ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘ಯುಐ’ ಚಿತ್ರದ ಬಿಡುಗಡೆ ವಿಳಂಬವಾಗುತ್ತಲೇ ಇದೆ. ಮೊದಲು ಸೆಪ್ಟೆಂಬರ್‌ನಲ್ಲಿ ಬಿಡುಗುಡೆ ಆಗಬಹುದು ಎಂದು ಹೇಳಲಾಯ್ತು. ಆ ನಂತರ ಅಕ್ಟೋಬರ್ ಎನ್ನಲಾಯ್ತು. ಉಪೇಂದ್ರ ಈಗಲೂ ಅಕ್ಟೋಬರ್‍ನಲ್ಲಿ ಬಿಡುಗಡೆ ಎಂದು ಹೇಳುತ್ತಿದ್ದಾರಾದರೂ, ಏನು ಬಿಡುಗಡೆ ಎಂದು ಸರಿಯಾಗಿ ಹೇಳುತ್ತಿಲ್ಲ.
ಇಷ್ಟಕ್ಕೂ ಚಿತ್ರ ಯಾಕೆ ಇಷ್ಟೊಂದು ವಿಳಂಬವಾಗುತ್ತಿದೆ? ಎಂಬ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿ ಇದ್ದೇ ಇದೆ. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾತನಾಡಿರುವ ಉಪೇಂದ್ರ, ‘ಐದಾರು ಮದುವೆ ಆಗಬಹುದು. ಆದರೆ, ಒಂದು ಚಿತ್ರ ನಿರ್ದೇಶನ ಮಾಡುವುದು ಅದಕ್ಕಿಂತ ಕಷ್ಟ. ಬಹಳ ವರ್ಷಗಳ ನಂತರ ನಾನು ನಿರ್ದೇಶಿಸಿರುವ ‘UI’ ಚಿತ್ರ ಬಿಡುಗಡೆಯ ಹಂತಕ್ಕೆ ತಲುಪಿದೆ. ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿರುವ ನಿರ್ಮಾಪಕರು ಅಕ್ಟೋಬರ್ ನಲ್ಲಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ತಾಂತ್ರಿಕ ಕೆಲಸಗಳು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಿರುವುದರಿಂದ ಚಿತ್ರ ಸ್ವಲ್ಪ ತಡವಾಗಿದೆ. ಚಿತ್ರದ ಮೇಕಿಂಗ್ ಮುಂಚಿನಂತಿಲ್ಲ. ಸಾಕಷ್ಟು ಬದಲಾಗಿದೆ. ಮುಂಚೆಲ್ಲಾ ಒಂದು ಹಾಡನ್ನು ಮೂರು ದಿನಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದೆವು. ಈಗ 10 ದಿನಗಳಾದರೂ ಬೇಕು. ಹಾಗಾಗಿ ಸ್ವಲ್ಪ ತಡವಾಗಿದೆ. ಇನ್ನು, ಚಿತ್ರ ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ಬರುತ್ತಿರುವುದರಿಂದ ಬಿಡುಗಡೆ ಸ್ವಲ್ಪ ವಿಳಂಬವಾಗುತ್ತಿದೆ’ ಎಂದರು.
ಈ ಚಿತ್ರದಲ್ಲಿ ಜನರ ತಲೆಯಲ್ಲಿರುವ ಹುಳವನ್ನು ತೆಗೆಯುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿರುವ ಅವರು, ‘ಜನ ಯಾವಗಲೂ ನನಗೆ ತಲೆಯಲ್ಲಿ ಹುಳ ಬಿಡುತ್ತೀರಾ ಎನ್ನುತ್ತಾರೆ. ಅದರೆ ಈ ಚಿತ್ರದಲ್ಲಿ ಹುಳ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ಪ್ರೇಕ್ಷಕರು ನಮಗಿಂತ ತುಂಬಾ ಬುದ್ದಿವಂತರು. ಪ್ರತಿಯೊಬ್ಬರೂ ಈಗ ತಂತ್ರಜ್ಞರಾಗಿದ್ದಾರೆ. ಅವರಿಗೆ ತಕ್ಕಂತೆ ಸಿನಿಮಾ ಕೊಡಬೇಕು ಅವರ ನಿರೀಕ್ಷೆ ಹೆಚ್ಚು ಇರುತ್ತದೆ. ಅದಕ್ಕೆ ತಕ್ಕ ಹಾಗೆ ಸಿನಿಮಾ ಮಾಡುವ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಅಭಿಮಾನಿ ದೇವರು ಯೆಸ್ ಅಂದರೆ ಸಾಕು ಆ ಸಿನಿಮಾ ಸೂಪರ್ ಹಿಟ್’ ಎಂದರು.
ಇನ್ನು, ‘ಯುಐ’ ಚಿತ್ರದಲ್ಲಿ ಉಪೇಂದ್ರ, ಕಲ್ಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆಯೂ ಇದೆ. ಈ ಕುರಿತು ಮಾತನಾಡುವ ಅವರು, ‘’ಕಲ್ಕಿ 2898 ಎಡಿ’ ಚಿತ್ರವು ಮೈಥಾಲಜಿಕಲ್ (ಪೌರಾಣಿಕ) ಚಿತ್ರವಾಗಿತ್ತು. ಆದರೆ, ಇದು ಲಾಜಿಕಲ್ ಮತ್ತು ಸೈಕಲಾಜಿಕಲ್ ಚಿತ್ರವಾಗಿರಲಿದೆ’ ಎಂದು ಹೇಳಿದರು.
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಚುನಾವಣೆ ನಡೆದ 152 ಸ್ಥಾನಗಳಲ್ಲಿ 110ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು…
ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಚುನಾವಣೆ ಮುಗಿದಿದೆ. ಚುನಾವಣೆ ಮುಗಿಯುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಅವರು…
ಶ್ರೀರಂಗಪಟ್ಟಣ: ಇಲ್ಲಿನ ಐತಿಹಾಸಿಕ ಶ್ರೀರಂಗನಾಥಸ್ವಾಮಿ ರಂಗಮುಡಿ ಉತ್ಸವ ಗುರುವಾರ(23-04-2026) ರಾತ್ರಿ ಸಂಭ್ರಮದಿಂದ ನೆರವೇರಿತು. ಮೇಷ ಮಾಸ, ಶುಕ್ಲಪಕ್ಷ, ಸಪ್ತಮಿ ದಿನದಂದು…
ಎಚ್.ಡಿ.ಕೋಟೆ: ತಾಲ್ಲೂಕಿನ ಹಂಪಾಪುರ ಗ್ರಾಮದ ಸಮೀಪ ಇಂದು ಬೆಳಿಗ್ಗೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ರೈತ ಸಿದ್ದೇಗೌಡ ಎಂಬುವವರಿಗೆ ಗಂಭೀರ…
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಏಪ್ರಿಲ್ ತಿಂಗಳಿನ 22 ದಿನದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 3.25…
ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್.29ರವರೆಗೆ ಹಾಗೂ ಬೆಂಗಳೂರಿನಲ್ಲಿ ಮೇ.5ರವರೆಗೆ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿಸಿಲ ಬೇಗೆಯಿಂದ…