ಮನರಂಜನೆ

ಶಿವರಾಜಕುಮಾರ್‍ ಈಗ ಕ್ಯಾನ್ಸರ್‍ ಮುಕ್ತ; ಜ.26ರಂದು ಸ್ವದೇಶಕ್ಕೆ

ನಟ ಶಿವರಾಜಕುಮಾರ್‍ ಹೊಸ ವರ್ಷದ ಮೊದಲ ದಿನದಂದು ಅಭಿಮಾನಿಗಳಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಅವರು, ಇದೀಗ ಕ್ಯಾನ್ಸರ್‍ ಮುಕ್ತರಾಗಿದ್ದಾರೆ. ಹಾಗಂತ ಅವರೇ ಘೋಷಿಸುವ ಮೂಲಕ ಮೂಲಕ ಅಭಿಮಾನಿಗಳಲ್ಲಿದ್ದ ಆತಂಕವನ್ನು ದೂರ ಮಾಡಿದ್ದಾರೆ.

ಈ ಸಂಬಂಧ ಹೊಸ ವರ್ಷದ ಮೊದಲ ದಿನ ವೀಡಿಯೋ ಬಿಡುಗಡೆ ಮಾಡಿರುವ ಅವರು, ‘ವೈದ್ಯರು ಕ್ಯಾನ್ಸರ್ ಮೂತ್ರಕೋಶವನ್ನು ತೆಗೆದಿದ್ದಾರೆ. ನಾನೀಗ ಕ್ಯಾನ್ಸರ್‍ ಫ್ರೀ. ಇನ್ನು ಕೆಲವು ತಿಂಗಳುಗಳಲ್ಲಿ ಮತ್ತೆ ನಿಮ್ಮ ಮುಂದೆ ಹಳೆಯ ಶಿವಣ್ಣನಾಗಿ ಬರಲಿದ್ದೇನೆ’ ಎಂದು ಘೋಷಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಶಿವರಾಜಕುಮಾರ್‍ ಅವರಿಗೆ ಡಿ. 24ರಂದು ಅಮೇರಿಕಾದ ಮಿಯಾಮಿ ಕ್ಯಾನ್ಸರ್‍ ಇನ್‍ಸ್ಟಿಟ್ಯೂಟ್‍ನಲ್ಲಿ ಶಸ್ತ್ರಚಿಕಿತ್ಸೆ ನಡೆದಿತ್ತು. ತಮಿಳು ನಾಡು ಮೂಲದ ವೈದ್ಯ ಡಾ. ಮುರುಗೇಶನ್‍ ಮನೋಹರನ್‍ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಶಸ್ತ್ರಚಿಕಿತ್ಸೆಯ ನಂತರ ವೀಡಿಯೋ ಸಂದೇಶವೊಂದರಲ್ಲಿ ಮಾತನಾಡಿದ್ದ ಅವರು, ಶಿವರಾಜಕುಮಾರ್‍ ಚಿಕಿತ್ಸೆಗೆ ಸ್ಪಂದಿಸಿದ್ದಾರೆ, ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದರು.

ಅದರಂತೆ ಶಿವರಾಜಕುಮಾರ್‍ ಕ್ರಮೇಣ ಗುಣಮುಖರಾಗುತ್ತಿದ್ದಾರೆ. ಹೊಸ ವರ್ಷದ ಮೊದಲ ದಿನ ಶಿವರಾಜಕುಮಾರ್ ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರುವುದರ ಜೊತೆಗೆ, ತಾವೀಗ ಕ್ಯಾನ್ಸರ್‍ ಮುಕ್ತ ಎಂದು ಹೇಳಿದ್ದಾರೆ. ಈ ವೀಡಿಯೋದಲ್ಲಿ ಅವರ ಪತ್ನಿ ಗೀತಾ ಶಿವರಾಜಕುಮಾರ್‍ ಸಹ ಇದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಎಲ್ಲರೂ ಕಿಡ್ನಿ ಕಸಿ ಮಾಡಿದ್ದಾರೆ ಅಂತೆಲ್ಲಾ ತಿಳಿದುಕೊಂಡಿದ್ದಾರೆ. ನನಗೆ ಯೂರಿನರಿ ಬ್ಲಾಡರ್ ಕ್ಯಾನ್ಸರ್ ಆಗಿತ್ತು. ಕ್ಯಾನ್ಸರ್ ಆಗಿದ್ದ ಮೂತ್ರಕೋಶ ತೆಗೆದಿದ್ದಾರೆ. ಈಗ ನಾನು ಆರೋಗ್ಯವಾಗಿದ್ದೇನೆ. ಎಲ್ಲರ ಹಾರೈಕೆ, ಪ್ರಾರ್ಥನೆಯನ್ನು ಯಾವತ್ತೂ ಮರೆಯುವುದಿಲ್ಲ. ಎಲ್ಲರಿಗೂ ಹೊಸ ವರ್ಷದ ಶಭಾಶಯಗಳು’ ಎಂದು ಹಾರೈಸಿದ್ದಾರೆ.

ಮಾರ್ಚ್ ತಿಂಗಳ ನಂತರ ಮತ್ತದೆ ಉತ್ಸಾಹದಿಂದ ಬರುವುದಾಗಿ ಹೇಳಿದ ಶಿವರಾಜಕುಮಾರ್‍, ‘ಮೊದಲ ಒಂದು ತಿಂಗಳು ಸ್ವಲ್ಪ ನಿಧಾನ ಎಂದು ವೈದ್ಯರು ಹೇಳಿದ್ದಾರೆ. ಮಾರ್ಚ್ ತಿಂಗಳಲ್ಲಿ ಎಂದಿನ ಹಾಗೆ ಕಾರ್ಯನಿರ್ವಹಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಮತ್ತೆ ಮೊದಲಿನ ತರಹ ಆಗಬಹುದು ಎಂದು ಹೇಳಿದ್ದಾರೆ. ಜನವರಿ 26ರಂದು ಭಾರತಕ್ಕೆ ವಾಪಸ್ಸಾಗಲಿದ್ದೇನೆ’ ಎಂದು ಶಿವರಾಜಕುಮಾರ್ ಹೇಳಿದ್ದಾರೆ.

ಭೂಮಿಕಾ

Recent Posts

ಪ್ರಯಾಣಿಕರಿಗೆ ಗುಡ್‌ನ್ಯೂಸ್‌ ಕೊಟ್ಟ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಬಸ್‌ ಟಿಕೆಟ್‌ ದರವನ್ನು ಏರಿಕೆ ಮಾಡುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು…

32 mins ago

ಜೂಜಾಡುವ ವೇಳೆ ಪೊಲೀಸರ ದಾಳಿ: ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ಹಾಸನ: ಜೂಜಾಡುವ ವೇಲೆ ಪೊಲೀಸರು ದಾಳಿ ನಡೆಸಿದ ಪರಿಣಾಮ ತಪ್ಪಿಸಿಕೊಂಡು ಓಡುವ ವೇಳೆ ಆಯತಪ್ಪಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ…

33 mins ago

ಮೈಸೂರಿನಲ್ಲಿ ಸಂಭ್ರಮದಿಂದ ರಂಜಾನ್‌ ಹಬ್ಬ ಆಚರಣೆ

ಮೈಸೂರು: ನಾಡಿನಾದ್ಯಂತ ರಂಜಾನ್‌ ಹಬ್ಬದ ಸಂಭ್ರಮ ಮನೆಮಾಡಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ…

1 hour ago

ತೆಲುಗು ಚಿತ್ರರಂಗದ ಖ್ಯಾತ ನಟರ ವಿರುದ್ಧ ಪ್ರಕಾಶ್‌ ರಾಜ್‌ ಕಿಡಿ: ಕಾರಣ ಇಷ್ಟೇ

ಬೆಂಗಳೂರು: ಧುರಂಧರ್‌-2 ಚಿತ್ರವನ್ನು ಹಾಡಿ ಹೊಗಳಿರುವ ತೆಲುಗು ಚಿತ್ರರಂಗದ ಖ್ಯಾತ ನಟರ ವಿರುದ್ಧ ಪ್ರಕಾಶ್‌ ರಾಜ್‌ ಕಿಡಿಕಾರಿದ್ದಾರೆ. ತೆಲುಗಿನ ಖ್ಯಾತ…

2 hours ago

ರಾಜ್ಯದಲ್ಲಿ ಇದ್ದಕ್ಕಿದ್ದಂತೆ ಸುರಿದ ಮಳೆ: ಅಪಾರ ಪ್ರಮಾಣದ ಬೆಳೆ ಹಾನಿ

ಬೆಂಗಳೂರು: ರಾಜ್ಯದಲ್ಲಿ ಇದಕ್ಕಿದ್ದಂತೆ ಆಲಿಕಲ್ಲು ಸಹಿತ ವ್ಯಾಪಕ ಮಳೆ ದಾಖಲಾಗಿದ್ದರಿಂದ ಮತ್ತೆ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಕೂಡಲೇ…

2 hours ago

ಕುಶಾಲನಗರ: ಮನೆ ಬಳಿ ನಿಲ್ಲಿಸಿದ್ದ ಆಟೋ ಜಖಂಗೊಳಿಸಿದ ಕಾಡಾನೆ

ಕುಶಾಲನಗರ: ಒಂಟಿಸಲಗವೊಂದು ಮನೆ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ದಾಳಿ ನಡೆಸಿ ಜಖಂಗೊಳಿಸಿರುವ ಘಟನೆ ಕುಶಾಲನಗರದ ನೆಲ್ಲಿ ಹುದಿಕೇರಿ…

3 hours ago