ಸಾಮಾನ್ಯವಾಗಿ ತರುಣ್ ಸುಧೀರ್ ನಿರ್ದೇಶನದ ಚಿತ್ರಗಳೆಂದರೆ, ಅದರಲ್ಲಿ ದರ್ಶನ್ ನಾಯಕನಾಗಿ ಇರಬೇಕು. ಇಲ್ಲ, ಅವರು ಚಿತ್ರ ನಿರ್ಮಾಣಕ್ಕಿಳಿಯುತ್ತಾರೆ ಎಂದರೆ ಅದರಲ್ಲಿ ಶರಣ್ ಇರಲೇಬೇಕು. ಈಗ ದರ್ಶನ್ ಮತ್ತು ಶರಣ್ ಇಬ್ಬರನ್ನೂ ಬಿಟ್ಟು, ಬೇರೆಯವರೊಂದಿಗೆ ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ ತರುಣ್ ಸುಧೀರ್.
‘ಕಾಟೇರ’ ಚಿತ್ರ ಬಿಡುಗಡೆಯಾಗಿ ಒಂದು ವರ್ಷವಾಗುತ್ತಾ ಬಂತು. ಆದರೆ, ತರುಣ್ ಸುಧೀರ್ ಯಾವೊಂದು ಹೊಸ ಚಿತ್ರವನ್ನೂ ಘೋಷಿಸಿರಲಿಲ್ಲ. ಇಷ್ಟರಲ್ಲಿ ಶುರುವಾಗಬೇಕಿದ್ದು, ದರ್ಶನ್ ಅಭಿನಯದಲ್ಲಿ ‘ವೀರ ಸಿಂಧೂರ ಲಕ್ಷ್ಮಣ’ ದರ್ಶನ್ ಜೈಲು ಪಾಲಾಗಿದ್ದರಿಂದ ತಡವಾಗಿದೆ. ಆ ಚಿತ್ರ ಇನ್ನೊಂದು ವರ್ಷ ಶುರುವಾಗುವುದು ಸಂಶಯವೇ. ಹೀಗಿರುವಾಗಲೇ, ತರುಣ್ ನಿರ್ದೇಶನವನ್ನು ಪಕ್ಕಕ್ಕಿಟ್ಟು, ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ.
ತರುಣ್ ಈ ಹಿಂದೆ ಅಟ್ಲಾಂಟ ನಾಗೇಂದ್ರ ಜೊತೆಗೆ ಸೇರಿ ’Rambo 2’ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಈ ಬಾರಿಯೂ ನಾಗೇಂದ್ರ ಜೊತೆಗೆ ಕೈಜೋಡಿಸಿರುವ ತರುಣ್, ಒಂದು ಹೊಸ ಚಿತ್ರವನ್ನು ನಿರ್ಮಿಸುವುದಕ್ಕೆ ಅಣಿಯಾಗುತ್ತಿದ್ದಾರೆ. ಈ ಚಿತ್ರವನ್ನು ಪುನೀತ್ ರಂಗಸ್ವಾಮಿ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ಈ ಹಿಂದೆ ‘ಕಾಟೇರ’ ಚಿತ್ರದಲ್ಲಿ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದರು. ಈಗ ಹೊಸ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಭಡ್ತಿ ಪಡೆಯುತ್ತಿದ್ದಾರೆ. ಈ ಚಿತ್ರವು ಕನ್ನಡವಲ್ಲದೆ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ.
ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ನಡೆಯುವ ಕಥೆಯಾಗಲಿದೆಯಂತೆ. ಚಿತ್ರಕ್ಕೆ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ’ ಎಂಬ ಟ್ಯಾಗ್‍ಲೈನ್ ನೀಡಲಾಗಿದೆ.
ಈ ಹೊಸ ಚಿತ್ರದಲ್ಲಿ ಹೆಚ್ಚಾಗಿ ಹೊಸಬರೇ ಇರಲಿದ್ದು, ಡಿಸೆಂಬರ್.25ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ. ಇನ್ನು, ಸಂಕ್ರಾಂತಿ ಹಬ್ಬಕ್ಕೆ ಚಿತ್ರದ ಶೀರ್ಷಿಕೆ ಘೋಷಣೆ ಆಗಲಿದ್ದು, ತರುಣ್ ಚಿತ್ರಗಳಿಗೆ ಕೆಲಸ ಮಾಡುವ ಪ್ರಮುಖ ತಂತ್ರಜ್ಞರು ಈ ಚಿತ್ರದಲ್ಲೂ ಕೆಲಸ ಮಾಡಲಿದ್ದಾರೆ. ಚಿತ್ರಕ್ಕೆ ಸುಧಾಕರ್ ರಾಜ್ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಸಂಕಲನವಿದೆ.
ಚಾಮರಾಜನಗರ : ಟೊಮೆಟೊ ದರ ಕುಸಿತ ಖಂಡಿಸಿ, ಬೆಲೆ ತಾರತಮ್ಯ ವಿರೋಧಿಸಿ ತಾಲ್ಲೂಕಿನ ಚಿಕ್ಕಹೊಳೆ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ನಾಯಕತ್ವದ…
ಅಮೃತಸರ : ಪಂಜಾಬ್ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೋಷಿತ ಭಯೋತ್ಪಾದಕ ಘಟಕವೊಂದನ್ನು ಭೇದಿಸಿ, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.…
ಹೊಸದಿಲ್ಲಿ : ಇರಾನ್ ನಮ್ಮ ಜೊತೆ ಮಾತುಕತೆಗೆ ಸಿದ್ಧವಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ತಳ್ಳಿ ಹಾಕಿರುವ…
ನಂಜನಗೂಡು : ನವಜಾತ ಶಿಶುವನ್ನು ನಾಲೆಗೆ ಎಸೆದ ದುರಂತ ಘಟನೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀ…
ಬಾಗಲಕೋಟೆ : ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ…
ಹನೂರು : ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ದಾಸೋಹ, ಲಾಡು ಪ್ರಸಾದ ತಯಾರಿಸಲು ಯಾವುದೇ ರೀತಿಯ ಸಿಲಿಂಡರ್ ಕೊರತೆಯಾಗಿಲ್ಲ…