ಮ್ಯೂಸಿಕ್‌ಬಾಕ್ಸ್‌ನಿಂದ ಅಪ್ಪು ಸ್ಮರಣೆ

‘ಪುನೀತ್ ಸಂಸ್ಮರಣೆ ನನಗೆ ಹೊಸ ಅನುಭವ ಇದು. ಯಾಕೆಂದರೆ ನಾನು ಉದಯಶಂಕರ್, ರಾಜನ್ ನಾಗೇಂದ್ರ, ವ್ಯಾಸರಾವ್ ಮುಂತಾದವರೊಂದಿಗೆ ಪುನೀತ್‌ರನ್ನು ಮಗುವಾಗಿದ್ದಾಗಿನಿಂದ ಎತ್ತಿಮುದ್ದಾಡಿದ್ದೇನೆ. ಈಗ ಅವರ ಸಂಸ್ಮರಣೆ ಗೀತರಚನೆ ನನಗೆ ತುಂಬಾ ಗೌರವದೊಂದಿಗೆ ನೋವನ್ನು ತಂದುಕೊಟ್ಟ ಸಂಗತಿ.

ಅವರ ಸಮಾಜಸೇವೆ, ಪ್ರಾಣಿದಯೆ, ಗೋರಕ್ಷಣೆಯಂತಹ ಸೇವೆಗಳಿಂದ ನಾನು ಕೂಡ ಪ್ರಭಾವಿತನಾಗಿದ್ದೇನೆ’ ಇದು ‘ಮ್ಯೂಸಿಕ್ ಬಾಕ್ಸ್’ ಆಡಿಯೋ ಸಂಸ್ಥೆ ಹೊಸ ವರ್ಷದ ಪ್ರಯುಕ್ತ ಹೊರತಂದ ಅಪ್ಪು ನೆನಪಿನ ‘ಪುನೀತನಾದೆ …’ ಹಾಗೂ ‘ತೆರೆಯಲಿ ಮೆರುಗು ನಿನ್ನದೇ …’ ಹಾಡುಗಳ ಬಿಡುಗಡೆ ವೇಳೆ, ಮೊದಲನೇ ಹಾಡನ್ನು ಬರೆದ ದೊಡ್ಡರಂಗೇಗೌಡರ ಮಾತು.

 

ಈ ಹಾಡಿಗೆ ರಾಗಸಂಯೋಜಿಸಿದ ವಿ. ಮನೋಹರ್, ‘ದೊಡ್ಡರಂಗೇಗೌಡರೊಂದಿಗೆ ಈ ಗೀತೆಯನ್ನು ಕನ್ನಡನಾಡಿಗೆ ಅರ್ಪಿಸಿದ್ದು, ಪುನೀತ್ ಬಗ್ಗೆ ವಿಶೇಷ ಗೌರವ ನಮನ ಸಲ್ಲಿಸಿರುವ ಭಾಗ್ಯ ನನ್ನದಾಗಿದೆ’ ಎಂದರು. ಅಜಯ್ ವಾರಿಯರ್ ಈ ಹಾಡನ್ನು ಹಾಡಿದ್ದಾರೆ. ‘ತೆರೆಯಲಿ ಮೆರುಗು ನಿನ್ನದೇ …’ ಗೀತೆಯ ರಚನೆ ಕೊಗುಂಡಿ ಪೆನ್ನಯ್ಯ, ರಮೇಶ್‌ಕೃಷ್ಣ ರಾಗಸಂಯೋಜನೆ ಮತ್ತು ಕಾರ್ತಿಕ್ ನಾಗಲಪುರ ಗಾಯನ ಇದೆ.

× Chat with us