ಮನರಂಜನೆ

ಪ್ರೇತಾತ್ಮಗಳ ದೈವ ಈ ‘ದೈಜಿ’: ಹುಟ್ಟುಹಬ್ಬದ ಸಂಭ್ರಮದಲ್ಲಿ ರಮೇಶ್‍ ಅರವಿಂದ್‍

ರಮೇಶ್‍ ಅರವಿಂದ್‍, ಬುಧವಾರವಷ್ಟೇ (ಸೆ. 10) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ‘ದೈಜಿ’ ತಂಡ ಚಿತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ರಮೇಶ್‍ ಅರವಿಂದ್‍ಗೆ ಶುಭ ಕೋರಿದ್ದಾರೆ. ರಮೇಶ್‍ ಇಷ್ಟು ವರ್ಷಗಳ ಚಿತ್ರಜೀವನದಲ್ಲಿ ಹಾರರ್ ಚಿತ್ರಗಳಲ್ಲಿ ನಟಿಸಿದ್ದು ವಿರಳ. ಈಗ ಬಹಳ ದಿನಗಳ ನಂತರ ಅವರು ‘ದೈಜಿ’ ಎಂಬ ಹಾರರ್ ಚಿತ್ರದಲ್ಲಿ ನಟಿಸಿದ್ದಾರೆ.

‘ದೈಜಿ’ ಎಂದರೆ ಪ್ರೇತಾತ್ಮಗಳ ದೈವವಂತೆ. ‘ಶಿವಾಜಿ ಸುರತ್ಕಲ್‍’ ಚಿತ್ರಗಳನ್ನು ನಿರ್ದೇಶಿಸಿದ್ದ ಆಕಾಶ್‍ ಶ್ರೀವತ್ಸ ಈ ಚಿತ್ರ ನಿರ್ದೇಶಿಸಿದರೆ, ರವಿ ಕಶ್ಯಪ್‍ ನಿರ್ಮಿಸುತ್ತಿದ್ದಾರೆ. ತಮ್ಮ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ಆಧರಿಸಿ ಅವರು ಈ ಚಿತ್ರದ ಕಥೆ ಸಹ ರಚಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್‍, ‘ನಾನು ಈ ಚಿತ್ರದಲ್ಲಿ ಸು ಫ್ರಮ್‍ ಸೋ, ರಾಧಿಕಾ ಭೂ ಫ್ರಮ್‍ ಸೋ, ದಿಗಂತ್‍ ಗ ಫ್ರಮ್‍ ಸ ಸೌ ಆಗಿ ನಟಿಸಿದ್ದೇವೆ. ಅಂದರೆ ಸೂರ್ಯ ಫ್ರಮ್‍ ಸೌಥಾಂಪ್ಟನ್‍ ಇಂಗ್ಲೆಂಡ್‍, ಭೂಮಿಕಾ ಫ್ರಮ್‍ ಸೌಥಾಂಪ್ಟನ್‍ ಇಂಗ್ಲೆಂಡ್‍ ಮತ್ತು ಗಗನ್ ಫ್ರಮ್‍ ಸೌತ್‍ ಕೆನರಾ. ನಾವು ಮೂವರು ಈ ಚಿತ್ರದಲ್ಲಿ ಅನಿವಾಸಿ ಭಾರತೀಯರಾಗಿ ಕಾಣಿಸಿಕೊಂಡಿದ್ದೇವೆ. ಇದು ಅವರ ನಡುವೆ ನಡೆಯುವ ಒಂದು ಹಾರರ್ ಕಥೆ. ‘ಪ್ರೇಮದ ಕಾಣಿಕೆ’ ಚಿತ್ರದ ಒಂದು ಹಾಡಿನಲ್ಲಿ ‘ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು …’ ಎಂಬ ಸಾಲು ಬರುತ್ತದೆ. ಹುಟ್ಟು, ಸಾವು ಕೊನೆಯಾದರೆ, ಮಧ್ಯದಲ್ಲಿರುವುದು ಏನು? ಮಧ್ಯದಲ್ಲಿರುವುದು ಒಂದೇ ವಿಷಯ, ಅದು ಪ್ರೀತಿ. ಆ ಪ್ರೀತಿ ಬೇರೆಬೇರೆ ರೀತಿಯದ್ದಾಗಿರುತ್ತದೆ.

ಇದನ್ನು ಓದಿ: ಲಾಭದಾಯಕ ಉದ್ಯಮವಾಗುತ್ತಿರುವ ಖಾಸಗಿ ಚಲನಚಿತ್ರ ಪ್ರಶಸ್ತಿ ಪರಂಪರೆಯ ನಡುವೆ 

ಒಂದು ವೇಳೆ ಸಾವು ಎನ್ನುವುದು ಕೊನೆಯಲ್ಲದಿದ್ದರೆ, ಅದರ ಆಚೆ ಇನ್ನೇನಾದರೂ ಇದ್ದರೆ? ಅಲ್ಲಿಗೆ ಹೋದವರು ವರದಿ ತಂದವರಿಲ್ಲ ಎಂದು ಡಿವಿಜಿಯವರು ಹೇಳಿದಂತೆ, ಅಲ್ಲೇನಿದೆ ಎಂದು ಯಾರಿಗೂ ಗೊತ್ತಿಲ್ಲ. ಸಾವಿನ ಆಚೆ ದುಷ್ಟಶಕ್ತಿ ಇದ್ದು, ಪ್ರೀತಿ ಕಿತ್ತುಕೊಳ್ಳುವುದಕ್ಕೆ ಪ್ರಯತ್ನಿಸಿದರೆ ಏನಾಗುತ್ತದೆ ಎಂಬುದು ಎಲ್ಲಾ ಹಾರರ್ ಸಿನಿಮಾಗಳ ಅಡಿಪಾಯ. ನಾನು ಇದುವರೆಗೂ ನೋಡಿರದ ಹಾರರ್ ಸಿನಿಮಾಗಳ ಪೈಕಿ ಯಾವೊಂದೂ ಚಿತ್ರದಲ್ಲಿ ಬರದ ವಿಷಯವನ್ನು ಈ ಚಿತ್ರದಲ್ಲಿ ಆಕಾಶ್ ಶ್ರೀವತ್ಸ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಥಾವಸ್ತು ಬಹಳ ಇಷ್ಟವಾಗಿ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿದೆ’ ಎಂದರು ರಮೇಶ್ ‍ಅರವಿಂದ್‍.

ನಾವು ಭಯಪಡುವಂತದ್ದೇನೂ ಇಲ್ಲ ಎನ್ನುವ ರಮೇಶ್‍, ‘ನಾವು ಅರ್ಥ ಮಾಡಿಕೊಳ್ಳಬೇಕಾದ ಹಲವು ವಿಷಯಗಳಿವೆ. ಅರ್ಥವಾಗುವವರೆಗೂ ಅದರ ಬಗ್ಗೆ ಭಯವಿದ್ದೇ ಇರುತ್ತದೆ. ಅದು ಎಲ್ಲಾ ವಿಷಯಗಳಿಗೂ ಅನ್ವಯವಾಗುತ್ತದೆ. ಸಿನಿಮಾ, ವ್ಯಾಪಾರ ಎಲ್ಲದರ ಬಗ್ಗೆ ಭಯ ಸಹಜ. ದೆವ್ವ, ಭೂತದ ಬಗ್ಗೆ ಭಯವಾದರೆ, ಅದು ನಮಗೆ ಅರ್ಥವಾಗಿಲ್ಲ ಅಷ್ಟೇ. ಅರ್ಥವಾಗದ ಎಲ್ಲಾ ವಿಷಯಗಳಿಗೂ ಉತ್ತರ ದೇವರು ಎಂದು ಡಿವಿಜಿ ಹೇಳುತ್ತಾರೆ. ಅದು ಸತ್ಯ’ ಎಂದರು.

ರಮೇಶ್‍ ಜೊತೆಗೆ ರಾಧಿಕಾ ನಾರಾಯಣ್‍, ದಿಗಂತ್‍, ಅವಿನಾಶ್‍, ‘ಸಿದ್ಲಿಂಗು’ ಶ್ರೀಧರ್, ಗಿರಿರಾಜ್‍ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಚಿತ್ರದ ಶೇ. 60ರಷ್ಟು ಚಿತ್ರೀಕರಣ ಮುಗಿದಿದೆ. ಈ ಚಿತ್ರದ ಟೀಸರ್ ಬಿಡುಗಡೆ ಮಾಡುವುದರ ಜೊತೆಗೆ ರಮೇಶ್‍ ಅರವಿಂದ್‍ ಅವರ ಹುಟ್ಟುಹಬ್ಬವನ್ನು ಚಿತ್ರತಂಡ ಆಚರಿಸಿತು.

ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

10 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

15 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

19 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

19 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

19 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

22 hours ago