ಕಳೆದ ವಾರವಷ್ಟೇ ರಾಮ್ ಅಭಿನಯದ ‘ದಿಲ್ಮಾರ್’ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ರಾಮ್ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತವಾದರೂ, ಚಿತ್ರ ಅಷ್ಟೇನೂ ಸದ್ದು ಮಾಡಲಿಲ್ಲ. ಹೀಗಿರುವಾಗಲೇ ರಾಮ್, ‘ರೂಬಿ’ ಎಂಬ ಇನ್ನೊಂದು ಹೊಸ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ.
‘ರೂಬಿ’ ಚಿತ್ರವನ್ನು ರಘು ಕೋವಿ ಬರೆದು ನಿರ್ದೇಶಿಸಿದ್ದಾರೆ. ಈ ಹಿಂದೆ ‘ಕೃಷ್ಣ ಲೀಲಾ’, ‘ಮುಂಗಾರು ಮಳೆ 2’ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿರುವ ರಘುಗೆ ಇದು ನಿರ್ದೇಶಕರಾಗಿ ಮೊದಲ ಚಿತ್ರ. ಈ ಚಿತ್ರವನ್ನು ಹಿಂದಿಯ ‘ಓ ಮೈ ಗಾಡ್ 2’ ನಿರ್ಮಿಸಿದ ನಿಖುಲ್ ದೇಸಾಯಿ ಅವರ ಇವಾನ್ ಫಿಲ್ಮ್ಸ್ ನಿರ್ಮಿಸುತ್ತಿದ್ದು, ಶಿವರಾಜ್ ಅವರ ನವಿಶಾ ಫಿಲ್ಮ್ಸ್ ಸಹಯೋಗದೊಂದಿಗೆ ಮೊದಲ ಬಾರಿ ಕನ್ನಡ ಚಿತ್ರ ಎಂಟ್ರಿ ಕೊಡುತ್ತಿದೆ. ಚಿತ್ರಕ್ಕೆ ‘Excuse Me’ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದ ಆರ್.ಪಿ. ಪಟ್ನಾಯಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಚಿತ್ರದ ಮೋಷನ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ಇದನ್ನು ಓದಿ: ಜನವರಿ.23ರಂದು ‘ದುನಿಯಾ’ ವಿಜಯ್ ಅಭಿನಯದ ‘ಲ್ಯಾಂಡ್‍ಲಾರ್ಡ್’ ಬಿಡುಗಡೆ
ಹೈದರಾಬಾದ್‍ನಲ್ಲಿ ನಡೆದ ನೈಜ ಘಟನೆ ಈ ಚಿತ್ರಕ್ಕೆ ಸ್ಫೂರ್ತಿ ಎನ್ನುವ ರಘು ಕೋವಿ, ‘ಒಂದು ಪ್ರೇಮಕಥೆಯನ್ನು ಸಂಗೀತದ ಮೂಲಕ ಹೇಳಲು ಸಾಧ್ಯವಿದೆ. ಅದನ್ನು ಆರ್.ಪಿ.ಪಟ್ನಾಯಕ್ ಅವರಂತಹ ದೊಡ್ಡ ಸಂಗೀತ ನಿರ್ದೇಶಕ ಸಾಧ್ಯವಾಗಿಸಿದ್ದಾರೆ. ನಾಯಕ ರಾಮ್ ಕಥೆ ಮತ್ತು ಕಲೆ ಬಗ್ಗೆ ಆಸಕ್ತಿ ಇರುವ ವ್ಯಕ್ತಿ. ಚಿತ್ರದಲ್ಲಿ ಐದು ಹಾಡುಗಳು ಇವೆ. ಶೇ.50ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ’ ಎಂದು ಹೇಳಿದರು.
ನಟ ರಾಮ್ ಮಾತನಾಡಿ, ‘ರಘು ಅವರು ಬಂದು ಕಥೆ ಹೇಳಿದಾಗ ನನಗೆ ತುಂಬಾ ಇಷ್ಟವಾಯ್ತು. ನನ್ನ ಪಾತ್ರ ಹಾಗೂ ಇಡೀ ತಂಡ ಚೆನ್ನಾಗಿದೆ. ಆರ್.ಪಿ ಅವರು ಸಂಗೀತ ಸಂಯೋಜಿಸುತ್ತಿರುವ ವಿಷಯ ಕೇಳಿ ಖುಷಿಯಾಯಿತು. ನಿರ್ಮಾಪಕರು ಬಹಳ ಪ್ರೀತಿಯಿಂದ ಚಿತ್ರಕ್ಕೆ ಏನು ಬೇಕೋ ಅವೆಲ್ಲವನ್ನೂ ಕೊಟ್ಟಿದ್ದಾರೆ’ ಎಂದರು.
ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್ ಮಾತನಾಡಿ, ‘ಕಥೆ ತುಂಬಾ ಚೆನ್ನಾಗಿದೆ. ಇದು ಕನ್ನಡ ಚಿತ್ರರಂಗದಲ್ಲಿ ಅತ್ಯುತ್ತಮ ಸಿನಿಮಾ ಆಗಲಿದೆ. ರಾಮ್-ವೈಭವಿ ರಾಷ್ಟ್ರಪ್ರಶಸ್ತಿ ಸಿಗುವಷ್ಟು ಚೆನ್ನಾಗಿ ನಟಿಸಿದ್ದಾರೆ. ಈ ಸಂಗೀತಮಯ ಚಿತ್ರದ ಭಾಗವಾಗಿ ಇರುವುದು ನನಗೆ ತುಂಬಾ ಖುಷಿ ಇದೆ’ ಎಂದರು.
‘ರೂಬಿ’ ಚಿತ್ರಕ್ಕೆ ‘ರಾಜಕುಮಾರ’ ಮತ್ತು ‘ಯುವರತ್ನ’ ಚಿತ್ರಗಳ ಛಾಯಾಗ್ರಾಹಕ ವೆಂಕಟೇಶ್ ಅಂಗುರಾಜ್ ಛಾಯಾಗ್ರಹಣ ಮಾಡುತ್ತಿದ್ದು, ಸಂಕಲನದ ಜವಾಬ್ದಾರಿಯನ್ನು ಸುರೇಶ್ ಅರಸ್ ಹೊತ್ತಿದ್ದಾರೆ.
ಪ್ರಶಾಂತ್ ಎನ್ ಮಲ್ಲಿಕ್ ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…
ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…
ಮಹಾದೇಶ್ ಎಂ ಗೌಡ ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…
ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…
ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್ ತೀವ್ರ…
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…