sharan singing song
ಶರಣ್ ಬರೀ ನಟರಾಗಿಯಷ್ಟೇ ಅಲ್ಲ, ಗಾಯಕರಾಗಿಯೂ ಜನಪ್ರಿಯರು. ‘ರಾಜ ರಾಜೇಂದ್ರ’ ಚಿತ್ರದ ‘ಮಧ್ಯಾಹ್ನ ಕನಸಿನಲ್ಲಿ …’, ‘ವಜ್ರಕಾಯ’ ಚಿತ್ರದ ‘ತೂಕಟ ಗಡಬಡ …’, ‘ಬುಲೆಟ್ ಬಸ್ಯ’ ಚಿತ್ರದ ‘ಕಾಲ್ ಕೆಜಿ ಕಳ್ಳೇಕಾಯ್ …’, ‘ದನ ಕಾಯೋನು’ ಚಿತ್ರದ ಹಾಲು ಕುಡಿದ ಮಕ್ಳೇ …’ ಮುಂತಾದ ಹಾಡುಗಳನ್ನು ಅವರು ಹಾಡಿದ್ದಾರೆ.
ಈಗ ಬಹಳ ದಿನಗಳ ನಂತರ ಹಾಡೊಂದನ್ನು ಅವರು ಹಾಡಿದ್ದಾರೆ. ಧರ್ಮ ಕೀರ್ತಿರಾಜ್ ಅಭಿನಯದ ‘ಟಕೀಲಾ’ ಚಿತ್ರದ ಶೀರ್ಷಿಕೆ ಗೀತೆಯಾದ ‘ಟಕೀಲಾ ಟಕೀಲಾ …’ ಎಂಬ ಹಾಡನ್ನು ಹಾಡಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ರಚಿಸಿದ್ದಾರೆ.
‘ಟಕೀಲಾ’ ಸುಮಾರು ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಚಿತ್ರ. ಈ ಹಿಂದೆ ‘ವಿದ್ಯಾರ್ಥಿ’, ‘ಮುನಿಯ’, ‘ಜನ್ ಧನ್’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಮರಡಿಹಳ್ಳಿ ನಾಗಚಂದ್ರ ಈ ಚಿತ್ರವನ್ನು ಶ್ರೀ ಸಿದ್ದಿವಿನಾಯಕ ಫಿಲಂಸ್ ಬ್ಯಾನರ್ ಅಡಿ ನಿರ್ಮಿಸಿದರೆ, ‘ಮೀಸೆ ಚಿಗುರಿದಾಗ’, ‘ಹೂಂ ಅಂತೀಯ ಉಹೂಂ ಅಂತೀಯ’ ಚಿತ್ರಗಳನ್ನು ನಿರ್ದೇಶಿಸಿರುವ ಹಿರಿಯ ಸ್ಥಿರಚಿತ್ರ ಛಾಯಾಗ್ರಾಹಕ ಪ್ರವೀಣ್ ನಾಯಕ್, ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ:- ನಿರಂಜನ್ ಸುಧೀಂದ್ರ ಜೊತೆಗೆ ‘ನೆನಪಿರಲಿ’ ಪ್ರೇಮ್; ʼಸ್ಪಾರ್ಕ್ʼಗೆ ಹೊಸ ಸೇರ್ಪಡೆ
ಈಗಾಗಲೇ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದೆ. ಶರಣ್ ಹಾಡಿರುವ ಹಾಡಿನ ಮೂಲಕ ಚಿತ್ರದ ಪ್ರಚಾರದ ಕೆಲಸಗಳು ಶುರುವಾಗಲಿವೆ.
‘ಟಕೀಲಾ’ ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಮತ್ತು ನಿಖಿತಾ ಸ್ವಾಮಿ ನಾಯಕ-ನಾಯಕಿಯಾಗಿ ಅಭಿನಯಿಸಿದರೆ, ಮಿಕ್ಕಂತೆ ನಾಗೇಂದ್ರ ಅರಸ್, ಕೋಟೆ ಪ್ರಭಾಕರ್, ಸುಮನ್ ಶರ್ಮ, ಅರುಣ್ ಮೇಸ್ಟ್ರು ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಪಿ.ಕೆ.ಹೆಚ್. ದಾಸ್ ಛಾಯಾಗ್ರಹಣ ಮತ್ತು ಟಾಪ್‌ಸ್ಟಾರ್ ರೇಣು ಅವರ ಸಂಗೀತವಿದೆ.
ಈ ಚಿತ್ರಕ್ಕಾಗಿ ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.
ಜೀಪ್ ವ್ಯವಸ್ಥೆ ಮಾಡುವಂತೆ ತಹಸಿಲ್ದಾರ್‌ಗೆ ಮನವಿ ಮಾಡಿದ ಬಿಇಒ ಹನೂರು: ಹನೂರು ಶೈಕ್ಷಣಿಕ ವಲಯದ ಪಚ್ಚೆದೊಡ್ಡಿ ಗ್ರಾಮದ ಶಾಲೆಗೆ ಕ್ಷೇತ್ರ…
ಮಂಜು ಕೋಟೆ ಪ್ರತಿನಿತ್ಯ ಅಧಿಕಾರಿಗಳ ಬಳಿ ಅಲೆದಾಡುತ್ತಿರುವ ನೌಕರರು; ಕುಟುಂಬ ನಿರ್ವಹಣೆಗೆ ಪರದಾಟ ಎಚ್.ಡಿ.ಕೋಟೆ: ಪಟ್ಟಣದ ಪುರಸಭೆಯ ಪೌರಕಾರ್ಮಿಕರು ಮತ್ತು…
ಪುಸ್ತಕ ಪ್ರಿಯರಿಗಾಗಿ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ ಮೈಸೂರು: ವಿಶ್ವಕೋಶ, ಶಬ್ಧಕೋಶ, ಇಂಗ್ಲಿಷ್-ಕನ್ನಡ ನಿಘಂಟು, ಕನ್ನಡ-ಇಂಗ್ಲಿಷ್ ನಿಘಂಟು, ಕನ್ನಡ ಗ್ರಂಥಮಾಲೆ,…
ಕೆ.ಬಿ.ರಮೇಶನಾಯಕ ಅಕ್ಟೋಬರ್ ತಿಂಗಳ ಅಂತ್ಯಕ್ಕೆ ಶೇ.೮೨.೯೭ರಷ್ಟು ತೆರಿಗೆ ಸಂಗ್ರಹ ಮೈಸೂರು: ಗುತ್ತಿಗೆದಾರರಿಗೆ ಹಣ ಪಾವತಿಸಲಾಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು…
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…