‘ಸೀತೆಯೆಂಬ ಹೆಸರಲ್ಲೇನೋ ದೋಷವುಂಟು…!

ಪತ್ರಕರ್ತರಾಗಿದ್ದ ಯತಿರಾಜ್ ನಟರಾಗಿ, ನಿರ್ದೇಶಕರಾಗಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿರುವ ಅವರು, ತಮಿಳು ಚಿತ್ರದಲ್ಲೂ ಅಭಿನಯಿಸಿದ್ದಾರೆ. ಅವರು ರಚಿಸಿ, ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವಚಿತ್ರ ‘ಸೀತಮ್ಮನ ಮಗ’.

ಅದರ ಚಿತ್ರೀಕರಣ ಮುಗಿಸಿರುವ ಯತಿರಾಜ್, ಚಿತ್ರಕ್ಕಾಗಿ ಬರೆದ ಹಾಡೊಂದನ್ನು ‘ಸರಿಗಮಪ’ ಖ್ಯಾತಿಯ ಮೆಹಬೂಬ್ ಸಾಬ್ ಹಾಡಿದ್ದಾರೆ. ‘ಸೀತೆಯೆಂಬ ಹೆಸರಲ್ಲೇನೋ ದೋಷವುಂಟು, ಯುಗಗಳೇ ಕಳೆದರೂನು ಲೋಪವುಂಟು’ ಎಂದು ಆರಂಭವಾಗುವ ಸಾಲಿನ ಈ ಗೀತೆಗೆ ರಾಗಸಂಯೋಜನೆ ಮಾಡಿರುವುದು ವಿನು ಮನಸು.

 

 

ರೇಣು ಸ್ಟುಡಿಯೋದಲ್ಲಿ ಧ್ವನಿಮದ್ರಣದ ನಂತರ ತಮ್ಮ ಹಿಂದಿನ ‘ಬಿಟ್ಟೋಗ್ ಬೇಡ ನನ್ನ..’ ಗೀತೆಯಂತೆ ಇದು ಕೂಡಾ ಜನಪ್ರಿಯವಾಗಲಿ ಎಂದು ಚಿತ್ರತಂಡಕ್ಕೆ ಮೆಹಬೂಬ್ ಸಾಬ್ ಶುಭಕೋರಿದರು. ಕೆ.ಮಂಜುನಾಥ್ ನಾಯಕ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಜೀವನ್ ರಾಜ್ ಛಾಯಾಗ್ರಹಣವಿದೆ. ಚೈತ್ರಾ ಶ್ರೀನಿವಾಸ್, ಚರಣ್ ಕಾಸಲ, ಸೋನು ಸಾಗರ, ಬುಲೆಟ್ ರಾಜು, ಬಸವರಾಜ್, ಜೀವನ್ ರಾಜ್, ಮಂಜುನಾಥ್ ನಾಯಕ್, ಸಿಂಚನ ತಾರಾಬಳಗದಲ್ಲಿದ್ದಾರೆ. ಸೋನು ಫಿಲಂಸ್ ಲಾಂಛನದಲ್ಲಿ ಚಿತ್ರ ಸಿದ್ಧವಾಗುತ್ತಿದೆ.

× Chat with us