ನು ಎತ್ತುತ್ತಾ ಬಂದಿದ್ದಾರೆ.

ಇದೀಗ ವಿಕ್ಕಿ, ಇನ್ನೊಂದು ‘ಮಹವತಾರ’ವನ್ನು ಎತ್ತುತ್ತಿದ್ದಾರೆ. ಈ ಬಾರಿ ಅವರು ‘ಮಹಾವತಾರ್‍’ ಎನ್ನುವ ಚಿತ್ರದಲ್ಲಿ ಪರಶುರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮ್ಯಾಡಾಕ್‍ ಫಿಲಂಸ್‍ ಸಂಸ್ಥೆಯಡಿ ದಿನೇಶ್‍ ವಿಜನ್‍ ನಿರ್ಮಾಣ ಮಾಡುತ್ತಿರುವ ಈ ಚಿತ್ರವು ಅಧಿಕೃತವಾಗಿ ಘೋಷಣೆಯಾಗಿದೆ.

‘ಮಹಾವತಾರ್‍’ ಚಿತ್ರದ ಕುರಿತು ಮಾತನಾಡಿರುವ ವಿಕ್ಕಿ ಕೌಶಲ್‍, ‘ದಿನೇಶ್‍ ವಿಜನ್‍ ಕೆಲವು ದಿನಗಳ ಹಿಂದೆ ‘ಮಹಾವತಾರ್‍’ ಚಿತ್ರದ ಕಥೆಯೊಂದಿಗೆ ಬಂದರು. ಕಥೆ ಕೇಳಿ ಇಲ್ಲ ಎನ್ನುವುದಕ್ಕೆ ಸಾಧ್ಯವಾಗಲೇ ಇಲ್ಲ. ಎರಡನೇ ಯೋಚನೆ ಮಾಡದೆ, ಈ ಚಿತ್ರದ ಭಾಗವಾಗುವುದಕ್ಕೆ ಮುಂದಾದೆ. ಈ ಚಿತ್ರದ ಕೆಲಸಗಳು ಮುಂದಿನ ವರ್ಷದ ಜನವರಿಯಲ್ಲಿ ಪ್ರಾರಂಭವಾಗಲಿದೆ. ಸಂಜಯ್‍ ಲೀಲಾ ಬನ್ಸಾಲಿ ಅವರ ‘ಲವ್‍ ಆ್ಯಂಡ್‍ ವಾರ್‍’ ಚಿತ್ರದಲ್ಲಿ ನಟಿಸುತ್ತಿದ್ದು, ಆ ಚಿತ್ರ ಮುಗಿದ ನಂತರ ಮುಂದಿನ ನವೆಂಬರ್‍ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. 2026ರ ಡಿಸೆಂಬರ್‍ ವೇಳೆಗೆ ಚಿತ್‍ರ ಬಿಡುಗಡೆಯಾಗಲಿದೆ’ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ಮಹಾವತಾರ್‍’ ಚಿತ್ರವನನು ಅಮರ್‍ ಕೌಶಿಕ್‍ ನಿರ್ದೇಶನ ಮಾಡುತ್ತಿದ್ದಾರೆ.

ಭೂಮಿಕಾ

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

14 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

15 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

16 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

16 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

22 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

22 hours ago