‘ಸಿಂಪಲ್’ ಸುನಿ ಸದ್ದಿಲ್ಲದೆ ಒಂದು ಚಿತ್ರವನ್ನು ಮುಗಿಸಿದ್ದಾರೆ. ಹೆಸರು ಮೋಡ ಕವಿದ ವಾತಾವರಣ. ಈ ಚಿತ್ರದ ಮೂಲಕ ಅವರು ಶಿವಂ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಮುಗಿದಿದೆ.
‘ಒಂದು ಸರಳ ಪ್ರೇಮಕಥೆ’ ಚಿತ್ರವನ್ನು ನಿರ್ಮಿಸಿದ್ದ ರಮೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಹಾಗೂ ಜೇಡ್ ಸಂಗೀತ ಈ ಚಿತ್ರಕ್ಕಿದೆ.
ಈ ಚಿತ್ರದ ಕುರಿತು ಮಾತನಾಡುವ ಸುನಿ, ‘‘ಒಂದು ಸರಳ ಪ್ರೇಮ ಕಥೆ’ ನನ್ನ ಚಿತ್ರಜೀವನದಲ್ಲೊಂದು ವಿಭಿನ್ನ ಸಿನಿಮಾ. ಆ ಸಿನಿಮಾ ಮಾಡುವಾಗ ರೂಪುಗೊಂಡಿದ್ದೇ ಈ ಚಿತ್ರ. ಚಿತ್ರದ ಹೀರೋ ನಮ್ಮನೆ ಮಗ. ನಮ್ಮ ಪ್ರೊಡಕ್ಷನ್ ಹುಡುಗ. ಅವನನ್ನು ಕರೆಯುವಾಗ ನನ್ಮಗನೆ, ನನ್ಮಗನೆ ಎಂದು ಕರೆದು ಅಭ್ಯಾಸ. 2014ರಿಂದ ನನ್ನ ಎಲ್ಲಾ ಚಿತ್ರಗಳಲ್ಲೂ ಒಂದಲ್ಲ ಒಂದು ರೀತಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ನಿರ್ದೇಶನ, ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ಬಾರಿ ಕಥೆ ಕೇಳಿದಾಗಲೂ, ಹೀರೋ ಯಾರು ಅಂತ ಕೇಳುತ್ತಿದ್ದರು. ನಾನು ಹೆಸರು ಹೇಳುವಾಗ, Burning Smell ಬರುತ್ತಿತ್ತು. ಏಕೆಂದರೆ, ಅವರು ಬಂದಿದ್ದು ನಟನಾಗಬೇಕು ಎಂದು. ಈ ಚಿತ್ರದ ಕಥೆ ಕೇಳಿದಾಗ, ಹೀರೋ ಯಾರೆಂದರು. ಈ ಬಾರಿ ನೀವೇ ಹೀರೋ ಎಂದೆ. ಅವರ ಮನೆ ದೇವರು ಶ್ರೀಶೈಲಂ. ಅದಕ್ಕೆ ಅವರಿಗೆ ಶೀಲಂ ಎಂದು ಹೆಸರಿಟ್ಟಿದ್ದಾರೆ’ ಎಂದರು.
ಮೂರ್ನಾಲ್ಕು ವರ್ಷಗಳ ಹಿಂದೆ ಚಿತ್ರದ ಒಂದೆಳೆ ಬರೆದೆ ಎನ್ನುವ ಸುನಿ, ‘ದಿನಾ ಬರೆಯುತ್ತಲೇ ಇದ್ದೆ. ಶೀಲಂ ಆಫೀಸ್‍ನಲ್ಲೇ ಇದ್ದರು. ಕಥೆ ಚರ್ಚೆ ಮಾಡುತ್ತಾ ಚಿತ್ರಕಥೆ ತಯಾರಾಯಿತು. ನಮ್ಮದೇ ಪ್ರೊಡಕ್ಷನ್ ಆದ ಕಾರಣ ಒಂದು ಹಂತದ ಚಿತ್ರೀಕರಣ ಮುಗಿಯಿತು. ರಷಸ್ ನೋಡಿ, ಚಿತ್ರವನ್ನು ಮುಂದುವರೆಸಿದೆವು’ ಎಂದರು.
ಇದನ್ನೂ ಓದಿ: ಭದ್ರಾ ನಾಲಾ ಸೀಳುವ ಯೋಜನೆಗೆ ರೈತರಿಂದ ಬೃಹತ್ ಪ್ರತಿಭಟನೆ : ಸಿ.ಎಂ, ಡಿಸಿಎಂ ಮನೆಗೆ ಮತ್ತಿಗೆ ಯತ್ನ
ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿರುವುದು ನನ್ನ ಅದೃಷ್ಟ ಎಂದ ಶೀಲಂ, ‘ಈ ಚಿತ್ರದಲ್ಲಿ ಕೆಲಸ ಮಾಡಿರುವ ಟೆಕ್ನಿಷಿಯನ್ ದೊಡ್ಡ ಹೀರೋಗಳ ಜೊತೆ ಕೆಲಸ ಮಾಡಿದ್ದಾರೆ. ಒಂದೊಳ್ಳೆ ತಂಡದ ಜೊತೆಗೆ ಚಿತ್ರರಂಗಕ್ಕೆ ನಾಯಕನಾಗಿ ಪರಿಚಿತವಾಗುತ್ತಿರುವುದು ಖುಷಿ ಇದೆ’ ಎಂದರು.
ಶೀಲಂಗೆ ನಾಯಕಿಯಾಗಿ ಸಾತ್ವಿಕಾ (ಶ್ರಾವ್ಯ ರಾವ್) ಅಭಿನಯಿಸಿದ್ದಾರೆ. ‘ಇದು ನನ್ನ ಡ್ರೀಮ್ ಪ್ರಾಜೆಕ್ಟ್. ಸುನಿ ಸರ್ ಜೊತೆ ಕೆಲಸ ಮಾಡಬೇಕೆಂದು ಕೇಳಿಕೊಂಡಿದ್ದೆ. ಅವರ ಬಳಿ ಕಲಿಯುವುದು ತುಂಬಾನೇ ಇದೆ. ಈ ಜರ್ನಿಯಲ್ಲಿ ಬಹಳಷ್ಟು ಕಲಿತಿದ್ದೇನೆ’ ಎಂದರು.
‘ಮೋಡ ಕವಿದ ವಾತಾವರಣʼ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಗಿದು ಚಿತ್ರ ಬಿಡುಗಡೆಗೆ ತಯಾರಾಗಿದೆ. ಸೈನ್ಸ್ ಫಿಕ್ಷನ್ ಕಥಾಹಂದರ ಹೊಂದಿರುವ ಚಿತ್ರವನ್ನು ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನಿರ್ಮಾಣ ಮಾಡಿದ್ದ ರಾಮ್ ಮೂವೀಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ.
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…
ನವದೆಹಲಿ: ನಾಗರಿಕ ವಿಮಾನಯಾನ ಸಚಿವಾಲಯವು ಇಂಡಿಗೋದ ಬಾಕಿ ಇರುವ ಎಲ್ಲಾ ಪ್ರಯಾಣಿಕರ ಮರುಪಾವತಿಗಳನ್ನು ವಿಳಂಬವಿಲ್ಲದೇ ಪಾವತಿಸಲು ಆದೇಶಿಸಿದೆ. ರದ್ದಾದ ಅಥವಾ…
ತುಮಕೂರು: ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಚರ್ಚೆ ಬೆನ್ನಲ್ಲೇ ಮಾಜಿ ಸಚಿವ ಕೆ.ಎನ್.ರಾಜಣ್ಣ ಮಹತ್ವದ ಹೇಳಿಕೆ ಕೊಟ್ಟಿದ್ದಾರೆ. ಈ ಕುರಿತು…
ಹಾಸನ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ನೋಟಿಸ್ ಕೊಟ್ಟ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು…
ಹಾಸನ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದೊಳಗೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದು, ಕರ್ನಾಟಕದ ಇತಿಹಾಸದಲ್ಲಿಯೇ ಕಾಂಗ್ರೆಸ್…
ನಂಜನಗೂಡು: ಜಮೀನಿನಲ್ಲಿ ಭಾರೀ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಜಿಲ್ಲೆಯ ನಂಜನಗೂಡು…