ರಾಜ್ ಬಿ. ಶೆಟ್ಟಿ ಇತ್ತೀಚೆಗೆ ಬಹಳ ಸುದ್ದಿಯಲ್ಲಿದ್ದಾರೆ. ಅವರು ಈಗಾಗಲೇ ಅವರ ಒಂದು ಮಲಯಾಳಂ ಚಿತ್ರ ಬಿಡುಗಡೆಯಾಗಿದೆ. ಇನ್ನೊಂದು ಮುಂದಿನ ತಿಂಗಳು ಬಿಡುಗಡೆ ಆಗಲಿದೆ. ಕನ್ನಡದಲ್ಲಿ ಇತ್ತೀಚೆಗೆ ‘ರಕ್ಕಸಪುರದೊಳ್’ ಎಂಬ ಚಿತ್ರ ಶುರುವಾಗಿದೆ. ಈ ಮಧ್ಯೆ, ಅವರು ಬಾಲಿವುಡ್‍ಗೆ ಹೊರಟು ನಿಂತಿದ್ದಾರೆ.
ಹೌದು, ಹಿಂದಿಯ ಒಂದು ಚಿತ್ರದಲ್ಲಿ ರಾಜ್ ಶೆಟ್ಟಿ ನಟಿಸಿದ್ದಾರೆ. ಈ ಕುರಿತು ಕೆಲವು ದಿನಗಳಿಂದ ಗುಸುಗುಸು ಇದ್ದೇ ಇತ್ತು. ಇತ್ತೀಚೆಗೆ ‘ರಕ್ಕಸಪುರದೊಳ್’ ಚಿತ್ರದ ಪತ್ರಿಕಾಗೋಷ್ಠಿಯ ನಂತರ ರಾಜ್ ಶೆಟ್ಟಿ, ಈ ವಿಷಯ ನಿಜ ಎಂದು ಒಪ್ಪಿಕೊಂಡಿದ್ದಾರೆ. ಬಾಲಿವುಡ್‍ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ರಾಜ್ ಶೆಟ್ಟಿ, ‘ನಾನು ಅನುರಾಗ್ ಕಶ್ಯಪ್ ಅವರ ದೊಡ್ಡ ಅಭಿಮಾನಿ. ಇತ್ತೀಚೆಗೆ ಅವರೊಂದು ಸ್ಟೇಟಸ್ ಹಾಕಿದ್ದರು. ಅದನ್ನು ನೋಡಿ, ‘ನಿಮ್ಮ ಚಿತ್ರಕ್ಕೆ ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳಿ’ ಎಂದು ಮೆಸೇಜ್ ಹಾಕಿದ್ದೆ. ಅದಕ್ಕೆ ಅವರು ಒಂದು ಅತಿಥಿ ಪಾತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾ ಎಂದು ಕೇಳಿದ್ದರು. ಅವರ ಚಿತ್ರಗಳಲ್ಲಾದರೆ, ಸುಮ್ಮನೆ ಅಲ್ಲಿಂದ ಇಲ್ಲಿಗೆ ಹಾದು ಹೋಗುವ ಪಾತ್ರದಲ್ಲಾದರೂ ನಾನು ನಟಿಸುವುದಕ್ಕೆ ತಯಾರು. ಅವರಿಗೆ ಅದನ್ನೇ ಹೇಳಿದ್ದೆ. ಏಕೆಂದರೆ, ನಾನು ಅವರಿಂದ ಬಹಳ ವಿಷಯ ಕಲಿತಿದ್ದೇನೆ. ಅವರ ಸಿನಿಮಾ ನೋಡಿ ಬೆಳೆದಿದ್ದೇನೆ ಮತ್ತು ಅವರ ಋಣದಲ್ಲಿದ್ದೇನೆ. ಅವರು ಓಕೆ ಅಂದರು. ಮಿಕ್ಕಂತೆ ಪಾತ್ರದ ಬಗ್ಗೆ ಹೆಚ್ಚು ವಿಷಯ ಗೊತ್ತಿಲ್ಲ. ಸದ್ಯದಲ್ಲೇ ಹೋಗಿ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ’ ಎಂದರು.
ರಾಜ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ‘ಗರುಡ ಗಮನ ಋಷಭ ವಾಹನ’ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರ ನೋಡಿ ಅನುರಾಗ್ ಕಶ್ಯಪ್ ಬಹಳ ಒಳ್ಳೆಯ ಮಾತುಗಳನ್ನು ಆಡಿದ್ದರು. ಶೆಟ್ಟಿ ಕೆಲಸವನ್ನು ಹೊಗಳಿದ್ದಾರೆ. ಆದರೆ, ಅದನ್ನು ತಾನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ ರಾಜ್. ‘ಅದನ್ನು ಗಂಭೀರವಾಗಿ ತೆಗೆದುಕೊಂಡರೆ, ನಾವು ಸಮರಾಗಿ ಆಗಿಬಿಡುತ್ತೀವಿ. ಅವರು ನನ್ನ ಸ್ಫೂರ್ತಿ. ಅವರ ಸಮನಾಗಿ ಗುರುತಿಸಿಕೊಳ್ಳುವ ಯಾವುದೇ ಆಸಕ್ತಿ ಇಲ್ಲ. ನನಗೆ ಅವರ ಕೆಲಸ ಇಷ್ಟ. ನನಗೆ ಅವರು ಮತ್ತೊಮ್ಮೆ ಗೆಲ್ಲಬೇಕು, ಮತ್ತೆ ಅವರು ಒಂದಿಷ್ಟು ಒಳ್ಳೆಯ ಚಿತ್ರಗಳನ್ನು ಕೊಡಬೇಕು ಎಂಬುದಷ್ಟೇ ಆಸೆ. ಎತ್ತರವಿರುವ ಬೆಟ್ಟವನ್ನು ದೂರದಿಂದಲೇ ನೋಡಿ ಖುಷಿಪಡಬೇಕು, ಹತ್ತಿರ ಹೋಗುವ ಪ್ರಯತ್ನ ಮಾಡಬಾರದು’ ಎಂಬುದು ರಾಜ್ ಅಭಿಪ್ರಾಯ.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…