ಮನರಂಜನೆ

ತಮಿಳು ಚಿತ್ರರಂಗದ ಖ್ಯಾತ ಖಳನಟ ಡ್ಯಾನಿಯಲ್‌ ಬಾಲಾಜಿ ನಿಧನ!

ತಮಿಳು ಚಿತ್ರರಂಗದ ಖ್ಯಾತ ಖಳನಟ ಡ್ಯಾನಿಯಲ್‌ ಬಾಲಾಜಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ‘ಕಾಖ ಕಾಖ’ ಸಿನಿಮಾದಲ್ಲಿ ನಟ ಸೂರ್ಯರೊಂದಿಗೆ ತೆರೆ ಹಂಚಿಕೊಂಡು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಅವರ ಅಗಲಿಕೆಗೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.

ಡ್ಯಾನಿಯಲ್ ಬಾಲಾಜಿ ಅವರು ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟರು. ಕಮಲ್ ಹಾಸನ್ ನಟನೆಯ ‘ವೆಟ್ಟೈಯಾಡು ವಿಲೈಯಾಡು’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ತಮಿಳು ಚಿತ್ರರಂಗ ಮಾತ್ರವಲ್ಲದೇ ಮಲಯಾಳಂ ಚಿತ್ರರಂಗದಲ್ಲಿಯೂ ಗಮನ ಸೆಳೆದಿದ್ದರು. ತಮಿಳಿನ ಸ್ಟಾರ್‌ ನಟ ವಿಜಯ್‌ ನಟನೆಯ ಬಿಗಿಲ್‌, ಭೈರವ ಚಿತ್ರಗಳಲ್ಲಿ ವಿಲನ್‌ ಆಗಿ ಎಲ್ಲರ ಮನೆ ಮಾತನಾಗಿದ್ದರು.

ಡ್ಯಾನಿಯಲ್ ಅವರು ಎದೆನೋವಿನಿಂದ ಇತ್ತೀಚೆಗೆ ಚೆನ್ನೈ ಆಸ್ಪತ್ರೆಗೆ ದಾಖಲಾದರು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಇಂದು (ಮಾರ್ಚ್ 30) ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ವಾಸು ವಿ ಹೊಂಗನೂರು

ಮೂಲತಃ ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಮದವನಾದ ನಾನು ಒಂದು ದಶಕದಿಂದ ಮೈಸೂರಿನಲ್ಲಿ ನೆಲೆಸಿದ್ದೇನೆ. ಪದವಿಯಲ್ಲಿ ಪತ್ರಿಕೋದ್ಯಮ ವಿಭಾಗ ಆಯ್ದುಕೊಂಡು ಅಂದಿನಿಂದಲೇ ಹವ್ಯಾಸಿ ಪತ್ರಕರ್ತನಾಗಿ ವೃತ್ತಿ ಆರಿಸಿಕೊಂಡೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ 2020ರಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಪತ್ರಿಕೋದ್ಯಮದಲ್ಲಿ 3 ವರ್ಷಗಳ ಅನುಭವವಿದ್ದು, ಕಳೆದ ಒಂದು ವರ್ಷದಿಂದ ಆಂದೋಲನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ 6 ತಿಂಗಳಿನಿಂದ ಆಂದೋಲನ ಡಿಜಿಟಲ್‌ ವಿಭಾಗದಲ್ಲಿ ತೊಡಗಿಸಿಕೊಂಡಿದ್ದೇನೆ. ಕ್ರಿಕೆಟ್‌ ಮೇಲೆ ಎಲ್ಲಿಲ್ಲದ ಪ್ರೀತಿಯಿದ್ದು, ಪ್ರವಾಸ, ಇತಿಹಾಸ ಅಧ್ಯಯನ ಕಡೆ ಒಲವು ಹೆಚ್ಚು. ಪತ್ರಿಕಾ ರಂಗದಲ್ಲಿ ಕ್ರೀಡಾ ವಿಭಾಗದಲ್ಲಿ ಹೆಚ್ಚು ಆಸಕ್ತಿ ಇದೆ‌. ಮೊಬೈಲ್‌ ನಂಬರ್:‌ 9620318288

Recent Posts

ಗಾರೆ ಕೆಲಸ ಮಾಡುವವರ ಪುತ್ರಿಗೆ ಸಾಧಿಸುವ ಛಲ

ಮೈಸೂರು : ಎಲ್ಲ ಅನುಕೂಲತೆಗಳಿದ್ದರೂ ವಿದ್ಯೆ ತಲೆಗೆ ಹತ್ತುತ್ತಿಲ್ಲ ಎನ್ನುವ ವಿದ್ಯಾರ್ಥಿಗಳ ನಡುವೆ, ಗಾರೆ ಕೆಲಸ ಮಾಡುವವರ ಪುತ್ರಿಯೊಬ್ಬರು ದ್ವಿತೀಯ…

33 mins ago

ಪಿಯುಸಿ : ಕೋಟೆ ಟಾಪರ್‌ಗಳೆಲ್ಲರೂ ವಿದ್ಯಾರ್ಥಿನಿಯರೇ

ಮಂಜು ಕೋಟೆ ಎಚ್. ಡಿ. ಕೋಟೆ : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತಾಲ್ಲೂಕಿನ ತುಂಬಸೋಗೆಯ ಎಂಎಂಕೆ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ…

41 mins ago

ಮಹಾಪಂಚ್‌ ಕಾರ್ಟೂನ್‌

ಮಹಾಪಂಚ್‌ ಕಾರ್ಟೂನ್‌ | ಏ.11 ಶನಿವಾರ

2 hours ago

ವಾಹನ ದಟ್ಟನೆ : ಸುಗಮ ಸಂಚಾರಕ್ಕೆ ರೈಲ್ವೆ ಅಂಡರ್‌ ಬ್ರಿಡ್ಜ್‌ ವಿಸ್ತರಿಸಲು ಮನವಿ

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ನಿಯಂತ್ರಣ ಹಾಗೂ ಸುಗಮ ಸಂಚಾರಕ್ಕಾಗಿ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು…

13 hours ago

ಮೈಸೂರು–ಜಲ್ಪೈಗುಡಿ ನಡುವೆ ವಿಶೇಷ ರೈಲು ಸಂಚಾರ

ಮೈಸೂರು : ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು, ನೈರುತ್ಯ ರೈಲ್ವೆಯು ಮೈಸೂರು- ಜಲ್ಪೈಗುರಿ ಜಂಕ್ಷನ್‌ ನಡುವೆ ವಿಶೇಷ ಎಕ್ಸ್‌ಪ್ರೆಸ್…

13 hours ago

ಯಮುನಾ ನದಿಯಲ್ಲಿ ಮುಳುಗಿದ ಪ್ರವಾಸಿಗರ ದೋಣಿ ; 6 ಮಂದಿ ಸಾವು, ಹಲವರು ನಾಪತ್ತೆ

ಮಥುರಾ : ಬೃಂದಾವನದ ಕೇಶಿ ಘಾಟ್ ಸಮೀಪ ಯಮುನಾ ನದಿಯಲ್ಲಿ ಪ್ರವಾಸಿಗರಿಂದ ತುಂಬಿದ ದೋಣಿ ಪಲ್ಟಿಯಾಗಿ ಆರು ಮಂದಿ ಸ್ಥಳದಲ್ಲೇ…

14 hours ago