ಮನರಂಜನೆ

ಸೆಟ್ಟೇರಿತು ಶ್ರೀಮುರಳಿ ಅಭಿನಯದ ಹೊಸ ಚಿತ್ರ ‘ಪರಾಕ್‍’

ಕಳೆದ ವರ್ಷವೇ ಶ್ರೀಮುರಳಿ ಅಭಿನಯದ ‘ಪರಾಕ್‍’ ಚಿತ್ರದ ಘೋಷಣೆಯಾಗಿತ್ತು. ‘ಬಘೀರ’ ಬಿಡುಗಡೆಯಾದರೂ ಚಿತ್ರದ ಬಗ್ಗೆ ಸುದ್ದಿಯೇ ಇರಲಿಲ್ಲ. ಇದೀಗ ‘ಪರಾಕ್‍’ ಕೊನೆಗೂ ಸೆಟ್ಟೇರಿದೆ.

ಸೋಮವಾರ ಬೆಂಗಳೂರಿನ ಬಂಡೆ ಮಹಾಂಕಾಳಿ ದೇಗುಲದಲ್ಲಿ ‘ಪರಾಕ್’ ಚಿತ್ರದ ಮುಹೂರ್ತ ನೆರವೇರಿದೆ. ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಇದನ್ನು ಓದಿ :  ‘ಕಾಂತಾರ – ಚಾಪ್ಟರ್ 1’ರ ಜೊತೆಗೆ ‘ಕೋಣ’ ಚಿತ್ರದ ಟ್ರೇಲರ್ …

ಈ ಚಿತ್ರದ ಕುರಿತು ಮಾತನಾಡುವ ಶ್ರೀಮುರಳಿ, ‘ಪರಾಕ್‍’ ಚಿತ್ರದ ಬಗ್ಗೆ ಹೆಚ್ಚು ಹೇಳುವುದು ಕಷ್ಟ. ಇದೊಂದು ವಿಂಟೇಜ್‍ ಶೈಲಿಯ ಸಿನಿಮಾ. ಯಾವ ಕಾಲಘಟ್ಟದಲ್ಲಿ ನಡೆಯುತ್ತದೆ ಎಂದು ಮುಂದೆ ಹೇಳುತ್ತೇವೆ. ‘ಬಘೀರ’ ನಂತರ ಯಾವ ತರಹದ ಚಿತ್ರದಲ್ಲಿ ನಟಿಸಬೇಕು ಎಂದು ತುಂಬಾ ಟೆನ್ಶನ್‍ ಇತ್ತು. ಸುಮಾರು 200 ಕಥೆಗಳನ್ನು ಕೇಳಿದ್ದೆ. ಈ ಚಿತ್ರದ ಕಥೆಯನ್ನು ಎರಡು ವರ್ಷಗಳ ಹಿಂದೆಯೇ ಕೇಳಿದ್ದೆ. ಮೊದಲು ಈ ಚಿತ್ರ ಶುರುವಾಗುತ್ತದೆ. ಇದೊಂದು ಸ್ಟೈಲಿಶ್‍ ಮತ್ತು ಅರ್ಥಪೂರ್ಣ ಚಿತ್ರವಾಗಲಿದೆ. ಈ ಚಿತ್ರಕ್ಕೆ ನನ್ನ ಲುಕ್‍ ಬದಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚುಹೆಚ್ಚು ಚಿತ್ರಗಳನ್ನು ಮಾಡುವೆ. ಶೂಟಿಂಗ್‍ ಎಲ್ಲಿ, ನಾಯಕಿ ಯಾರು, ಯಾವ ಬಿಡುಗಡೆ ಎಂದು ಈಗಲೇ ಹೇಳುವುದು ಕಷ್ಟ. ಮುಂದಿನ ದಿನಗಳಲ್ಲಿ ಹೇಳುತ್ತೇನೆ. ನಿರ್ದೇಶಕರ ಕೆಲಸ ಮತ್ತು ಆಯ್ಕೆ ಇಷ್ಟವಾಯಿತು. ಹಾಗಾಗಿ, ಅವರ ಜೊತೆಗೆ ಕೈಜೋಡಿಸಿದ್ದೇನೆ’ ಎಂದರು.

ಈ ಚಿತ್ರವನ್ನು ಹಾಲೇಶ್ ಕೋಗುಂಡಿ ನಿರ್ದೇಶನ ಮಾಡುತ್ತಿದ್ದು, ಇದು ಅವರ ಮೊದಲ ಚಿತ್ರ. ಬ್ರ್ಯಾಂಡ್ ಸ್ಟುಡಿಯೋಸ್ ಬ್ಯಾನರ್ ಅಡಿ ‘ಪರಾಕ್’ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಸಂದೀಪ್ ವಲ್ಲುರಿ ಛಾಯಾಗ್ರಹಣವಿದೆ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮಾನಸ ಗಂಗೋತ್ರಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿವಿಯ ಆವರಣದಲ್ಲಿ ವಿದ್ಯಾರ್ಥಿ ನಿಲಯಗಳ ವ್ಯವಸ್ಥೆಯೂ ಇದೆ. ಸ್ಥಳೀಯ…

2 mins ago

ಓದುಗರ ಪತ್ರ: ಶಾಂತಿ, ಸೌಹಾರ್ದ ಸಭೆಗಳು ಹೆಚ್ಚು ಹೆಚ್ಚು ನಡೆಯಲಿ

ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’…

3 mins ago

ಓದುಗರ ಪತ್ರ: ಶ್ರೇಷ್ಠ ಕಾರ್ಮಿಕ ಧುರೀಣ ಅನಂತ ಸುಬ್ಬರಾವ್

ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ…

5 mins ago

ಬಾಪೂಜಿ ನೆನಪಲ್ಲಿ; ಖಾದಿ ಕೇಂದ್ರದ ಅಂಗಳದಲ್ಲಿ…

ಕೆ.ಎಸ್. ಚಂದ್ರಶೇಖರ್ ಮೂರ್ತಿ ದುಸ್ಥಿತಿಯಲ್ಲಿ ದೇಶದ ಪ್ರಪ್ರಥಮ ತಗಡೂರು ಖಾದಿ ಕೇಂದ್ರ  ಜ.೩೦, ೧೯೪೮ರಂದು ಅಹಿಂಸಾ ಪ್ರತಿಪಾದಕ, ಸ್ವಾತಂತ್ರ್ಯ ಹೋರಾಟಗಾರ…

7 mins ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ನಿರ್ಮಾಪಕರ ಸಂಘ, ವಾಣಿಜ್ಯ ಮಂಡಳಿ ಚುನಾವಣೆ, ಚಿತ್ರನಗರಿ, ಒಟಿಟಿ ವರ್ತಮಾನ

ಹೊಸ ವರ್ಷದಲ್ಲಿ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಒಂದೆಡೆ ನಿರ್ಮಾಪಕರ ಸಂಘ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಚುನಾವಣೆಯ ಬಿರುಸು,…

13 mins ago

ಚಳಿ ಇರುವಾಗಲೇ ದಿನಕ್ಕೊಂದು ‘ಅಗ್ನಿ ಕರೆ’

ಚಾಮರಾಜನಗರ: ಚಳಿ ಇನ್ನೂ ದೂರ ಸರಿದಿಲ್ಲ. ಆದರೂ ಬಿಸಿಲು ಬೆವರು ಹರಿಯುವ ಮಟ್ಟಿಗೆ ಸುಡುತ್ತಿದೆ. ನೆಲ ದಿನೇ ದಿನೇ ಕಾದ…

19 mins ago