ಮನರಂಜನೆ

ಆಗಸ್ಟ್‌ನಿಂದ ಸಲಾರ್ ಪಾರ್ಟ್ 2: ʼಶೌರ್ಯಂಗ ಪರ್ವಂ’ ಶುರು?

ಹೊಂಬಾಳೆ ಫಿಲಂಸ್‍ ನಿರ್ಮಾಣದ, ಪ್ರಶಾಂತ್‍ ನೀಲ್‍ ನಿರ್ದೇಶನದ ಪ್ಯಾನ್‍ ಇಂಡಿಯಾ ಚಿತ್ರ ‘ಸಲಾರ್ ಪಾರ್ಟ್‍ 1: ಸೀಸ್‍ಫೈರ್’ ಚಿತ್ರದ ಕೊನೆಯಲ್ಲಿ, ಆ ಚಿತ್ರ ಇನ್ನಷ್ಟು ಮುಂದುವರೆಯುವುದು ಎಂದು ಹೇಳಲಾಗಿತ್ತು. ಅದಕ್ಕೆ ಸರಿಯಾಗಿ, ಚಿತ್ರದ ಹೆಸರು ‘ಸಲಾರ್ ಪಾರ್ಟ್ 2: ಶೌರ್ಯಂಗ ಪರ್ವಂ’ ಎಂದು ಸಹ ತೋರಿಸಲಾಗಿತ್ತು. ಆದರೆ, ಆ ಚಿತ್ರ ಯಾವಾ ಪ್ರಾರಂಭ ಮಾಹಿತಿ ಇರಲಿಲ್ಲ. ಮೂಲಗಳ ಪ್ರಕಾರ, ಆಗಸ್ಟ್ ತಿಂಗಳಿನಿಮದ ‘ಸಲಾರ್‍ ಪಾರ್ಟ್ 2: ಶೌರ್ಯಂಗ ಪರ್ವಂ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

‘ಸಲಾರ್‍’ ಚಿತ್ರ ಪ್ರಾರಂಭವಾದಾಗ ಒಂದೇ ಚಿತ್ರವಾಗಿತ್ತು. ಆದರೆ, ಬೆಳೆಯುತ್ತಾ ಹೋದಂತೆಲ್ಲಾ ಎರಡು ಚಿತ್ರವಾಯಿತು. ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಘೋಷಿಸಿದ್ದರು. ಮೊದಲ ಭಾಗಕ್ಕೆ ‘ಸಲಾರ್‍ ಪಾರ್ಟ್‍ 1: ಸೀಸ್‍ಫೈರ್‍’ ಎಂಬ ಹೆಸರನ್ನು ನೀಡಲಾಗಿತ್ತು. ಎರಡನೆಯ ಭಾಗದ ಹೆಸರೇನಿರಬಹುದು ಎಂಬ ರಹಸ್ಯವನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಮೊದಲ ಭಾಗದ ಕ್ಲೈಮ್ಯಾಕ್ಸ್ನಲ್ಲಿ ಚಿತ್ರತಂಡ ಈ ಪ್ರಶ್ನೆಗೆ ಉತ್ತರಿಸಿದ್ದು, ಎರಡನೆಯ ಭಾಗಕ್ಕೆ ‘ಸಲಾರ್‍ ಪಾರ್ಟ್ 2: ಶೌರ್ಯಂಗ ಪರ್ವಂ’ ಎಂಬ ಹೆಸರನ್ನು ಇಡಲಾಗಿದೆ.

‘ಸಲಾರ್‍’ನ ಮುಂದುವರೆದ ಭಾಗವೇನೋ ಬರುತ್ತದೆ ಎನ್ನುವುದು ಸರಿ. ಆದರೆ, ಯಾವಾಗ? ಎಂಬ ಪ್ರಶ್ನೆ ಕೇಳಿಬಂದಿತ್ತು. ಏಕೆಂದರೆ, ‘ಕೆಜಿಎಫ್‍ 2’ ನಂತರ ‘ಕೆಜಿಎಫ್‍ 3’ ಎಂಬ ಇನ್ನೊಂದು ಚಿತ್ರವನ್ನು ಪ್ರಶಾಂತ್‍ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಜೊತೆಗೆ ಜ್ಯೂನಿಯರ್‍ ಎನ್‍.ಟಿ.ಆರ್‍ ಅಭಿನಯದ ‘ಡ್ರ್ಯಾಗನ್‍’ ಸಹ ನಿರ್ದೇಶಿಸಬೇಕಿದೆ. ಈ ಮೂರು ಚಿತ್ರಗಳ ಪೈಕಿ ಮೊದಲು ಯಾವುದು ಎಂಬ ಪ್ರಶ್ನೆ ಸಹಜವಾಗಿಯೇ ಇದೆ.

ಮೂಲಗಳ ಪ್ರಕಾರ, ಮೊದಲು ‘ಸಲಾರ್‍ ಪಾರ್ಟ್ 2: ಶೌರ್ಯಂಗ ಪರ್ವಂ’ ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರಂತೆ ಪ್ರಶಾಂತ್‍. ಈಗಾಗಲೇ ಆ ಚಿತ್ರದ ಒಂದಿಷ್ಟು ದೃಶ್ಯಗಳ ಚಿತ್ರೀಕರಣ ಮಾಡಿಟ್ಟುಕೊಂಡಿದ್ದಾರಂತೆ. ಆಗಸ್ಟ್ನಿಂದ ಎಂಟು ತಿಂಗಳಲ್ಲಿ ಚಿತ್ರೀಕರಣ ಸಂಪೂರ್ಣ ಮುಗಿಸಿ, ಆ ನಂತರ ‘ಡ್ರ್ಯಾಗನ್‍’ನತ್ತ ಹೋಗುತ್ತಾರೆ ಎಂಬ ಸುದ್ದಿ ಇದೆ. ಈಗಾಗಲೇ ಸದ್ದಿಲ್ಲದೆ ರಾಮೋಜಿ ಫಿಲಂಸ ಸಿಟಿಯಲ್ಲಿ ಸೆಟ್‍ ನಿರ್ಮಾಣ ಶುರುವಾಗಿದ್ದು, ಸದ್ಯದಲ್ಲೇ ‘ಸಲಾರ್‍ ಪಾರ್ಟ್ 2: ಶೌರ್ಯಂಗ ಪರ್ವಂ’ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗುತ್ತದಂತೆ.

‘ಸಲಾರ್‍ ಪಾರ್ಟ್ 2: ಶೌರ್ಯಂಗ ಪರ್ವಂ’ ಚಿತ್ರದಲ್ಲಿ ಪ್ರಭಾಸ್‍, ಪೃಥ್ವಿರಾಜ್‍ ಸುಕುಮಾರನ್‍, ಶ್ರುತಿ ಹಾಸನ್‍ ಮುಂತಾದವರು ನಟಿಸಿದ್ದು, ಹೊಂಬಾಳೆ ಫಿಲಂಸ್‍ನಡಿ ಈ ಚಿತ್ರವನ್ನು ವಿಜಯ್‍ ಕಿರಗಂದೂರು ನಿರ್ಮಿಸುತ್ತಿದ್ದಾರೆ.

ಭೂಮಿಕಾ

Recent Posts

ಮಂಡ್ಯ | ಕೊಬ್ಬರಿ ಶೆಡ್‌ಗೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ಕೊಬ್ಬರಿ ನಾಶ

ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…

39 mins ago

ಹನೂರು | ಅಲಗುಮೂಲೆ ಅರಣ್ಯದಲ್ಲಿ ಬೆಂಕಿ ; ಧಗಧಗಿಸಿದ ಕಾಡು

ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…

1 hour ago

ತಂಬಾಕು ಮುಕ್ತ ಗ್ರಾಮಕ್ಕಾಗಿ ಗುಲಾಬಿ ಚಳುವಳಿ

ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…

2 hours ago

ಆಂಬುಲೆನ್ಸ್‌ ತುರ್ತು ಮೀಸಲು ಮಾರ್ಗಕ್ಕೆ ಜಯಾ ಬಚ್ಚನ್‌ ಒತ್ತಾಯ

ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…

2 hours ago

ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು

ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…

2 hours ago

ಏಕತಾ ಮಾಲ್‌ ನಿರ್ಮಾಣಕ್ಕೆ ಹೈಕೋರ್ಟ್ ತಡೆ‌

ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…

2 hours ago