ಮನರಂಜನೆ

‘ತುರ್ರಾ’ ಹಾಡಿಗೆ ಸ್ಫೂರ್ತಿಯಾದ ಹುಚ್ಚನ ‘ಬೊಂಬುವೈ ಟುರ್ರವೈ’ ಪದಗಳು

‘ಮನದ ಕಡಲು’ ಚಿತ್ರದ ‘ಹೂ ದುಂಬಿಯ ಕಥೆಯ’ ಎಂಬ ಹಾಡನ್ನು ಕೆಲವು ದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದರು ನಿರ್ದೇಶಕ ಯೋಗರಾಜ್‍ ಭಟ್‍. ಈಗ ಅವರು ಇನ್ನೊಂದು ಹೊಸ ಹಾಡಿನೊಂದಿಗೆ ಬಂದಿದ್ದಾರೆ. ‘ತುರ್ರಾ’ ಎಂದು ಪ್ರಾರಂಭವಾಗುವ ಈ ಹಾಡನ್ನು ಯೂಟ್ಯೂಬ್‍ನ ಡಿಬೀಟ್ಸ್ ಚಾನಲ್‍ನಲ್ಲಿ ಬಿಡುಗಡೆಯಾಗಿದೆ.

‘ತುರ್ರಾ’ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಇನ್ನು, ವಿ. ಹರಿಕೃಷ್ಣ, ಸಂಜಿತ್ ಹಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ.

‘ತುರ್ರಾ’ ಒಂದು ಅರ್ಥವಿಲ್ಲದ ಹಾಡು. ಯೋಗರಾಜ್‍ ಭಟ್‍ ಹಾಗೂ ವಿ. ಹರಿಕೃಷ್ಣ ಅವರ ಕಾಂಬಿನೇಷನ್‍ನಲ್ಲಿ ಕೆಲವು ಈ ತರಹದ ಅರ್ಥವಿಲ್ಲದ ಹಾಡುಗಳು ಮೂಡಿಬಮದಿರುವುದಷ್ಟೇ ಅಲ್ಲ, ಜನಪ್ರಿಯವೂ ಆಗಿವೆ. ಆ ಅನರ್ಥದ ಹಾಡಗಳಿಗೆ ಈ ‘ತುರ್ರಾ’ ಸೇರ್ಪಡೆಯಾಗಿದೆ.

ಈ ಹಾಡಿನ ಕುರಿತು ಮಾತನಾಡುವ ಯೋಗರಾಜ್‍ ಭಟ್‍, ‘ನನ್ನ‌ ಬಾಲ್ಯದಲ್ಲಿ‌ ನಮ್ಮೂರಿನಲ್ಲಿ ಅಲಿಮಾ‌ ಎಂಬ ಹುಚ್ಚ ಇದ್ದ. ಆತ‌ನಿಗೆ ಮಕ್ಕಳೆಂದರೆ ಪ್ರೀತಿ. ನಾವೆಲ್ಲಾ‌ ಆತನ ಹಿಂದೆ ಸುತ್ತುತ್ತಿದ್ದೆವು. ಆತ ‘ಬೊಂಬುವೈ ಟುರ್ರವೈ’ ಎಂಬ ಪದ ಬಳಸುತ್ತಿದ್ದ.‌ ಆ ಪದವೇ ಈ ‘ತುರ್ರಾ’ ಹಾಡು ಬರೆಯಲು ಸ್ಪೂರ್ತಿ. ವಿ. ಹರಿಕೃಷ್ಣ ಅವರ ಧ್ವನಿ ಈ ಹಾಡಿಗೆ ಸೂಕ್ತವಾಗಿದೆ. ಅವರ ಜೊತೆಗೆ ಸಂಜಿತ್ ಹೆಗ್ಡೆ ಹಾಗೂ ಪ್ರಾರ್ಥನಾ ಈ ಹಾಡನ್ನು ಹಾಡಿದ್ದಾರೆ. ಕನ್ನಡ ಕಲಾಭಿಮಾನಿಗಳು ಈ ಹಾಡನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆ ಇದೆ’ ಎಂದರು.

ವಿಶೇಷವೆಂದರೆ, ಚಿತ್ರ ಪ್ರಾರಂಭವಾಗಿದ್ದು, ನಿರ್ಮಾಪಕ ಇ. ಕೃಷ್ಣಪ್ಪ ಅವರ ನೆಲಮಂಗಲದ ತೋಟದಲ್ಲಿ. ಈಗ ಅಲ್ಲೇ ಮುಕ್ತಾಯವಾಗಿದೆ. ಈ ಕುರಿತು ಮಾತನಾಡುವ ಭಟ್, ‘ಚಿತ್ರ ಅರಂಭವಾಗಿದ್ದು, ಈಗ ಮುಕ್ತಾಯವಾಗಿದ್ದು ಇದೇ ಸ್ಥಳದಲ್ಲಿ. ಹಾಗಾಗಿ, ಚಿತ್ರದ ಎರಡನೇ‌ ಹಾಡನ್ನು ಇಲ್ಲೇ ಬಿಡುಗಡೆ ಮಾಡಲಾಗಿದೆ’ ಎಂದರು.

ವಿ. ಹರಿಕೃಷ್ಣ ಸ್ಟುಡಿಯೋದಲ್ಲಿ ತುಂಬಾ ಹೊತ್ತು ಹಾಡಿರುವ ಹಾಡು ಇದಂತೆ. ಹಾಗಂತ ಅವರೇ ಹೇಳಿಕೊಂಡಿದ್ದಾರೆ. ‘ಒಂದೊಂದು ಪದ ಹಾಡುವಾಗಲೂ ಬಹಳ ಹೊತ್ತಾಗುತ್ತಿತ್ತು. ಇಂತಹ ಕಷ್ಟದ ಹಾಗೂ ವಿರಳವಾದ ಪದಗಳನ್ನು ಬಳಸಿ ಯೋಗರಾಜ್ ಭಟ್ ಅವರು ಒಂದೊಳ್ಳೆಯ ಹಾಡು ಬರೆದಿದ್ದಾರೆ’ ಎಂದು ವಿ. ಹರಿಕೃಷ್ಣ ತಿಳಿಸಿದರು.

‘ಮನದ ಕಡಲು’ ಚಿತ್ರದಲ್ಲಿ ಸುಮುಖ, ಅಂಜಲಿ ಅನೀಶ್‍ ಮತ್ತು ರಾಶಿಕಾ ಶೆಟ್ಟಿ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಮಿಕ್ಕಂತೆ ಹಿರಿಯ ನಟರಾದ ದತ್ತಣ್ಣ, ರಂಗಾಯಣ ರಘು, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿದ್ದಾರೆ. ಚಿತ್ರಕ್ಕೆ ಸಂತೋಷ್‍ ರೈ ಪಾತಾಜೆ ಛಾಯಾಗ್ರಹಣವಿದೆ.

ಭೂಮಿಕಾ

Recent Posts

ಓದುಗರ ಪತ್ರ: ‘ಜಗವೆ ಕೊಂಡಾಡುವ ಹಾಗೆ’

‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…

48 mins ago

ಓದುಗರ ಪತ್ರ: ಮೈಕ್ರೋ ಜೆರಾಕ್ಸ್ ಹಾವಳಿಗೆ ಕಡಿವಾಣ ಹಾಕಿ

ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…

49 mins ago

ಓದುಗರ ಪತ್ರ: ಅಂಬೇಡ್ಕರ್ ಪ್ರತಿಮೆಗೆ ದೀಪಾಲಂಕಾರ ವ್ಯವಸ್ಥೆಯಾಗಲಿ

ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ  ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…

52 mins ago

ಓದುಗರ ಪತ್ರ: ಮಿತಿ ಹೆಚ್ಚಳ ಕಾರ್ಮಿಕ ಸ್ನೇಹಿ ನಿರ್ಧಾರ

ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…

54 mins ago

ಪೋಕ್ಸೋ ಪ್ರಕರಣ: ಬೇಕು ಮಕ್ಕಳ ಸ್ನೇಹಿ ವಾತಾವರಣ

ಒಡನಾಡಿ ಸ್ಟ್ಯಾನ್ಲಿ ಮಕ್ಕಳ ಮಾತನ್ನು ಆಲಿಸುವುದು ಕಾನೂನುಬದ್ಧ ಮೌಲ್ಯವೂ ಆಗಿದೆ ಮಕ್ಕಳನ್ನು ಒಳಗೊಂಡ ಬಹುತೇಕ ಪ್ರಕರಣಗಳಲ್ಲಿ ಆಕ್ರೋಶಗೊಂಡು, ತಾಳ್ಮೆಗೆಟ್ಟ ಪೋಷಕರು…

56 mins ago

ಮೋದಿ ಮುಂದೆ ಮೌನ ಮುರಿದ ಚಿರಾಗ್ ಚೀರಾಟ!

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಅವರ ವಾರದ ಅಂಕಣ  ಬಿಜೆಪಿಯವರನ್ನೂ ನಾಚಿಸುವಂತೆ ಕಟ್ಟಾ ಧಾರ್ಮಿಕ ಭಕ್ತನಂತೆ ಕಾಣುವ ವ್ಯಕ್ತಿತ್ವ ಪ್ರಧಾನಿ…

1 hour ago