ಸಂಸಾರ ಸಾಕೆಂದ ನಟಿ ಸಮಂತಾ ಅಕ್ಕಿನೇನಿ

ಮೈಸೂರು: ನಾಲ್ಕು ವರ್ಷಗಳ ಹಿಂದೆ ಅಕ್ಟೋಬರ್ ಮಾಸದಲ್ಲೇ ಸಮಂತಾ ಅಕ್ಕಿನೇನಿ, ನಾಗಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 2015ರಿಂದ ಇದ್ದ ಒಡನಾಟಕ್ಕೆ ವಿವಾಹ ಎನ್ನುವ ಅಧಿಕೃತ ಮುದ್ರೆ ಬಿದ್ದು ಸಮಂತಾ ಶ್ರೀಮತಿಯಾಗಿದ್ದರು.

ನಾಗ ಚೈತನ್ಯ ತುಂಬು ಸಂತೋಷದಿಂದ ಸಂಸಾರಿಯಾಗಿದ್ದರು. ಆರಂಭದಲ್ಲಿ ಹತ್ತು ಜನ ಮೆಚ್ಚುವಂತೆ ಜೊತೆ ಜೊತೆಯಾಗಿಯೇ ಬಾಳುವೆ ಮಾಡುತ್ತಿದ್ದ ಜೋಡಿಯ ನಡುವೆ ಸಣ್ಣ ಬಿರುಕು ಬಂತು. ಸಂಸಾರದಲ್ಲಿ ಬಿರುಕು ಸಾಮಾನ್ಯ. ಇದು ದೊಡ್ಡದಾಗದಂತೆ ನೋಡಿಕೊಳ್ಳುವುದು ಇಬ್ಬರ ಕರ್ತವ್ಯವಾಗಿತ್ತು. ಆದರೆ ಅದು ಸಾಧ್ಯವಾಗದೇ ಇದೀಗ ದೂರಾಗುವ ನಿರ್ಧಾರಕ್ಕೆ ಬಂದಿದೆ ಈ ತೆಲುಗು ಜೋಡಿ.

ಸಮಂತಾ ತನ್ನ ಇನ್‌ಸ್ಟಾ ಗ್ರಾಂ ಅಕೌಂಟ್‌ನಲ್ಲಿ ಅಧಿಕೃತವಾಗಿ ಈ ನಿರ್ಧಾರ ಪ್ರಕಟಿಸಿದ್ದು, ಬಂಧುಗಳು, ಹಿತೈಷಿಗಳು, ಅಭಿಮಾನಿಗಳು ಜೊತೆಗಿರಬೇಕು ಎಂದು ಕೋರಿಕೊಂಡಿದ್ದಾರೆ. ಅಲ್ಲಿಗೆ ಸಮಂತಾ ಮತ್ತು ನಾಗ ಚೈತನ್ಯ ಬದುಕಿನ ಒಂದು ಅಧ್ಯಾಯಕ್ಕೆ ತೆರೆ ಬಿದ್ದಿದ್ದು, ನಾಳೆಗಳ ಲೆಕ್ಕದಲ್ಲಿ ಅವರಿಬ್ಬರೂ ಸ್ನೇಹಿತರಷ್ಟೇ.

× Chat with us