ಮನರಂಜನೆ

‘ಏಕ್‍ ಲವ್‍ ಯಾ’ ನಂತರ ಇನ್ನೊಂದು ಪ್ರೇಮಕಥೆಯೊಂದಿಗೆ ಬಂದ ರಾಣ

ರಕ್ಷಿತಾ ಪ್ರೇಮ್‍ ಸಹೋದರ ರಾಣ, ‘ಏಕ್‍ ಲವ್‍ ಯಾ’ ಚಿತ್ರದ ನಾಯಕನಾಗಿ ಆಯ್ಕೆಯಾದಾಗ, ಆತ ಚಿತ್ರರಂಗದಲ್ಲಿ ದೊಡ್ಡ ಎತ್ತರಕ್ಕೆ ಬೆಳೆಯಬಹುದು ಎಂದು ಎಲ್ಲರಿಗೂ ನಿರೀಕ್ಷೆ ಇತ್ತು. ಆದರೆ, ರಾಣ ಅಭಿನಯದ ಮೊದಲ ಚಿತ್ರವೇ ಬಾಕ್ಸ್ ಆಫೀಸ್‍ನಲ್ಲಿ ಸೋಲು ಕಂಡಿತು. ಇದಾದ ಮೇಲೆ ರಾಣ ಸುದ್ದಿಯೇ ಇರಲಿಲ್ಲ. ಜೆ.ಪಿ.ನಗರದಲ್ಲಿ ಪಬ್‍ ನಡೆಸುತ್ತಿರುವ ರಾಣ, ಮತ್ತೆ ಬಣ್ಣ ಹಚ್ಚುತ್ತಾರೋ, ಇಲ್ಲವೋ ಎಂಬ ಪ್ರಶ್ನೆ ಎಲ್ಲರಲ್ಲೂ ಇರುವಾಗಲೇ ರಾಣ ಮತ್ತೆ ಬಂದಿದ್ದಾರೆ.

ತರುಣ್‍ ಸುಧೀರ್‍, ಅಟ್ಲಾಂಟ ನಾಗೇಂದ್ರ ಜೊತೆಗೆ ಸೇರಿ ಚಿತ್ರವೊಂದನ್ನು ನಿರ್ಮಿಸುತ್ತಿರುವ ಸುದ್ದಿ ಗೊತ್ತೇ ಇದೆ. ಕಳೆದ ತಿಂಗಳು ಈ ಚಿತ್ರದ ಘೋಷಣೆಯಾಗಿತ್ತು. ಈಗ ಆ ಚಿತ್ರಕ್ಕೆ ರಾಣ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ರಾಣನನ್ನು ಬರಮಾಡಿಕೊಂಡಿದ್ದಾರೆ.

ಈ ಚಿತ್ರದಲ್ಲಿ ರಾಣ ಪಾತ್ರವೇನು? ಎಂಬ ವಿಷಯವನ್ನು ಚಿತ್ರತಂಡ ಬಹಿರಂಗಗೊಳಿಸಿಲ್ಲ. ರಕ್ತ ಅಂಟಿರುವ ಪೋಸ್ಟರ್‍ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಣ ಫೋಟೋ ನೋಡಬಹುದೇ ಹೊರತು, ಅವರ ಹೆಸರು ಮತ್ತು ವಿಳಾಸ ಗೋಚರಿಸುವುದಿಲ್ಲ. ಕೆಲವು ದಶಕಗಳ ಹಿಂದಿನ ಲೈಸನ್ಸ್ ಆಗಿರುವುದರಿಂದ, ಕೆಲವು ವರ್ಷಗಳ ಹಿಂದಿನ ಕಾಲಘಟ್ಟದ ಕಥೆಯನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆ ಎಂದು ಅಂದಾಜಿಸಬಹುದು.

ಈ ಹಿಂದೆ ‘ಕಾಟೇರ’ ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪುನೀತ್ ರಂಗಸ್ವಾಮಿ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದ್ದು, ಕರ್ನಾಟಕ ಮತ್ತು ತಮಿಳುನಾಡಿನ ಗಡಿಯಲ್ಲಿ ನಡೆಯುವ ಕಥೆಯಾಗಲಿದೆಯಂತೆ. ಚಿತ್ರಕ್ಕೆ ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸುವ ಪ್ರೇಮಕಥೆ’ ಎಂಬ ಟ್ಯಾಗ್‍ಲೈನ್‍ ನೀಡಲಾಗಿದೆ. 90ರ ದಶಕದಲ್ಲಿ ನಡೆಯುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.

ಈ ಚಿತ್ರವು ಕನ್ನಡವಲ್ಲದೆ, ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್‍ ಸಂಕಲನವಿದೆ.

 

ಆಂದೋಲನ ಡೆಸ್ಕ್

Recent Posts

ಮಂಡ್ಯ | ಮಗಳ ಸಾವಿನಿಂದ ಮನನೊಂದ ತಾಯಿ ಆತ್ಮಹತ್ಯೆ

ಮಂಡ್ಯ: ಮಗಳ ಸಾವಿನಿಂದ ಮನನೊಂದ ತಾಯಿ ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಹೆಬ್ಬಕವಾಡಿ ಗ್ರಾಮದಲ್ಲಿ…

2 hours ago

ಚಾ.ನಗರ | ಆನ್‌ಲೈನ್‌ ಗೇಮ್‌ ನಿಷೇಧಕ್ಕೆ ರೈತ ಸಂಘ ಆಗ್ರಹ

ಚಾಮರಾಜನಗರ : ಹಲವು ಕುಟುಂಬಗಳನ್ನೇ ಹಾಳು ಮಾಡಿ ಯುವ  ಸಮೂಹವನ್ನು ಬೀದಿಗೆ ಬೀಳುವಂತೆ ಮಾಡುತ್ತಿರುವ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಬೇಕು ಎಂದು…

3 hours ago

ಹುಣಸೂರು | ಬನ್ನಿಕುಪ್ಪೆಯಲ್ಲಿ ಅಸ್ಪೃಶ್ಯತಾ ನಿರ್ಮೂಲನೆ ಕಾರ್ಯಕ್ರಮ

ಹುಣಸೂರು: ಇಲ್ಲಿನ ಬನ್ನಿಕುಪ್ಪೆ ಗ್ರಾಮದ ಮಾರಿಗುಡಿ ಆವರಣದಲ್ಲಿ ಅಸ್ಪೃಶ್ಯತಾ ನಿವಾರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಅಧಿಕಾರಿ ಅಶೋಕ್…

3 hours ago

ʻಗ್ಯಾರಂಟಿʼಯಿಂದ ಕೊಳ್ಳುವ ಶಕ್ತಿ ಹೆಚ್ಚಳ ; ಪುಷ್ಪ ಅಮರನಾಥ್‌

ಮೈಸೂರು: ಗ್ಯಾರಂಟಿ ಯೋಜನೆಗಳು ಯಾವುದೇ ಧರ್ಮ, ಜಾತಿ ಮತ್ತು ಪಕ್ಷಕ್ಕೆ ಸೀಮಿತವಾಗಿಲ್ಲ. ಗ್ಯಾರಂಟಿ ಯೋಜನೆಗಳಿಂದ ಜನರ  ಕೊಳ್ಳುವ ಶಕ್ತಿ ಹೆಚ್ಚಿದೆ.…

3 hours ago

ಮಡಿಕೇರಿ | ಅರಣ್ಯ ಇಲಾಖೆಯಿಂದ ಕಾರ್ಮಿಕನ ಬಂಧನ ಖಂಡಿಸಿ ನಾಳೆ ಪ್ರತಿಭಟನೆ

ಸಿದ್ದಾಪುರ : ವಿದ್ಯುತ್ ತಗುಲಿ ಕಾಡಾನೆ ಸಾವನಪ್ಪಿದ ಕಾರಣ ತೋಟದ ಕಾರ್ಮಿಕನನ್ನು ಅರಣ್ಯ ಇಲಾಖೆ ಬಂಧಿಸಿದ ಕ್ರಮದ ವಿರುದ್ದ ರೈತ,…

5 hours ago

ಶಾಲಾ-ಕಾಲೇಜು ತಂಬಾಕು ಮುಕ್ತದ ಗುರಿ ; ಜಿಲ್ಲಾಧಿಕಾರಿ ಕುಮಾರ

ಮಂಡ್ಯ: ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳನ್ನು ತಂಬಾಕು ಮುಕ್ತ ವಲಯವಾಗಿಸಿ ದೃಢೀಕರಣ ಪತ್ರ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ…

5 hours ago