ಮನರಂಜನೆ

ಬಿಡುಗಡೆಯಾಗಿ ಮೂರು ತಿಂಗಳ ನಂತರ ಟಿವಿ ಮತ್ತು ಓಟಿಟಿಯಲ್ಲಿ ‘UI’

ಉಪೇಂದ್ರ ಅಭಿನಯದ ‘UI’ ಚಿತ್ರ ಬಿಡುಗಡೆಯಾಗಿ ಮೂರು ತಿಂಗಳಾಗಿದೆ. ಚಿತ್ರವು ಓಟಿಟಿಯಲ್ಲಿ ಯಾವಾಗ ಪ್ರಸಾರವಾಗುತ್ತದೆ ಎಂಬ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಯುಗಾದಿ ಹಬ್ಬದ ಪ್ರಯುಕ್ತ ಚಿತ್ರವು ಏಕಕಾಲಕ್ಕೆ ಓಟಿಟಿ ಮತ್ತು ಟಿವಿಯಲ್ಲಿ ಪ್ರೀಮಿಯರ್‍ ಆಗಲಿದೆ.

‘UI’ ಚಿತ್ರದ ಟಿವಿ ಮತ್ತು ಓಟಿಟಿ ಹಕ್ಕುಗಳನ್ನು ಜೀ ಕನ್ನಡ ಕೊಂಡಿದ್ದು, ಈ ಚಿತ್ರವನ್ನು ಯುಗಾದ ಹಬ್ಬದ ಪ್ರಯುಕ್ತ ಭಾನುವಾರ ಸಂಜೆ 4.30ಕ್ಕೆ ಪ್ರಸಾರ ಮಾಡಲಿದೆ. ಟಿವಿಯಲ್ಲಿ ಪ್ರಸಾರದ ಜೊತೆಗೆ ಅಂದೇ, ಅದೇ ಸಮಯಕ್ಕೆ ಜಿ5 ಓಟಿಟಿಯಲ್ಲೂ ಪ್ರಸಾರ ಕಾಣಲಿದೆ.

‘UI’ ಚಿತ್ರವು ಡಿಸೆಂಬರ್‍ 20ರಂದು ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಚಿತ್ರವು ಮೊದಲ ವಾರ 26 ಕೋಟಿ ರೂ ಗಳಿಕೆ ಮಾಡಿದೆ ಎಂಬ ಸುದ್ದಿ ಇತ್ತು. ಒಟ್ಟಾರೆ ಚಿತ್ರದ ಗಳಿಕೆ 30 ಕೋಟಿ ರೂ.ನಷ್ಟಾಗಿದ್ದು, ಚಿತ್ರಕ್ಕೆ ಹಾಕಿದ ಬಂಡವಾಳಕ್ಕೆ ಹೋಲಿಸಿದರೆ, ಗಳಿಕೆ ಕಡಿಮೆಯಷ್ಟೇ ಅಲ್ಲ, ನಿರ್ಮಾಪಕರಿಗೆ ಚಿತ್ರದಿಂದ ಸಾಕಷ್ಟು ನಷ್ಟವಾಗಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಚಿತ್ರತಂಡದವರು ಮಾತ್ರ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಬಗ್ಗೆ ಖುಷಿಯಾಗಿದ್ದಷ್ಟೇ ಅಲ್ಲ, ಸಂಭ್ರಮದಲ್ಲಿ ಕೇಕು ಕತ್ತರಿಸಿ ಸಂಭ್ರಮಿಸಿದ್ದರು.

ತಾನಂದುಕೊಂಡಂತೆ ಪ್ರೇಕ್ಷಕರು ಚಿತ್ರವನ್ನು ಚೆನ್ನಾಗಿಯೇ ಡೀಕೋಡ್‍ ಮಾಡಿದ್ದಾರೆ ಎಂದಿದ್ದ ಉಪೇಂದ್ರ, ‘ಈ ಚಿತ್ರದಿಂದ ಏನೇನು ಅರ್ಥವಾಯ್ತು ಎಂಬುದು ಅವರವರಿಗೆ ಬಿಟ್ಟಿದ್ದು. ಅವರವರ ಗ್ರಹಿಕೆಯ ಮೇಲೆ ಚಿತ್ರವು ಬೇರೆ ಬೇರೆ ರೀತಿ ಅರ್ಥವಾಗುತ್ತಾ ಹೋಗುತ್ತದೆ. ಹಾಗೆ ನೋಡಿದರೆ, ಇಲ್ಲಿ ತಲೆಗೆ ಹುಳ ಬಿಡುವಂತದ್ದೇನ್ನೂ ಇಲ್ಲ. ಎಲ್ಲವೂ ನೇರವಾಗಿಯೇ ಇದೆ. ಆದರೆ, ಇಂಥ ಚಿತ್ರಗಳಿಗೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂಬ ಸರ್ವಾನುಮತದ ಅಭಿಪ್ರಾಯ ಸಿಗುವುದಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಗ್ರಹಿಸುತ್ತಾರೆ ಮತ್ತು ತಾವು ಅರ್ಥ ಮಾಡಿಕೊಂಡಿದ್ದನ್ನು ಹೇಳುತ್ತಾರೆ’ ಎಂದು ಉಪೇಂದ್ರ ಹೇಳಿಕೊಂಡಿದ್ದರು.

‘UI’ ಚಿತ್ರಕ್ಕೆ ಉಪೇಂದ್ರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿ, ನಾಯಕರಾಗಿಯೂ ಕಾಣಿಸಿಕೊಂಡಿದ್ದಾರೆ. ಮಿಕ್ಕಂತೆ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ, ರವಿಶಂಕರ್‍, ಅಚ್ಯುತ್‍ ಕುಮಾರ್‍, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ: 75ನೇ ವಯಸ್ಸಿನಲ್ಲಿ ನಿಧನ

ಮುಂಬೈ: ಬಾಲಿವುಡ್ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿ. ಹಿರಿಯ ನಟ ನಾನಾ ಪಾಟೇಕರ್ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ…

3 hours ago

ಓದುಗರ ಪತ್ರ: ಪಿಎಚ್‌ಸಿಗಳಲ್ಲಿ ಬಿಪಿ, ಶುಗರ್ ಮಾತ್ರೆಗಳು ಸಿಗುವಂತೆ ಕ್ರಮ ಕೈಗೊಳ್ಳಿ

ಮೈಸೂರು ಜಿ ಎಚ್.ಡಿ.ಕೋಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶುಗರ್ ಮತ್ತು ಬಿಪಿಗೆ ಹಾಗೂ ಇತರೆ ಕಾಯಿಲೆಗಳಿಗೆ ಸಂಬಂಧಪಟ್ಟ…

3 hours ago

ಓದುಗರ ಪತ್ರ: ಬರ ಅಧ್ಯಯನ: ನೈಜ ಮೌಲ್ಯಮಾಪನ ನಡೆಯಲಿ

ರಾಜ್ಯದಲ್ಲಿ ಈ ಬಾರಿ ತೀವ್ರ ಬರ ಪರಿಸ್ಥಿತಿ ಇದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ…

3 hours ago

ಓದುಗರ ಪತ್ರ: ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ಏರಿಸಿ

ರಾಜ್ಯ ಸರ್ಕಾರ ಹಾಲಿನ ದರವನ್ನು ಲೀಟರ್‌ಗೆ ೮ ರೂ. ಏರಿಕೆ ಮಾಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹಾಲಿನ ದರವನ್ನು ಒಂದೇ…

4 hours ago

ಓದುಗರ ಪತ್ರ: ಅಂತರ್ಜಲ ಮರುಪೂರಣಕ್ಕೆ ನೈಜ ಯೋಜನೆ ಅಗತ್ಯ

ರಾಜ್ಯದಲ್ಲಿ ಬಳಕೆಯಲ್ಲಿರುವ ಒಟ್ಟು ೩೦ ಸಾವಿರ ಜಲಮೂಲಗಳಲ್ಲಿ ಕೇವಲ ಶೇ.೨೦ರಷ್ಟು ಮಾತ್ರ ಅಂತರ್ಜಲ ಮರುಪೂರಣಕ್ಕಾಗಿ ಬಳಕೆಯಾಗುತ್ತಿರುವುದು ಸರ್ಕಾರ ಹಾಗೂ ಸಾರ್ವಜನಿಕರ…

4 hours ago

ದಸರಾ ಸಂಭ್ರಮಕ್ಕೆ ಸುಗಮ ಸಂಚಾರದ ಸಾಥ್

ಟಿ. ಕೆ.ಹರೀಶ್, ಹಿರಿಯ ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಭ್ರಮದ ಜೊತೆಗೆ ಸ್ವಚ್ಛತೆ, ಸುರಕ್ಷತೆ ಮತ್ತು…

4 hours ago