ಉಡುಪಿ: ಜಿಲ್ಲೆಯ ಬೈಂದೂರಿನ ಕೊಲ್ಲೂರು ಮುಕಾಂಬಿಕಾ ದೇವಾಲಯಕ್ಕೆ ತೆಲುಗಿನ ಖ್ಯಾತ ನಟ ಜೂ. ಎನ್‌ಟಿಆರ್ ಅವರು ಕುಟುಂಬ ಸಮೇತಾ ಭೇಟಿ ನೀಡಿ ತಾಯಿಯ ದರ್ಶನ ಪಡೆದರು.
ಕುಟುಂಬದೊಂದಿಗೆ ಪ್ರವಾಸದಲ್ಲಿರುವ ತಾರಕ್(ಜೂ. ಎನ್‌ಟಿಆರ್) ಅವರು ತಮ್ಮ ಎರಡನೇ ದಿನವಾದ ಇಂದು ಮುಕಾಂಬಿಕಾ ದೇವಿಯ ಮಹಾಪೂಜೆಯಲ್ಲಿ ಭಾಗವಹಿಸಿ ದೇವರ ಅನುಗ್ರಹಕ್ಕೆ ತಾರಕ್ ಹಾಗೂ ಕುಟುಂಬ ಪಾತ್ರರಾದರು.
ಕೊಲ್ಲೂರಮ್ಮನ ದರ್ಶನಕ್ಕೆ ಕೇವಲ ತಾರಕ್ ಮತ್ತು ಕುಟುಂಬ ಮಾತ್ರ ಬಂದಿಲ್ಲ. ಇವರಿಗೆ ಜೊತೆಯಾಗಿ ರಿಷಬ್ ಶೆಟ್ಟಿ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್, ಪ್ರಮೋದ್ ಶೆಟ್ಟಿ ಅವರ ಕುಟುಂಬಗಳು ಸಹಾ ದೇವಿಯ ದರ್ಶನ ಪಡೆದರು.
ನಾಲ್ಕು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ತಾರಕ್ ತಾಯಿ ಶಾಲಿನಿ ನಂದಮೂರಿ ಅವರು ತಮ್ಮ ಹುಟ್ಟೂರು ಕರಾವಳಿಗೆ ಆಗಮಿಸಿದ್ದಾರೆ. ಜೊತೆಯಲ್ಲಿ ಪತ್ನಿ ಲಕ್ಷ್ಮೀ ಪ್ರಣತಿ, ತಾರಕ್ ಇದ್ದಾರೆ. ಇವರ ಜೊತೆ ರಿಷಬ್ ಪತ್ನಿ ಪ್ರಗತಿ ರಿಷಬ್, ಪ್ರಶಾಂತ್ ನೀಲ್ ಪತ್ನಿ ಲಿಖಿತಾ ನೀಲ್ ಜೊತೆಯಲ್ಲಿದ್ದರು.
ಟಾಲಿವುಡ್ ಸ್ಟಾರ್ ಕೊಲ್ಲೂರಮ್ಮನ ದರ್ಶನಕ್ಕೆ ಆಗಮಿಸಿದ ವೇಳೆ ದೇವಸ್ಥಾನ ಪ್ರಾಧಿಕಾರ ತಾರಕ್ ಅವರಿಗೆ ಗೌರವ ಸಮರ್ಪಣೆ ಮಾಡಿದರು.
ದೇವರ ದರ್ಶನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ತಾರಕ್, ದೇವಿಯ ದರ್ಶನ ಮಾಡಿಸಿದ ರಿಷಬ್ ಅವರಿಗೆ ಧನ್ಯವಾದಗಳು. ದೇವರ ದರ್ಶನ ಚೆನ್ನಾಗಿ ಆಯಿತು. ನಾನಿಲ್ಲಿ ದೇವರ ದರ್ಶನಕ್ಕಾಗಿ ಬಂದಿದ್ದೇನೆ ಹಾಗಾಗಿ ಯಾವುದೇ ಸಿನಿಮಾ ವಿಚಾರಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ದೇವಸ್ಥಾನದಲ್ಲಿ ದೇಗುಲ ಭೇಟಿ ಬಿಟ್ಟು ಬೇರೆ ವಿಚಾರ ಮಾತಾಡಲ್ಲ ಎಂದರು.
ಇನ್ನು ಕಾಂತಾರ ಸೀಕ್ವೆಲ್‌ನಲ್ಲಿ ಜೂ.ಎನ್‌ಟಿಆರ್ ನಟಿಸಲಿದ್ದಾರೆ ಎಂಬ ಗಾಸಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ರಿಷಬ್ ಅವರನ್ನೇ ಕೇಳಬೇಕು. ಅವರೇನೆ ಪ್ಲಾನ್ ಮಾಡಿದರೂ ನಾನ್ ರೆಡಿ ಎಂದರು. ಇನ್ನು ಟಾಲಿವುಡ್‌ನಲ್ಲಿ ವಾಯ್ಸ್ ಆಫ್ ವುಮನ್ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ತಾರಕ್ ನಿರಾಕರಿಸಿದರು.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…