ಮತ್ತೊಂದು ಚಿತ್ರ ‘ನಿರ್ಭಯ 2’

ದೆಹಲಿಯಲ್ಲಿ ನಡೆದ ಕ್ರೌರ್ಯಕ್ಕೆ ಕಾರಣಕರ್ತರಾದ ಅಪರಾಧಿಗಳು ಅದಾಗಲೇ ಗಲ್ಲು ಶಿಕ್ಷೆಗೆ ಒಳಗಾಗಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ಚಲನಚಿತ್ರಗಳಾಗಿವೆ. ಇದೀಗ ‘ನಿರ್ಭಯ 2’. ಇದು ಆ ಘಟನೆಯ ಹಿನ್ನೆಲೆಯದೋ, ಅದಕ್ಕೆ ಪೂರಕ ಕಥಾವಸ್ತುವೋ ಮುಂದೆ ತಿಳಿಯಲಿದೆ.

 

 

ಈ ಚಿತ್ರವನ್ನು ಬಾಲಕೃಷ್ಣ ಕೆ.ಆರ್ ಅವರಿಗಾಗಿ ರಾಜು ಕುಣಿಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಅದರ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ, ಎರಡು ಹಾಡುಗಳ ಚಿತ್ರೀಕರಣ ಬಾಕಿಯಿದೆ, ಸದ್ಯದಲ್ಲೇ ಆ ಚಿತ್ರೀಕರಣ ಆರಂಭವಾಗಲಿದೆ ಎಂದಿದೆ ಚಿತ್ರತಂಡ.

ಡಾ.ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಸಂತೋಷ್ ನಾಯಕ್ ಗೀತರಚನೆ, ಆಕಾಶಪರ್ವ ಸಂಗೀತ ಸಂಯೋಜನೆ, ರಂಗ್‌ಮಂಜು ಸಂಭಾಷಣೆ, ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ ಚಿತ್ರಕ್ಕಿದೆ. ಮೋಕ್ಷಿತ ಪೈ, ಅರ್ಜುನ್ ಕೃಷ್ಣ, ಹರೀಶ್ ಹೆಚ್.ಆರ್., ಕುಸುಮ, ರಾಧಾರಾಮಚಂದ್ರ, ಅಶೋಕ್, ಗಣೇಶ್ ರಾವ್, ಹನುಮಂತೇಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.

 

‘ನಮ್ಮ ಭಾರತ’

ಸಾಮಾನ್ಯವಾಗಿ ಸಂಕ್ರಾಂತಿ ವೇಳೆ ಕನ್ನಡದ ಜೊತೆ, ತಮಿಳು, ತೆಲುಗು, ಹಿಂದಿ, ಮಲಯಾಳ ಚಿತ್ರಗಳ ಬಿಡುಗಡೆಯ ಭರಾಟೆ ಇರುತ್ತದೆ. ಆದರೆ ಈ ಬಾರಿ ಹಾಗಿಲ್ಲ. ಕೊರೊನಾ ವೈರಾಣು ಅದಕ್ಕೆ ತಡೆಯಾಗಿದೆ.

 

ಚಿತ್ರಮಂದಿರಗಳಲ್ಲಿ ಪ್ರತಿಶತ ಐವತ್ತರಷ್ಟು ಮಾತ್ರ ಪ್ರವೇಶ ಎನ್ನುವ ಸರ್ಕಾರದ ಆದೇಶವೂ ದುಬಾರಿ ವೆಚ್ಚದ ಚಿತ್ರಗಳ ಬಿಡುಗಡೆಗೆ ಅಡ್ಡಿಯಾಗಿದೆ. ಆದರೆ ಕನ್ನಡದ ಮಕ್ಕಳ ಚಿತ್ರವೊಂದು ಈ ವಾರ ತೆರೆಗೆ ಬರುತ್ತಿದೆ. ರಾಷ್ಟ್ರಧ್ವಜದ ಮಹತ್ವವನ್ನು ಸಾರುವ ಚಿತ್ರ ಇದು ಎನ್ನಲಾಗಿದ್ದು, ಕುಮಾರಸ್ವಾಮಿ ನಿರ್ಮಿಸಿ, ಛಾಯಾಗ್ರಹಣ ಮಾಡಿ, ನಿರ್ದೇಶಿಸಿರುವ ಚಿತ್ರವಿದು. ವಾಗೀಶ್, ಮಾ.ಪ್ರಜ್ವಲ್, ಶ್ಯಾವಂದಪ್ಪ, ಅಮಲ, ತಿಮ್ಮಶೆಟ್ಟಿ, ಗೋಪಿನಾಥ್, ಕ್ರಿಶಾ ಪ್ರಕಾಶ್ ಮುಂತಾದವರಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ರವಿಶಂಕರ್ ಮಿರ್ಲೆ, ಸಂಗೀತ ಸಂಯೋಜನೆ, ಕುಮಾರ ಈಶ್ವರ್, ಸಂಕಲನ ಸಂಜೀವ ರೆಡ್ಡಿ ಅವರದು.

× Chat with us