ಸಂಕ್ರಾಂತಿ ಹಬ್ಬದಲ್ಲಿ ಪುನೀತ್​ ರಾಜ್​ಕುಮಾರ್​ ನೆನಪು; ಫ್ಯಾನ್ಸ್​ ಜೊತೆ ಹೊಸ ಸುದ್ದಿ ಹಂಚಿಕೊಂಡ ಶಿವಣ್ಣ

ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಈ ಬಾರಿ ಕೊರೋನಾ ಹಾವಳಿ ನಡುವೆ ಸಿಂಪಲ್​ ಆಗಿ ಹಬ್ಬ ಆಚರಿಸಲಾಗುತ್ತಿದೆ. ನೈಟ್​ ಕರ್ಫ್ಯೂ, ವೀಕೆಂಡ್​​ ಕರ್ಫ್ಯೂ ಕಾರಣಗಳಿಂದ ಕನ್ನಡದಲ್ಲಿ ಯಾವುದೇ ಸಿನಿಮಾ ರಿಲೀಸ್​ ಆಗಿಲ್ಲ. ಹಾಗಾಗಿ ಸಂಕ್ರಾಂತಿಯ ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಕಳೆ ಇಲ್ಲ. ಅದರ ನಡುವೆಯೂ ಭರವಸೆಯ ಬೆಳಕನ್ನು ಹುಡುಕುತ್ತ ಮುನ್ನಡೆಯಲೇ ಬೇಕಾಗಿದೆ. ನಟ ಶಿವರಾಜ್​ಕುಮಾರ್​​ ಅವರು ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ.

ಈ ವೇಳೆ ಪುನೀತ್​ ರಾಜ್​ಕುಮಾರ್​ ಅವರನ್ನು ಶಿವಣ್ಣ ನೆನಪು ಮಾಡಿಕೊಂಡಿದ್ದಾರೆ. ಜೊತೆಗೊಂದು ಗುಡ್​ ನ್ಯೂಸ್​ ಸಹ ನೀಡಿದ್ದಾರೆ. ಶಿವರಾಜ್‌ಕುಮಾರ್‌ ನಟನೆಯ ‘ಬೈರಾಗಿ’ ಚಿತ್ರದ ಶೂಟಿಂಗ್​ ಮಗಿದಿರುವುದೇ ಆ ಸಿಹಿ ಸುದ್ದಿ. ಶೀಘ್ರದಲ್ಲೇ ಈ ಸಿನಿಮಾದ ಟೀಸರ್​ ಕೂಡ ರಿಲೀಸ್​ ಆಗಲಿದೆ ಎಂದು ಶಿವಣ್ಣ ಹೇಳಿದ್ದಾರೆ. ಒಂದು ಸರ್ಪ್ರೈಸ್​ ಕೂಡ ಇದೆ ಅಂತ ಅವರು ತಿಳಿಸಿದ್ದಾರೆ.

‘ಪ್ರತಿಯೊಬ್ಬರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಬೈರಾಗಿ ಸಿನಿಮಾದ ಶೂಟಿಂಗ್ ಮುಕ್ತಾಯ ಆಯ್ತು. ಆದಷ್ಟು ಬೇಗ ನಿಮ್ಮ ಮುಂದೆ ಬರಲಿದೆ. ಈ ವರ್ಷದ ಮೊದಲ ಬೈರಾಗಿ ಪೋಸ್ಟರ್​ ಅನ್ನು ನನ್ನ ಪೇಜ್​ನಿಂದ ರಿಲೀಸ್​ ಮಾಡುತ್ತಿದ್ದೇನೆ. ನೋಡಿ ಆನಂದಿಸಿ. ಇನ್ನು ಕೆಲವೇ ಗಂಟೆಗಳಲ್ಲಿ ಇನ್ನೊಂದು ಸರ್ಪ್ರೈಸ್​ ಕಾದಿದೆ. ಅಪ್ಪು ಐ ಲವ್​ ಯೂ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

× Chat with us