pruthvi ambaar kothalavadi kannada movie updates
ಪೃಥ್ವಿ ಅಂಬಾರ್ ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ, ಇದುವರೆಗೂ ಅವರು ಹೆಚ್ಚಾಗಿ ನಟಿಸಿರುವುದು ಸಾಫ್ಟ್ ಪಾತ್ರಗಳಿಂದಲೇ. ಈಗ ಇದೇ ಮೊದಲ ಬಾರಿಗೆ ‘ಕೊತ್ತಲವಾಡಿ’ ಚಿತ್ರದಲ್ಲಿ ಅವರು ಹಳ್ಳಿಯ ಯುವಕನಾಗಿಯಷ್ಟೇ ಅಲ್ಲ, rough and tough ಎನ್ನುವಂತಹ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಸಹ ಇಟ್ಟುಕೊಂಡಿದ್ದಾರೆ.
‘ಕೊತ್ತಲವಾಡಿ’ ಚಿತ್ರವು ಆಗಸ್ಟ್.01ರಂದು ಬಿಡಗುಡೆಯಾಗುತ್ತಿದ್ದು, ಈ ಕುರಿತಾಗಿ ಅವರು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ಬರೀ ನನ್ನ ಪಾತ್ರ ಮಾತ್ರ ಮುಖ್ಯವಲ್ಲ. ಇಲ್ಲಿ ಎಲ್ಲಾ ಪಾತ್ರಗಳಿಗೂ ತನ್ನದೇ ಆದ ಪ್ರಾಮುಖ್ಯತೆ ಇದೆ. ಸಿನಿಮಾ ನೋಡಿ ಹೊರ ಬಂದಾಗ, ಗೋಪಾಲಕೃಷ್ಣ ದೇಶಪಾಂಡೆ ಅವರು ಮಾಡಿದ ಪಾತ್ರ ಎಲ್ಲರಿಗೂ ಹೆಚ್ಚು ಇಷ್ಟವಾಗುತ್ತದೆ ಎಂಬ ನಂಬಿಕೆ ನನಗಿದೆ. ನಿರ್ದೇಶಕರು ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ಮಹತ್ವ ಕೊಟ್ಟಿದ್ದಾರೆ. ಅದೇ ಈ ಚಿತ್ರದ ಹೈಲೈಟ್ ಎಂದರೆ ತಪ್ಪಿಲ್ಲ’ ಎನ್ನುತ್ತಾರೆ ಪೃಥ್ವಿ.
ಈ ಚಿತ್ರದಲ್ಲಿ ಹಳ್ಳಿಯ ಗಟ್ಟಿಗನಾಗಿ ಅಭಿನಯಿಸಿರುವ ಅವರು, ‘ಕೊತ್ತಲವಾಡಿ ಎಂದರೆ ಆ ಗ್ರಾಮದ ಕಥೆಯಲ್ಲ. ಕರ್ನಾಟಕದಲ್ಲಿ ಯಾವ ಹಳ್ಳಿಯ ಕಥೆ ಬೇಕಾದರೂ ಆಗಬಹುದು. ಹಳ್ಳಿಯ ರಾಜಕೀಯದ ಸುತ್ತ ನಡೆಯುವ ಕಥೆ ಇದು. ಹಳ್ಳಿಯ ಯಾವುದೇ ಸಮಸ್ಯೆ ಎದುರಾದರೂ ಅಲ್ಲಿನ ಹುಡುಗರು ಎದ್ದು ನಿಲ್ಲುತ್ತಾರೆ. ಅದನ್ನು ಪ್ರಮುಖವಾಗಿ ಇಲ್ಲಿ ತೋರಿಸಲಾಗಿದೆ. ಅದರ ಜೊತೆಗೆ, ಮುಖಂಡರು ಹಳ್ಳಿಯ ಹುಡುಗರನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬ ಹಲವು ಪದರಗಳು ಇವೆ. ನಾನು ಈ ಚಿತ್ರವನ್ನು ಒಪ್ಪಿಕೊಳ್ಳುವುದಕ್ಕೆ, ಈ ಪಾತ್ರ ಮಾಡುವುದಕ್ಕೆ ಮುಖ್ಯ ಕಾರಣ ಕಥೆ ಮತ್ತು ಪಾತ್ರ. ನನಗೆ ಹಳ್ಳಿಯ ಗಟ್ಟಿಗನ ಪಾತ್ರ ಮಾಡಬೇಕು ಎಂದು ನನಗೆ ಬಹಳ ದಿನಗಳಿಂದ ಆಸೆ ಇತ್ತು. ಮಂಡ್ಯ ಸೊಗಡಿನ ಚಿತ್ರ ಮಾಡುವ ಆಸೆಯೂ ಇತ್ತು. ಜೊತೆಗೆ ಗೋಪಾಲಕಷ್ಣ ದೇಶಪಾಂಡೆ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು. ಅದಕ್ಕೆ ಈ ಚಿತ್ರ ಒಪ್ಪಿಕೊಂಡೆ. ನನಗೆ ಈ ಚಿತ್ರವನ್ನು ಯಶ್ ಅವರ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ನಿರ್ಮಿಸುತ್ತಿರುವ ವಿಷಯ ಗೊತ್ತಿರಲಿಲ್ಲ. ಚಿತ್ರೀಕರಣವೆಲ್ಲಾ ಮುಗಿದ ನಂತರ ಗೊತ್ತಾಯಿತು’ ಎನ್ನುತ್ತಾರೆ.
ಪೃಥ್ವಿ ಮೂಲತಃ ಕರಾಳಿಯವರು. ಕರಾವಳಿಯವರಿಗೆ ಮಂಡ್ಯ ಭಾಷೆ ಮಾತಾಡುವುದು ಕಷ್ಟ. ಹಾಗಿರುವಾಗ, ಚಿತ್ರದ ಸಂಭಾಷಣೆಗಳನ್ನು ಹೇಳುವುದು ಎಷ್ಟು ಕಷ್ಟವಾಯಿತು ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಈ ಕುರಿತು ಒಂದಿಷ್ಟು ಸಿನಿಮಾಗಳನ್ನು ನೋಡಿದೆ. ಹಾಗೆಯೇ ಮಾತನಾಡುತ್ತಾ ಆಡುತ್ತಾ ಸುಲಭವಾಯಿತು. ನಮ್ಮ ನಿರ್ದೇಶಕರು ಚಿತ್ರದ ಪೂರಾ ಸಂಭಾಷಣೆ ವಿಷಯದಲ್ಲಿ ನನಗೆ ಸಾಕಷ್ಟು ಸಹಾಯ ಮಾಡಿದರು. ರಘು ನಿಡುವಳ್ಳಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಅವರ ಸಂಭಾಷಣೆಗಳು ಸುಲಭ ಅಂತೆನಿಸಿತು. ಕೇಳಿದರೆ ಎಲ್ಲೂ ಆಭಾಸ ಎಂದೆನಿಸುವುದಿಲ್ಲ’ ಎನ್ನುತ್ತಾರೆ.
‘ಕೊತ್ತಲವಾಡಿ’ ಚಿತ್ರವನ್ನು ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್, ಪಿಎ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿಕಾಸ್ ವಸಿಷ್ಠ ಸಂಗೀತ, ಕಾರ್ತಿಕ್ ಎಸ್. ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ ಇದೆ. ಶ್ರೀರಾಜ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಅವರಂತಹ ಅನುಭವಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಬೆಂಗಳೂರು: ಜಾತಿ, ಅಸಮಾನತೆ, ಸಂವಿಧಾನದ ಮೌಲ್ಯ ಎತ್ತಿ ಹಿಡಿಯುವ "ಲ್ಯಾಂಡ್ ಲಾರ್ಡ್" ಸಿನಿಮಾ ನೋಡಿ ಎಂದು ಸಿಎಂ ಸಿದ್ದರಾಮಯ್ಯ ಕರೆ…
ಶ್ರೀನಗರ: ಕಾಶ್ಮೀರದ ಸುತ್ತಮುತ್ತ ಭಾರೀ ಹಿಮಮಳೆಯಾಗುತ್ತಿದ್ದು, ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಹಲವು ವರ್ಷಗಳ ಬಳಿಕ ಇಷ್ಟೊಂದು ಹಿಮಪಾತವಾಗುತ್ತಿದ್ದು, ಜನಜೀವನ…
ಪೇಶಾವರ: ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಶಾಂತಿ ಸಮಿತಿ ಸದಸ್ಯರ ಮನೆಯಲ್ಲಿ ಶುಕ್ರವಾರ ರಾತ್ರಿ ನಡೆದ ವಿವಾಹ ಸಮಾರಂಭದ…
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪತ್ತೆಗಾಗಿ ಪೊಲೀಸರು…
ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್ನಲ್ಲಿ ಪಠ್ಯ…
ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…