ಮನರಂಜನೆ

ಸದ್ಯಕ್ಕಿಲ್ಲ ’ರಿಚರ್ಡ್ ಆ್ಯಂಟೋನಿ’; ಅಧ್ಯಯನದಲ್ಲಿ ಬ್ಯುಸಿಯಾದ ರಕ್ಷಿತ್‍

ರಕ್ಷಿತ್‍ ನಿರ್ದೇಶನದ ಮತ್ತು ‘ಉಳಿದವರು ಕಂಡಂತೆ’ ಚಿತ್ರದ ಪ್ರೀಕ್ವೆಲ್‍ ಆದ ‘ರಿಚರ್ಡ್ ಆ್ಯಂಟೋನಿ’ ಇಷ್ಟರಲ್ಲಿ ಪ್ರಾರಂಭವಾಗಬೇಕಿತ್ತು. ಮೇ ತಿಂಗಳಲ್ಲೇ ಚಿತ್ರೀಕರಣ ಪ್ರಾರಂಭಿಸುವುದಾಗಿ ರಕ್ಷಿತ್‍ ಶೆಟ್ಟಿ ಹೇಳಿಕೊಂಡಿದ್ದರು. ಈಗ ಡಿಸೆಂಬರ್ ಮುಗಿದರೂ ಚಿತ್ರೀಕರಣ ಪ್ರಾರಂಭವಾಗಿಲ್ಲ. ಅಷ್ಟೇ ಅಲ್ಲ, ಸದ್ಯ ಶುರುವಾಗುವ ಹಾಗೆಯೂ ಕಾರಣುತ್ತಿಲ್ಲ.

ಇಷ್ಟಕ್ಕೂ ‘ರಿಚರ್ಡ್ ಆ್ಯಂಟೋನಿ’ ಚಿತ್ರ ತಡವಾಗುತ್ತಿರುವುದೇಕೆ? ಇತ್ತೀಚೆಗೆ ಟೊರೊಂಟೋದ ಕನ್ನಡ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ರಕ್ಷಿತ್‍, ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ರಕ್ಷಿತ್‍, ‘’ರಿಚರ್ಡ್ ಆ್ಯಂಟೋನಿ’ ಚಿತ್ರದ ಬರವಣಿಗೆ ಇನ್ನೂ ಪೂರ್ತಿ ಆಗಿಲ್ಲ. ಆ ಚಿತ್ರದಲ್ಲಿನ ರಿಚ್ಚಿ ಮತ್ತು ಕೆಲವು ಪಾತ್ರಗಳ ಕುರಿತು ಅಧ್ಯಯನ ಮಾಡುವ ನಿಟ್ಟಿನಲ್ಲಿ ಊರೂರು ಸುತ್ತುತ್ತಿದ್ದೇನೆ. ಇಲ್ಲಿ ನಾಯಕ ರಿಚ್ಚಿ ಬೇರೆಬೇರೆ ಜಾಗಗಳಿಗೆ ಹೋಗುತ್ತಾನೆ. ಅಲ್ಲಿ ಬೇರೆಬೇರೆ ಜನರನ್ನು ಭೇಟಿಯಾಗುತ್ತಾನೆ. ಪ್ರಮುಖವಾಗಿ ಕೆಲವು ಡಾನ್ಗಳನ್ನು ಭೇಟಿ ಮಾಡುತ್ತಾನೆ. ಆ ಪಾತ್ರಗಳು ಹೇಗಿರುತ್ತವೆ ಎಂಬುದರ ಕುರಿತು ನನಗೆ ಸರಿಯಾದ ಸ್ಪಷ್ಟತೆ ಇಲ್ಲ. ಏಕೆಂದರೆ, ನಾನು ಕಳೆದ 10 ವರ್ಷಗಳಲ್ಲಿ ಯಾವುದೇ ಪಾತ್ರಗಳನ್ನು ಸ್ಟಡಿ ಮಾಡಿಲ್ಲ. ಹಾಗಾಗಿ, ಬೇರೆಬೇರೆ ಜನರನ್ನು ಭೇಟಿ ಮಾಡಿ ಆ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ’ ಎಂದು ರಕ್ಷಿತ್‍ ಶೆಟ್ಟಿ ಹೇಳಿಕೊಂಡಿದ್ದಾರೆ.

‘ಮಾಫಿಯಾ ಡಾನ್‌ಗಳ ಕಥೆ ಏನು? ಅವರ ಹಿನ್ನೆಲೆ ಹೇಗಿರುತ್ತದೆ? ಎಂಬುದು ನನಗೆ ಗೊತ್ತಿಲ್ಲ. ನನಗೆ ಡಾನ್‍ಗಳನ್ನು ಭೇಟಿ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ, ಅಧ್ಯಯನ ಮಾಡಬಹುದು. ಅವರ ಬಗ್ಗೆ ಒಂದಿಷ್ಟು ಓದಬಹುದು ಮತ್ತು ಕೇಳಿ ತಿಳಿದುಕೊಳ್ಳಬಹುದು. ಒಂದಿಷ್ಟು ಕಡೆ ಸುತ್ತಾಡಿದರೆ, ಜನರನ್ನು ನೋಡಿ ಏನಾದರೂ ವಿಷಯ ಸಿಗಬಹುದು ಎನ್ನುವ ಕಾರಣಕ್ಕೆ ಈ ಸುತ್ತಾಟ ನಡೆಸಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ ರಕ್ಷಿತ್‍.

‘ರಿಚರ್ಡ್ ಆ್ಯಂಟೋನಿ’ ಘೋಷಣೆಯಾಗಿ ಮೂರೂವರೆ ವರ್ಷಗಾಗಿವೆ. 2021ರಲ್ಲೇ ಈ ಚಿತ್ರದ ಬಗ್ಗೆ ಸುದ್ದಿ ಕೇಳಿಬಂದಿತ್ತು. ಈ ಚಿತ್ರವನ್ನು ಮೊದಲು ಹೊಂಬಾಳೆ ಫಿಲಂಸ್‍ನ ವಿಜಯ್‍ ಕಿರಗಂದೂರು ನಿರ್ಮಾಣ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಚಿತ್ರ ನಿರ್ಮಾಣದಿಂದ ಹಿಂದೆ ಸರಿದಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಭೂಮಿಕಾ

Recent Posts

ವಿಭಿನ್ನ ಓದಿಗೆ ಆಹ್ವಾನಿಸುವುದೇ ಉತ್ತಮ ಸಾಹಿತ್ಯ

`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…

6 mins ago

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

10 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

11 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

11 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

12 hours ago