ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ಶಿವರಾಜ್ ಕೆ.ಆರ್. ಪೇಟೆ ಅಭಿನಯದ ‘ನಾನು ‘ಮತ್ತು ಗುಂಡ’ ಚಿತ್ರದ ಮುಂದುವರೆದ ಭಾಗ ಬಂದಿರುವ ವಿಷಯ ಗೊತ್ತೇ ಇದೆ. ಈಗ ಆ ಚಿತ್ರದ ಮುಂದುವರೆದ ಭಾಗ ಬರುತ್ತಿದ್ದು, ಅದರಲ್ಲಿ ರಾಕೇಶ್ ಅಡಿಗ ಜೊತೆಗೆ ಸಿಂಬ ಹೆಸರಿನ ಶ್ವಾನ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ.
ರಘು ಹಾಸನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಕೆಲಸ ಈಗಷ್ಟೇ ಶುರುವಾಗಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿನ ತನ್ನ ಪಾತ್ರಕ್ಕಾಗಿ ಸಿಂಬಾ ತಾನೇ ಡಬ್ ಮಾಡುತ್ತಿದೆ. ಇಡೀ ಚಿತ್ರದಲ್ಲಿ ಸಿಂಬಾನ ಒರಿಜಿನಲ್ ಸೌಂಡ್ ಇರುತ್ತದೆ. ಡಬ್ಬಿಂಗ್ ಅಂದರೆ, ಚಿತ್ರದಲ್ಲಿ ಎಲ್ಲಿ ಅವಶ್ಯಕತೆ ಇದೆಯೋ, ಅಲ್ಲಿ ಅದರ ಬೊಗಳೋ ಸೌಂಡ್ ರೆಕಾರ್ಡ್ ಮಾಡಲಾಗುತ್ತಿದೆ.
ಈ ಕುರಿತು ಮಾತನಾಡುವ ನಿರ್ದೇಶಕ ರಘು ಹಾಸನ್, ‘ಸಿಂಬಾನ ನೈಜ ಶಬ್ಧವನ್ನೇ ನಾವು ರೆಕಾರ್ಡ್ ಮಾಡುತ್ತಿದ್ದೇವೆ. ಎಮೋಷನಲ್ ದೃಶ್ಯಗಳಲ್ಲೂ ಸಿಂಬಾ ಡಬ್ಬಿಂಗ್ ಮಾಡುತ್ತಿದೆ. ಪ್ರತಿ ಜಾತಿಯ ನಾಯಿಯದೂ ಒಂದೊಂದು ರೀತಿ ಸೌಂಡ್ ಇರುತ್ತದೆ. ಹಾಗಾಗಿಯೇ ನಾವು ನಮ್ಮ ಗುಂಡನ ಪಾತ್ರ ಮಾಡಿರೋ ಸಿಂಬಾನಿಂದಲೇ ಡಬ್ಬಿಂಗ್ ಮಾಡಿಸುತ್ತಿದ್ದೇವೆ. ಭಾರತೀಯ ಚಿತ್ರರಂಗದಲ್ಲೇ, ಶ್ವಾನದಿಂದ ಡಬ್ ಮಾಡಿಸುತ್ತಿರುವ ಪ್ರಯತ್ನ ಇದೇ ಮೊದಲು ಎನ್ನಬಹುದು. ಮೊದಲ ಭಾಗದ ಕೆಲವು ದೃಶ್ಯಗಳಲ್ಲೂ ಡಬ್ ಮಾಡಿಸಲಾಗಿತ್ತು. ಮುಂದುವರೆದ ಭಾಗದಲ್ಲಿ ಪೂರ್ತಿ ಸಿಂಬ ಡಬ್ ಮಾಡುತ್ತಿದೆ’ ಎನ್ನುತ್ತಾರೆ.
ಡಬ್ಬಿಂಗ್ ಕೆಲಸ ಆದ್ಮೇಲೆ ಚಿತ್ರದ DI ಮತ್ತು ಹಿನ್ನೆಲೆ ಸಂಗೀತದ ಕೆಲಸ ಶುರು ಮಾಡಲಾಗುತ್ತದೆ. ಈ ಚಿತ್ರವು ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.
‘ನಾನು ಮತ್ತು ಗುಂಡ 2’ ಚಿತ್ರವನ್ನು ಪೊಯೆಮ್ ಪಿಕ್ಚರ್ಸ್ ಲಾಂಛನದಲ್ಲಿ ರಘು ಹಾಸನ್ ನಿರ್ಮಾಣ ಮಾಡುತ್ತಿದ್ದು, ಆರ್.ಪಿ. ಪಟ್ನಾಯಕ್ ಸಂಗೀತ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ತನ್ವಿಕ್ ಅವರ ಛಾಯಾಗ್ರಹಣವಿದೆ. ರಾಕೇಶ್ ಅಡಿಗಗೆ ನಾಯಕಿಯಾಗಿ ರಚನಾ ಇಂದರ್ ನಟಿಸುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಶಾಸಕ ಕಾಶಪ್ಪನವರ್…
ಬೆಂಗಳೂರು: ರಾಜ್ಯದ ಮಹಿಳಾ ನೌಕರರಿಗೆ ಬಿಗ್ ಶಾಕ್ ಎಂಬಂತೆ ರಾಜ್ಯ ಸರ್ಕಾರದ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.…
ಕೊಡಗು: ಶನಿವಾರಸಂತೆಯಲ್ಲಿ ವಿದ್ಯುತ್ ವಿತರಣಾ ಉಪಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ಅವಧಿಯ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವುದರಿಂದ ನಾಳೆ ಕೊಡಗಿನ ಕೆಲ ಪ್ರದೇಶಗಳಲ್ಲಿ…
ನವದೆಹಲಿ: ಇಂಡಿಗೋ ವಿಮಾನಯಾ ಸಂಸ್ಥೆಗಳ ಆರ್ಥಿಕ ಬಿಕ್ಕಟ್ಟಿನ ನಡುವೆ ಕಾನೂನು ಮತ್ತು ನಿಯಮಗಳು ಜನರಿಗೆ ಹೊರೆಯಾಗದಂತೆ ನೋಡಿಕೊಳ್ಳುವಂತೆ ಪ್ರಧಾನಿ ನರೇಂದ್ರ…
ಬೆಳಗಾವಿ: ಸುವರ್ಣಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಂದು ವಿಶ್ವದಲ್ಲೇ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಿದರು.…
ಬೆಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲಾ ಮಾಡಿಸಿದ್ದ ರಿಷಬ್ ಶೆಟ್ಟಿ ತೊಡೆ ಮೇಲೆ ದೈವಾರಾಧಕ ಮಲಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.…