ಸೋಮವಾರ (ಸೆ. 22) ಬಿಡುಗಡೆಯಾದ ‘ಕಾಂತಾರ ಚಾಪ್ಟರ್ 1’ ಚಿತ್ರದ ಟ್ರೇಲರ್, ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ದಾಖಲೆ ಬರೆದಿದೆ. ಟ್ರೇಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ 107 ಮಿಲಿಯನ್ ವೀಕ್ಷಣೆ ಕಂಡು ‘ಕಾಂತಾರ ಚಾಪ್ಟರ್ 1’ ಟ್ರೇಲರ್ ಹೊಸ ದಾಖಲೆಯನ್ನು ಬರೆದಿದೆ.
ರಿಷಭ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಬಹು ನಿರೀಕ್ಷಿತ ‘ಕಾಂತಾರ ಅಧ್ಯಾಯ 1’ ಸಿನಿಮಾದ ಟ್ರೇಲರ್ ಸೋಮವಾರ, ಮಧ್ಯಾಹ್ನ 12:40ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಿದೆ. ಚಿತ್ರದ ಐದು ಭಾಷೆಗಳ ಟ್ರೇಲರ್ ಬಿಡುಗಡೆಯಾಗಿದ್ದು, ಕನ್ನಡದ ಟ್ರೇಲರನ್ನು ಕನ್ನಡದ ಜನತೆ ಬಿಡುಗಡೆ ಮಾಡಿದೆ. ಮಿಕ್ಕಂತೆ ಹೃತಿಕ್ ರೋಶನ್, ಪ್ರಭಾಸ್, ಪೃಥ್ವಿರಾಜ್ ಮತ್ತು ಶಿವಕಾರ್ತಿಕೇಯನ್ ಕ್ರಮವಾಗಿ ಹಿಂದಿ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಯ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.
ಇದನ್ನು ಓದಿ : ದಾಖಲೆಯ 7000 ಚಿತ್ರಮಂದಿರಗಳಲ್ಲಿ ‘ಕಾಂತಾರ – ಚಾಪ್ಟರ್ 1’ ಬಿಡುಗಡೆ
ಬಿಡುಗಡೆಯಾದ 24 ಗಂಟೆಗಳಲ್ಲಿ ಟ್ರೇಲರ್ 107 (10 ಕೋಟಿ) ಮಿಲಿಯನ್ ವೀಕ್ಷಣೆ ಕಂಡರೆ, 3.4 ಮಿಲಿಯನ್ ಲೈಕ್‍ಗಳನ್ನು ಪಡೆದಿವೆ. ಹೊಂಬಾಳೆ ಫಿಲಂಸ್ ಇದುವರೆಗೂ ಬಿಡುಗಡೆ ಮಾಡಿರುವ ತಮ್ಮ ಸಂಸ್ಥೆಯ ಚಿತ್ರಗಳ ಪೈಕಿ ಇದೊಂದು ಹೊಸ ದಾಖಲೆಯೆಂದರೆ ತಪ್ಪಿಲ್ಲ. ಅಷ್ಟೇ ಅಲ್ಲ, ಭಾರತದ ಅತೀ ಹೆಚ್ಚು ಶೇರ್ ಆದ ಟ್ರೇಲರ್ ಎಂಬ ಹೆಗ್ಗಳಿಕೆಗೂ ಚಿತ್ರ ಪಾತ್ರವಾಗಿದೆ. ಈ ಟ್ರೇಲರ್ 1.2 ಮಿಲಿಯನ್ ಶೇರ್ ಆಗಿವೆ.
‘ಕಾಂತಾರ ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ರಿಷಭ್ ಶೆಟ್ಟಿ ನಿರ್ದೇಶಿಸುವುದರ ಜೊತೆಗೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಜೊತೆಗೆ ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಗುಲ್ಶನ್ ದೇವಯ್ಯ ಮುಂತಾದವರು ನಟಿಸಿದ್ದು, ಚಿತ್ರವು ಕನ್ನಡ ಸೇರಿದಂತೆ ತೆಲುಗು, ಹಿಂದಿ, ತಮಿಳು, ಮಲಯಾಳಂ, ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ನವದೆಹಲಿ: ಇಸ್ರೇಲ್-ಇರಾನ್ ಸಂಘರ್ಷ ಮುಂದುವರಿದಿರುವ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟ ಸಂಪೂರ್ಣವಾಗಿ ಬಂದ್ ಆಗಿದೆ. ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ…
ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧ ಮತ್ತೆ ತೀವ್ರಗೊಂಡ ಪರಿಣಾಮ ಬೆಂಗಳೂರಿಗೆ ಆಗಮಿಸಬೇಕಿದ್ದ 8 ಮತ್ತು ನಿರ್ಗಮಿಸಬೇಕಿದ್ದ 9 ವಿಮಾನಗಳ ಹಾರಾಟ ರದ್ದಾಗಿದೆ.…
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಇವತ್ತಿಗೆ ಆರು ವರ್ಷಗಳಾಗಿದ್ದು, ಅತ್ಯಂತ ಯಶಸ್ವಿ ಅಧ್ಯಕ್ಷ ಎನಿಸಿಕೊಂಡಿದ್ದಾರೆ ಎಂದು ಸಚಿವೆ…
ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ.…
ಮೈಸೂರು: ನಾಗರಹೊಳೆ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿದ್ದ 23 ವರ್ಷದ ಜೂನಿಯರ್ ಅಭಿ ಆನೆ ಅನಾರೋಗ್ಯದಿಂದ ಮೃತಪಟ್ಟಿದೆ. ನಾಗರಹೊಳೆ ರಾಷ್ಟ್ರೀಯ…
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚುತ್ತಿದ್ದು, ಹೀಟ್ ಸ್ಟ್ರೋಕ್ ಭೀತಿ ಎದುರಾಗಿದೆ. ಹಲವೆಡೆ…