ಮನರಂಜನೆ

ಆಮೀರ್ ಖಾನ್‍ ಆಯ್ತು; ‘ಮಹಾಭಾರತ’ದ ಬಗ್ಗೆ ಈಗ ರಾಜಮೌಳಿ ಮಾತು

‘ಮಹಾಭಾರತ’ ಚಿತ್ರ ಮಾಡಬೇಕು ಎನ್ನುವುದು ನಿರ್ದೇಶಕ ಎಸ್‍.ಎಸ್. ರಾಜಮೌಳಿ ಅವರ ಕನಸು. ‘ಮಹಾಭಾರತ’ ತಮ್ಮ ಮಹತ್ವಾಕಾಂಕ್ಷೆಯ ಚಿತ್ರ ಎಂದು ಕೆಲವು ವರ್ಷಗಳ ಹಿಂದೆಯೇ ಅವರು ಹೇಳಿಕೊಂಡಿದ್ದರು. ‘ಮಹಾಭಾರತ’ ಸರಣಿಯ ಕನಿಷ್ಠ 10 ಚಿತ್ರಗಳನ್ನು ನಿರ್ದೇಶಿಸುವುದಾಗಿ ಹೇಳಿದ್ದರು.

ಆದರೆ, ಅದು ಅಷ್ಟು ಸುಲಭವಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ ಎಂಬುದರ ಅರಿವಿದೆ. ‘’ಮಹಾಭಾರತ’ ಚಿತ್ರ ಮಾಡಬೇಕೆಂದರೆ, ದೇಶದಲ್ಲಿರುವ ಹಲವು ‘ಮಹಾಭಾರತ’ಗಳ ಕುರಿತು ಓದುವುದಕ್ಕೆ ಒಂದು ವರ್ಷ ಬೇಕಾಗುತ್ತದೆ. ‘ಮಹಾಭಾರತ’ವನ್ನು ತೆರೆಗೆ ತರಬೇಕೆಂದರೆ, 10 ಚಿತ್ರಗಳಲ್ಲಿ ಬೇಕಾಗುತ್ತದೆ. ಯಾವಾಗ ಆಗುತ್ತದೋ ಗೊತ್ತಿಲ್ಲ’ ಎಂದು ಹೇಳಿದ್ದರು.

ಈಗ್ಯಾಕೆ ಈ ವಿಷಯ ಎಂದರೆ, ‘ಮಹಾಭಾರತ’ ಚಿತ್ರದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ನಡೆದ ‘ಹಿಟ್‍ 3’ ಚಿತ್ರದ ಪ್ರೀ-ರಿಲೀಸ್ ಇವೆಂಟ್‍ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ಮಹಾಭಾರತ’ ಚಿತ್ರವನ್ನು ಮಾಡುತ್ತಿರುವುದು ನಿಜ ಮತ್ತು ಅದರಲ್ಲಿ ನಾನಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಸೂಚನೆ ಕೊಟ್ಟಿದ್ದಾರೆ.

ಹೈದರಾಬಾದ್‍ನಲ್ಲಿ ನಡೆದ ‘ಹಿಟ್ 3’ ಚಿತ್ರದ ಪ್ರೀ-ರಿಲೀಸ್ ಇವೆಂಟ್‍ನಲ್ಲಿ ರಾಜಮೌಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ‘ಈಗ’ ಚಿತ್ರದಲ್ಲಿ ನಾನಿ ಅವರನ್ನು ನಿರ್ದೇಶಿಸಿದ್ದರು ರಾಜಮೌಳಿ. ಆ ನಂತರ ಇಬ್ಬರು ಒಟ್ಟಿಗೆ ಕೆಲಸ ಮಾಡಲಿಲ್ಲ. ‘ಮಹಾಭಾರತ’ ಚಿತ್ರದಲ್ಲೇನಾದರೂ ನಾನಿ ಇರುವ ಸಾಧ್ಯತೆ ಇದೆಯಾ? ಎಂಬ ಪ್ರಶ್ನೆಗೆ ಹೌದು ಎಂದು ಉತ್ತರಿಸಿದ್ದಾರೆ.

ಸದ್ಯ ರಾಜಮೌಳಿ, ಮಹೇಶ್‍ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಅಭಿನಯದಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಹೆಸರೇನು? ಯಾವಾಗ ಬಿಡುಗಡೆ? ಯಾರೆಲ್ಲಾ ಇರುತ್ತಾರೆ? ಈ ಬಾರಿ ರಾಜಮೌಳಿ ಏನು ಹೇಳುವುದಕ್ಕೆ ಹೊರಟಿದ್ದಾರೆ? ಮುಂತಾದ ವಿಷಯಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ.

ವಿಶೇಷವೆಂದರೆ, ಇತ್ತೀಚೆಗಷ್ಟೇ ‘ಮಹಾಭಾರತ’ ಚಿತ್ರವನ್ನು ಮಾಡುವುದಾಗಿ ಆಮೀರ್ ಖಾನ್‍ ಸಹ ಘೋಷಿಸಿದ್ದರು. ಆದರೆ, ಆ ಚಿತ್ರ ಯಾವಾಗ ಶುರುವಾಗುತ್ತದೆ ಎಂದು ಅವರಿಗೂ ಸ್ಪಷ್ಟತೆ ಇಲ್ಲ. ರಾಜಮೌಳಿ ಮತ್ತು ಆಮೀರ್ ಖಾನ್‍ ಅವರ ‘ಮಹಭಾರತ’ಗಳ ಕ್ಲಾಶ್‍ ಆಗದಿದ್ದರೆ ಸಾಕು.

ಆಂದೋಲನ ಡೆಸ್ಕ್

Recent Posts

ಗಗನಯಾತ್ರಿ ಸುನಿತಾ ವಿಲಿಯಮ್ಸ್‌ ನಿವೃತ್ತಿ ಘೋಷಣೆ

ಕೇಪ್‌ ಕೆನವೆರೆಲ್:‌ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 9 ತಿಂಗಳ ಕಾಲ ಸುದೀರ್ಘ ಕಾಲದ ಅನುಭವ ಹೊಂದಿರುವ ಸುನಿತಾ ವಿಲಿಯಮ್ಸ್‌ ನಿವೃತ್ತರಾಗಿದ್ದಾರೆ.…

3 mins ago

ಹನೂರು| ಪಾದಯಾತ್ರೆ ಮಾಡುವ ವೇಳೆ ಚಿರತೆ ದಾಳಿ: ವ್ಯಕ್ತಿ ಸಾವು

ಮಹಾದೇಶ್‌ ಎಂ ಗೌಡ ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಪಾದಯಾತ್ರಿಕನ ಮೇಲೆ ದಾಳಿ…

14 mins ago

ತೆಂಗಿನ ಮರದಿಂದ ಬಿದ್ದು ನರಳಾಡಿದ ಯುವಕನನ್ನು ಕೆರೆಯಲ್ಲಿ ಮುಳುಗಿಸಿ ಕೊಂದ ಸ್ನೇಹಿತರು

ರಾಮನಗರ: ತೆಂಗಿನ ಮರ ಹತ್ತಿ ಕೆಳಗೆ ಬಿದ್ದ ಸ್ನೇಹಿತನನ್ನು ಕೆರೆಯಲ್ಲಿ ಮುಳುಗಿಸಿ ಹತ್ಯೆ ಮಾಡಿದ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ…

36 mins ago

ಭಣಗುಡುತ್ತಿದ್ದ ರಾಮನಗುಡ್ಡ ಕೆರೆಗೆ ಜೀವಕಳೆ: 30 ವರ್ಷಗಳ ಬಳಿಕ ರೈತರ ಮೊಗದಲ್ಲಿ ಹರ್ಷ

ಮಹಾದೇಶ್‌ ಎಂ ಗೌಡ ಹನೂರು: ಮಳೆಯನ್ನೇ ಆಶ್ರಯಿಸಿ ಬೆಳೆಯಬೇಕಿದ್ದ ಸ್ಥಿತಿ, ಕುಸಿಯುತ್ತಿರುವ ಅಂತರ್ಜಲದಿಂದ ಪಡಿಪಟಾಲು ಪಡುತ್ತಿದ್ದ ರೈತರ ಕಷ್ಟ ಕೊನೆಗೂ…

1 hour ago

ಪಂಜುಗಂಗೊಳ್ಳಿ ಅವರ ವಾರದ ಅಂಕಣ: ಎವ್ಗನ್ ಬಾವ್ಚಾರ್ ಎಂಬ ಕಣ್ಣಿಲ್ಲದ ಫೋಟೋಗ್ರಾಫರ್!

ಪಂಜು ಗಂಗೊಳ್ಳಿ  ನೂರಾರು ಜನ ವಿಶೇಷಚೇತನರಿಗೆ ಫೋಟೋಗ್ರಫಿ ತರಬೇತಿ ಎವ್ಗನ್ ಬಾವ್ಚಾರ್ ೧೯೪೬ರಲ್ಲಿ ಸ್ಲೊವೇನಿಯಾ (ಆಗ ಯುಗೊಸ್ಲೇವಿಯಾ)ದಲ್ಲಿ ಹುಟ್ಟಿದರು. ಏಳು…

4 hours ago

ಓದುಗರ ಪತ್ರ: ಕಳ್ಳಸಾಗಣೆ ಕಪಿಮುಷ್ಟಿಯಲ್ಲಿ ದೇಶದ ಆರ್ಥಿಕತೆ

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಅಕ್ರಮ ಸಿಗರೇಟ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು ರೂ.೧೫,೦೦೦ ಕೋಟಿಗೂ ಅಧಿಕ ನಷ್ಟವನ್ನು ಸರ್ಕಾರಕ್ಕೆ ಉಂಟುಮಾಡುತ್ತಿದೆ.…

5 hours ago