ಮನರಂಜನೆ

ಗಡಿನಾಡ ಪ್ರೇಮಕಥೆಗೆ ಶರಣ್, ಧನಂಜಯ್, ನವೀನ್‍ ಬೆಂಬಲ

ತರುಣ್‍ ಸುಧೀರ್ ನಿರ್ಮಾಣದ ‘ಏಳುಮಲೆ’ ಚಿತ್ರವು ಇದೇ ಸೆ.05ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಧನಂಜಯ್‍, ನವೀನ್‍ ಶಂಕರ್ ಮತ್ತು ಶರಣ್‍ ವಿಶೇಷ ಅತಿಥಿಗಳಾಗಿ ಬಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದ ನಿಜವಾದ ಹೀರೋ ತರುಣ್ ಎಂದ ಶರಣ್‍, ‘ಅವರು ಒಂದು ಸಿನಿಮಾದ ಆಯ್ಕೆ ಹೇಗಿದೆ ಅನ್ನೋದಕ್ಕೆ ನನ್ನ ಜರ್ನಿ ಸಾಕ್ಷಿ. ಅವರು ನನ್ನ ಸಿನಿಮಾಗಳ ಕಥೆ ಆಯ್ಕೆ ಮಾಡುತ್ತಾರೆ. ‘ಏಳುಮಲೆ’ ಟ್ರೇಲರ್ ನೋಡಿದರೆ ಸಿನಿಮಾ ನೋಡಲೇ ಬೇಕು ಎನಿಸುತ್ತದೆ. ಇದು ಕಂಟೆಂಟ್ ಸಿನಿಮಾ. ಈ ಚಿತ್ರ ದೊಡ್ಡ ಹಿಟ್ ಆಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ತರಹದ ಪ್ರೇಮಕಥೆ ನೋಡದೆ ಬಹಳ ದಿನಗಳೇ ಆಗಿದ್ದವು ಎಂದ ಧನಂಜಯ್‍, ‘ಈ ತಂಡದಲ್ಲಿ ಪ್ರಾಮಾಣಿಕತೆ ಎದ್ದು ಕಾಣಿಸುತ್ತಿದೆ. ಆ ಪ್ರಾಮಾಣಿಕತೆಯೇ ಈ ಸಿನಿಮಾ ಗೆಲ್ಲಿಸುತ್ತದೆ ಎಂಬ ನಂಬಿಕೆ ಇದೆ. ಸಿನಿಮಾವನ್ನೇ ನಂಬಿಕೆಕೊಂಡು ಸಿನಿಮಾದಿಂದ ದುಡಿದು ಮತ್ತೆ ಸಿನಿಮಾ ಮಾಡುವುದು ಸವಾಲು. ಅದಕ್ಕಾಗಿ ಪ್ಯಾಶನ್‍, ರಿಸ್ಕ್ ತೆಗೆದುಕೊಳ್ಳಬೇಕು. ಅದನ್ನು ತರುಣ್ ಮಾಡುತ್ತಿದ್ದಾರೆ’ ಎಂದರು.

ಚಿತ್ರದ ನಿರ್ಮಾಪಕ ತರುಣ್ ಸುಧೀರ್ ಮಾತನಾಡಿ, ‘ಒಬ್ಬ ನಿರ್ದೇಶಕನಾಗಿ ನನಗೆ ಏನು ಸಂಭಾವನೆ ಬರುತ್ತದೆ ಅದನ್ನು ಇಟ್ಕೊಂಡು ಸಿನಿಮಾ ಮಾಡುತ್ತೇನೆ. ಅದಕ್ಕೆ ಅಟ್ಲಾಂಟಾ ನಾಗೇಂದ್ರ ಅವರು ನೈತಿಕ ಬೆಂಬಲವಾಗಿ ನಿಲ್ಲುತ್ತಾರೆ.‌ ತುಂಬಾ ಶ್ರಮ ಹಾಕಿ ಸಿನಿಮಾ ಮಾಡಿದ್ದೇವೆ. ಎಲ್ಲರೂ ಪ್ರೀತಿಯಿಂದ ಈ ಚಿತ್ರ ಮಾಡಿದ್ದಾರೆ. ಇದು ಪುನೀತ್ ಸಿನಿಮಾ. ಇದು ಅವನ ಪ್ರಾಮಾಣಿಕತೆ. ‘ಏಳುಮಲೆ’ ಪ್ರೀತಿಯೇ ಪರಮ ಶ್ರೇಷ್ಠ ಎಂದು ಹೇಳುತ್ತದೆ. ಇದನ್ನು ನಾವು ಥ್ರಿಲ್ಲರ್ ಅಂಶಗಳ ಮೂಲಕ ಹೇಳುತ್ತಿದ್ದೇವೆ. ಈ ಚಿತ್ರ ನಿರಾಶೆ ಮಾಡುವುದಿಲ್ಲ’ ಎಂದರು.

‘ಏಳುಮಲೆ’ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು, ರಕ್ಷಿತಾ ಸಹೋದರ ರಾಣಾ ನಾಯಕನಾಗಿ, ‘ಮಹಾನಟಿ’ ಖ್ಯಾತಿಯ ಪ್ರಿಯಾಂಕಾ ಆಚಾರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಡಿ.ಇಮ್ಮಾನ್ ಸಂಗೀತವಿದೆ.

ಆಂದೋಲನ ಡೆಸ್ಕ್

Recent Posts

ಅಂಬೇಡ್ಕರ್ ದೇಶ ಕಂಡ ಅಪರೂಪದ ನಾಯಕ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅಂಬೇಡ್ಕರ್ ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ…

27 mins ago

ದರ್ಶನ್‌ಗೆ ಫಿಸಿಯೊಥೆರಪಿ ಸ್ಟಾಪ್‌ ಮಾಡಿದ ವೈದ್ಯರು

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ದರ್ಶನ್‌ಗೆ ಬೆನ್ನುನೋವು ಮಾಯವಾಯ್ತಾ ಎಂಬ ಕುತೂಹಲ ಮನೆ ಮಾಡಿದೆ. ದರ್ಶನ್‌…

52 mins ago

ಶಾರುಖ್‌ ಖಾನ್‌ ಪುತ್ರನಿಂದ ದುರ್ವತನೆ ಪ್ರಕರಣ: ಡಿಜಿ & ಡಿಜಿಪಿಗೆ ದೂರು ಸಲ್ಲಿಕೆ

ಬೆಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಬೆಂಗಳೂರಿನ ಪಬ್‌ನಲ್ಲಿ ಮಿಡಲ್‌ ಫಿಂಗಲ್‌ ತೋರಿಸಿ ದುರ್ವತನೆ ಮೆರೆದಿದ್ದು,…

1 hour ago

1000ಕ್ಕೂ ಹೆಚ್ಚು ಇಂಡಿಗೋ ವಿಮಾನಗಳ ಹಾರಾಟ ರದ್ದು: ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ ಪ್ರಯಾಣಿಕರು

ನವದೆಹಲಿ: ಶನಿವಾರ ಐದನೇ ದಿನವೂ ಇಂಡಿಗೋ ವಿಮಾನ ಹಾರಾಟ ಅಡಚಣೆಗಳು ಮುಂದುವರೆದಿದ್ದು, ದೇಶಾದ್ಯಂತ ಹಲವಾರು ವಿಮಾನಗಳು ರದ್ದಾಗಿವೆ. ಕಳೆದ ನಾಲ್ಕು…

2 hours ago

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…

2 hours ago

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

3 hours ago