ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಚಿತ್ರವು ಶುಕ್ರವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಗುರುವಾರದವರೆಗೂ ಹೆಚ್ಚು ಸುದ್ದಿಯೇ ಇರಲಿಲ್ಲ. ಯಾವಾಗ ಚಿತ್ರ ಶುಕ್ರವಾರ ಬಿಡುಗಡೆಯಾಗಿ ಚಿತ್ರ ಚೆನ್ನಾಗಿದೆ ಎಂಬ ಪ್ರತಿಕ್ರಿಯೆ ಹೊರಬಿತ್ತೋ, ಅಲ್ಲಿಂದ ಲೆಕ್ಕಾಚಾರವೇ ಬದಲಾಗಿದೆ. ಚಿತ್ರದ ಪ್ರದರ್ಶನ ಹೆಚ್ಚಾಗಿರುವುದಷ್ಟೇ ಅಲ್ಲ, ಕಲೆಕ್ಷನ್ ಸಹ ಜೋರಾಗಿದೆ.
‘ಸು ಫ್ರಮ್ ಸೋ’ ಚಿತ್ರವು ಸದ್ಯ ಬೆಂಗಳೂರಿನಲ್ಲೇ 200ಕ್ಕೂ ಹೆಚ್ಚು ಪ್ರದರ್ಶನಗಳು ಕಾಣುತ್ತಿದೆ. ಚಿತ್ರದ ಗಳಿಕೆಯೂ ಹೆಚ್ಚಾಗಿದ್ದು, ಮೊದಲ ದಿನ ಸುಮಾರು 80 ಲಕ್ಷ ಗಳಿಕೆಯಾದರೆ, ಎರಡನೇ ದಿನ ಇನ್ನಷ್ಟು ಜಾಸ್ತಿಯಾಗಿದೆ. ಒಟ್ಟಾರೆ ಎರಡು ದಿನಗಳಿಂದ ಮೂರು ಕೋಟಿ ಗಳಿಕೆ ಆಗಿದೆ ಎಂದು ಹೇಳಲಾಗುತ್ತಿದೆ. ಹೊಸಬರ ಚಿತ್ರವೊಂದಕ್ಕೆ ಈ ರೀತಿಯ ಗಳಿಕೆ ಆಗುತ್ತಿರುವುದು ಹಲವರ ಹುಬ್ಬೇರಿಸಿದೆ.
ಈ ಕುರಿತು ಮಾತನಾಡುವ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಜೆ.ಪಿ.ತುಮಿನಾಡು, ‘ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ಸಿಕ್ಕಿದೆ. ಒಬ್ಬ ನಿರ್ದೇಶಕ ಇನ್ನೇನು ಕೇಳಲು ಸಾಧ್ಯ? ಜನ ಇಷ್ಟಪಡುತ್ತಾರೆ ಎಂಬ ನಂಬಿಕೆ ಇತ್ತು. ಒಳ್ಳೆಯ ಚಿತ್ರ ಬಂದರೆ ಜನ ಕೈಬಿಟ್ಟಿಲ್ಲ. ಅವರು ಹೊಸಬರು ಎಂದು ನೋಡೋದಿಲ್ಲ. ಚಿತ್ರಕ್ಕೆ ಪ್ರಮುಖವಾಗಿ ಆದ್ಯತೆ ಕೊಡುತ್ತಾರೆ. ಈ ಚಿತ್ರವನ್ನೂ ಇಷ್ಟಪಡುತ್ತಾರೆ ಎಂದು ಗೊತ್ತಿತ್ತು. ಆದರೆ, ಈ ಮಟ್ಟಕ್ಕೆ ಜನ ಸ್ವೀಕರಿಸುತ್ತಾರೆ ಎಂದು ಗೊತ್ತಿರಲಿಲ್ಲ’ ಎನ್ನುತ್ತಾರೆ.
ನಾವೇನು ಅಂದುಕೊಂಡಿದ್ದೆವೋ ಅವೆಲ್ಲವೂ ತಲೆ ಕೆಳಗಾಗಿದೆ ಎನ್ನುವ ತುಮಿನಾಡು, ‘ನಮ್ಮ ಪ್ಲಾನ್‍ಗಳೆಲ್ಲಾ ಬದಲಾಗಿದೆ. ಸಾಕಷ್ಟು ಪ್ರದರ್ಶನಗಳು ಸಿಕ್ಕಿವೆ. ಬೆಂಗಳೂರಲ್ಲೇ 200ಕ್ಕೂ ಹೆಚ್ಚು ಪ್ರದರ್ಶನಗಳು ಇವೆ. ಹೀಗಾಗುತ್ತಿರುವುದಕ್ಕೆ ಕಾರಣ ನಮ್ಮ ನಿರ್ಮಾಪಕ ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ರಾಜ್ ಶೆಟ್ಟಿ. ಅವರು ಚಿತ್ರ ನೋಡಿದ ಮೇಲೆ ಬಹಳ ಖುಷಿಯಾಗಿದ್ದರು. ಇದನ್ನು ನಾವು ಪ್ರಮೋಟ್ ಮಾಡುವುದಲ್ಲ, ಜನ ಮಾಡಬೇಕು ಎಂದು ನಾಲ್ಕು ಪ್ರೀಮಿಯರ್ ಶೋಗಳನ್ನು ಪ್ಲಾನ್ ಮಾಡಿಕೊಟ್ಟರು. ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಮಾಡಿದೆವು. ಮೊದಲ ಪ್ರೀಮಿಯರ್ ಶೋನಲ್ಲಿ ಜನ ನೋಡಿ ಬಾಯ್ಮಾತಿನ ಪ್ರಚಾರ ಹೆಚ್ಚಾಯಿತು. ಈ ಕ್ರೆಡಿಟ್ ರಾಜ್ ಬಿ. ಶೆಟ್ಟಿ ಅವರಿಗೆ ಸಲ್ಲಬೇಕು. ಅವರ ಮೇಲೆ ಜನರಿಗೆ ನಂಬಿಕೆ ಇದೆ. ಅವರ ನಿರ್ಮಾಣದ ಚಿತ್ರಗಳು ಚೆನ್ನಾಗಿರುತ್ತವೆ ಎಂಬ ನಂಬಿಕೆ ಇರುವುದರಿಂದ ಜನ ಚಿತ್ರಮಂದಿರದತ್ತ ಬರುತ್ತಿದ್ದಾರೆ’ ಎಂಬುದು ಅವರ ಅಭಿಪ್ರಾಯ.
‘ಸು ಫ್ರಮ್ ಸೋ’ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ, ಜೆ.ಪಿ. ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಮುಂತಾದವರು ನಟಿಸಿದ್ದಾರೆ
ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ ಹೆಚ್ಚಳ…
ಹೊಸದಿಲ್ಲಿ : ಹಿರಿಯ ನಟ ಧರ್ಮೇಂದ್ರ, ದಂತಕಥೆ ಹಿನ್ನೆಲೆ ಗಾಯಕಿ ಅಲ್ಕಾ ಯಾಜ್ಞಿಕ್, ಮಲಯಾಳಂ ಸಿನಿಮಾ ದಿಗ್ಗಜ ಮಮ್ಮುಟ್ಟಿ, ಬಂಗಾಳಿ…
ಹೊಸದಿಲ್ಲಿ : ನ್ಯಾಯಾಂಗ ಸ್ವಾತಂತ್ರ್ಯಕ್ಕೆ ಅಪಾಯ ಹೊರಗಿನಿಂದಲ್ಲ, ‘ಆಂತರಿಕ ವ್ಯವಸ್ಥೆ’ಯಿಂದಲೇ ಇದೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ್…
ಬೆಂಗಳೂರು : ಅಧಿಕಾರಿಗಳು ಜನಪ್ರತಿನಿಧಿಗಳ ದೂರವಾಣಿ ಕರೆಯನ್ನು ಸ್ವೀಕರಿಸಲೇಬೇಕು ಎಂಬ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸರ್ಕಾರಿ ಅಧಿಕಾರಿಗಳಿಗೆ ರಾಜ್ಯ ಸರ್ಕಾರ…
ಮೈಸೂರು : ಹೊಸದಿಲ್ಲಿಯಲ್ಲಿ ಬುದ್ಧಗಯಾ ವಿಮೋಚನೆ ಐತಿಹಾಸಿಕ ಚಳವಳಿಯಲ್ಲಿ ಬೌದ್ಧ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಬೌದ್ಧ ಚಿಂತಕ,…
ಮೈಸೂರು : ರಥಸಪ್ತಮಿ ಅಂಗವಾಗಿ ನಗರದಲ್ಲಿ ಭಾನುವಾರ ಅರಮನೆ ಸೇರಿದಂತೆ ವಿವಿಧೆಡೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸೂರ್ಯನಿಗೆ ನಮಿಸಲಾಯಿತು.…