ಬೆಂಗಳೂರು : ಬಿಗ್‌ಬಾಸ್ ಸೀಸನ್ 12ರಲ್ಲಿ ರಿಷಾ ಅವರು ಅತಿರೇಕದ ವರ್ತನೆಯನ್ನ ತೋರಿದ್ದಾರೆ. ಬೆಳಗ್ಗೆ ಅಷ್ಟೇ ಪ್ರೋಮೋ ಔಟ್ ಆದಾಗ ಗಿಲ್ಲಿ ಮೇಲೆ ರೊಚ್ಚಿಗೆದ್ದು ಪೆಟ್ಟು ಸಹ ಕೊಟ್ಟಿದ್ದಾರೆ.
ಅಭಿಷೇಕ್ ಅವರು ಮೊದಲಿಗೆ ಮನೆಯಲ್ಲಿ ನೆಮ್ಮದಿ ಹಾಳು ಆಗುತ್ತಿರೋದೇ ರಿಷಾ ಅವರಿಂದ ಎಂದಿದ್ದಾರೆ. ಇನ್ನು ಗಿಲ್ಲಿ ಕೂಡ ನನ್ನ ಮುಖವಾಡ ಕಳುಚುತ್ತಿಯೋ ಇಲ್ಲವೋ ಗೊತ್ತಿಲ್ಲ ಆದರೆ ನಿನ್ನ ಮುಖವಾಡ ಮಾತ್ರ ಈಗಾಗಲೇ ಕಳಚಿ ಸ್ವಿಮ್ಮಿಂಗ್ ಫೂಲ್ ಅಲ್ಲಿ ಕೊಚ್ಚಿಕೊಂಡು ಹೋಗಿದೆ ಎಂದರು.
ಇನ್ನು ರಘು ಅವರು ಕೂಡ ರಿಷಾ ಬಗ್ಗೆ ಮಾತನಾಡಿ,ʻ ನಾನು ಮನೆಯಲ್ಲಿ ಹೇಗೇಗೋ ಇರ್ತಿನಿ. ಮೆಂಟಲ್ ಥರನೇ ಇರ್ತೀನಿ. ಮನೆಯಲ್ಲಿ ನಾನು ಇರೋ ಥರ ಇದ್ದರೆ ಯಾರೂ ನನ್ನ ಜೊತೆ ಇರಲ್ಲ. ನಾನು ಮನೆಯಲ್ಲಿ ಹೀಗೆ ಇದ್ದೆ, ಶರ್ಟ್ ಬಿಚ್ಚಿಕೊಂಡಿದ್ದೆ, ಪ್ಯಾಂಟ್ ಬಿಚ್ಚಿಕೊಂಡಿದ್ದೆ, ಅಂತ ಇದ್ದರೆ ಚಪ್ಪಲಿ ತೆಗೆದುಕೊಂಡು ಹೊಡೆದು ಆಚೆ ಕಳುಹಿಸ್ತಾರೆʼ ಅಂತ ಖಡಕ್ ಆಗೇ ಹೇಳಿದ್ದಾರೆ.
ಇನ್ನು ಈ ಕಾರಣಗಳನ್ನು ಕೊಟ್ಟು ರಿಷಾ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ. ಅಷ್ಟೇ ಅಲ್ಲ ರಿಷಾ ಕೂಡ ನಾನು ಇರೋದೇ ಹೀಗೆ ಅಂತ ಮೊಂಡು ವಾದ ಕೂಡ ಮಾಡಿದ್ದಾರೆ.
ಗಿಲ್ಲಿ ಮೇಲೆ ಕೈ ಎತ್ತಿದ ರಿಷಾ
ರಿಷಾ ಗೌಡ ಬಾತ್‌ರೂಂನಲ್ಲಿದ್ದಾಗ ಗಿಲ್ಲಿ ಬಕೆಟ್ ಕೇಳಿದ್ದಾರೆ. ಇದಕ್ಕೆ ರಿಷಾ ಪ್ರತಿಕ್ರಿಯೆ ನೀಡಲಿಲ್ಲ. ಆಗ ಗಿಲ್ಲಿ, ರಿಷಾ ಬಕೆಟ್ ಕೊಡೋದಿಲ್ಲ ಅಂತ ಹೇಳು, ನಾನು ಏನ್ ಮಾಡಬೇಕೋ ಮಾಡ್ತೀನಿ ಎಂದಿದ್ದಾರೆ. ಅಲ್ಲದೆ ರಿಷಾ ಗೌಡ ಬಟ್ಟೆಗಳನ್ನ ತಂದು ನೆಲದ ಮೇಲೆ ಇಟ್ಟಿದ್ದಾರೆ.
ಬಳಿಕ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ಬಾತ್‌ರೂಂನಿಂದ ಹೊರಬಂದ ರಿಷಾ ತನ್ನ ಬಟ್ಟೆಗಳು ನೆಲದ ಮೇಲೆ ಇಟ್ಟಿರುವುದನ್ನ ನೋಡಿ ರೊಚ್ಚಿಗೆದ್ದಿದ್ದಾರೆ. ಕೋಪದಿಂದ ಗಿಲ್ಲಿ ಎಂದು ಜೋರಾಗಿ ಕಿರುಚಾಡಿದ್ದಾರೆ.
ಇದನ್ನು ಓದಿ: ನಾಯಕತ್ವ ಬದಲಾವಣೆ ಚರ್ಚೆ ಅನಗತ್ಯ : ಸಿಎಂ ಪರ ಬ್ಯಾಟ್ ಬೀಸಿದ ಸಚಿವ ದಿನೇಶ್ ಗುಂಡೂರಾವ್
ಅಲ್ಲದೆ ರಿಷಾ ಕೂಡ ಗಿಲ್ಲಿ ಬಟ್ಟೆಗಳನ್ನು ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಆಗ ಗಿಲ್ಲಿ ಮಾಡಿದ ಅಂತ ನೀನೂ ಹಾಗೆ ಮಾಡಬೇಡ ಎಂದು ಅಶ್ವಿನಿಗೌಡ ಬುದ್ಧಿವಾದ ಹೇಳಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ರಿಷಾ, ಬಟ್ಟೆಗಳನ್ನ ಕಾಲಲ್ಲೇ ಒದ್ದು ಬಿಸಾಡಿದ್ದಾರೆ. ಅಲ್ಲಿಗೆ ಬಂದ ಗಿಲ್ಲಿ ಜೊತೆ ಕೈಕೈ ಮಿಲಾಯಿಸಿದ್ದಾರೆ.
ತಕ್ಷಣವೇ ಹೊರಹಾಕುವ ನಿಯಮ
ರಿಷಾ ಅವರು ಗಿಲ್ಲಿ ಮೇಲೆ ಹಲ್ಲೆ ಮಾಡಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ದೈಹಿಕ ಹಲ್ಲೆ ಮಾಡಿದವರನ್ನು ತಕ್ಷಣವೇ ಹೊರಹಾಕುವ ನಿಯಮವಿರುವುದರಿಂದ, ರಿಷಾ ಅವರು ಎಲಿಮಿನೇಟ್ ಆಗುತ್ತಾರೆಯೇ ಎಂದು ಇದೀಗ ವೀಕ್ಷಕರು ಕಮೆಂಟ್ ಮಾಡ್ತಿದ್ದಾರೆ. ಅಷ್ಟೇ ಅಲ್ಲ ಸಣ್ಣ ತಮಾಷೆಗೆ ಇಷ್ಟೆಲ್ಲ ರಂಪಾಟ ಮಾಡೋ ಅಗತ್ಯ ಇರಲಿಲ್ಲ ಅಂತ ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು.
ಗಿಲ್ಲಿ ಬಟ್ಟೆಗಳನ್ನೆಲ್ಲ ಎತ್ತಿ ಬೀಸಾಕಿದ್ದಾರೆ. ಸೂಟ್ಕೇಸ್ನ ಒದ್ದಿದ್ದಾರೆ ಆ ಬಳಿಕ ಗಿಲ್ಲಿಯನ್ನು ತಳ್ಳಿದ್ದಾರೆ. ರಿಷಾ ಮಾಡಿದ್ದು ಬಿಗ್ ಬಾಸ್ ಮೂಲ ನಿಯಮಗಳಿಗೆ ವಿರುದ್ಧವಾಗಿದೆ. ಕಳೆದ ಸೀಸನ್ಗಳಲ್ಲಿ ಈ ರೀತಿ ಮಾಡಿದಾಗ ತಕ್ಷಣವೇ ಅವರನ್ನು ದೊಡ್ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಆದರೆ ತಕ್ಷಣಕ್ಕೆ ಬಿಗ್ ಬಾಸ್ ಈಗ ರಿಷಾ ಅವರ ಮೇಲೆ ಯಾವುದೇ ಆಕ್ಷನ್ ತೆಗೆದುಕೊಂಡಿಲ್ಲ. ಹೀಗಾಗಿ ವೀಕೆಂಡ್‌ನಲ್ಲಿ ಈ ಬಗ್ಗೆ ಚರ್ಚೆ ಆಗಿ ರಿಷಾ ಅವರು ಎಲಿಮಿನೇಟ್ ಆಗ್ತಾರಾ? ಎನ್ನುವ ಪ್ರಶ್ನೆ ವೀಕ್ಷಕರದ್ದು.
ಬೆಂಗಳೂರು: ಶ್ರೀಮಂತರು ಸ್ವಯಂ ಪ್ರೇರಿತರಾಗಿ ಗ್ಯಾರಂಟಿ ಯೋಜನೆ ಲಾಭ ಪಡೆಯೋದನ್ನು ಬಿಡಬೇಕು ಎಂದು ಸಚಿವ ಎಂ.ಬಿ.ಪಾಟೀಲ್ ಒತ್ತಾಯಿಸಿದ್ದಾರೆ. ಈ ಕುರಿತು…
ಹಾಸನ: ಇರಾನ್ ಮೇಲೆ ಇಸ್ರೇಲ್-ಅಮೇರಿಕಾ ಜಂಟಿ ದಾಳಿ ನಡೆಸುತ್ತಿರುವ ಪರಿಣಾಮ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕರ್ನಾಟಕ ಸರ್ಕಾರ ದುಬೈ ಸೇರಿದಂತೆ…
ನವದೆಹಲಿ: ಇರಾನ್ ಮೇಲೆ ಇಸ್ರೇಲ್-ಅಮೇರಿಕಾ ದಾಳಿತ ನಂತರ ನಡೆಯುತ್ತಿರುವ ಉದ್ವಿಗ್ನತೆಯ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿ…
ಟೆಹರಾನ್: ಇರಾನ್ ವಿರುದ್ಧ ಅಮೇರಿಕಾ ಹಾಗೂ ಇಸ್ರೇಲ್ ನಡೆಸಿದ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ 48 ಇರಾನಿನ ನಾಯಕರು ಸಾವನ್ನಪ್ಪಿದ್ದಾರೆ ಎಂದು…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಾರ್ಚ್.3ರ ಮಂಗಳವಾರ ಮಧ್ಯಾಹ್ನದ ನಂತರ ಚಂದ್ರಗ್ರಹಣವಿದ್ದರೂ ಶ್ರೀ ಮಹದೇಶ್ವರ ಸ್ವಾಮಿಯ…
ಸರ್ಕಾರಿ ನೌಕರಿ ಕನಸಾಗಿಯೇ ಉಳಿದಿದೆ ಎಂಬ ಉದ್ಯೋಗಾಕಾಂಕ್ಷಿಗಳ ಆಕ್ರೋಶ ಧಾರವಾಡದಲ್ಲಿ ಮೊದಲ ಬಾರಿಗೆ ಸ್ಛೋಟಗೊಂಡಿದೆ. ಅದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, …