ಮನರಂಜನೆ

ಕನ್ನಡ ಚಿತ್ರರಂಗ ಬಹಳ ಹಿಂದುಳಿದಿದೆ ಎಂದ ಪ್ರಕಾಶ್‍ ಬೆಳವಾಡಿ

ಕನ್ನಡ ಚಿತ್ರರಂಗ ಮತ್ತು ಇಲ್ಲಿಯ ಕೆಲವು ಬೆಳವಣಿಗೆಗಳ ಕುರಿತು ಕಲಾವಿದರು ಮತ್ತು ತಂತ್ರಜ್ಞರು ಆಗಾಗ ಬೇಸರ ವ್ಯಕ್ತಪಡಿಸುತ್ತಿರುತ್ತಾರೆ. ಇದೀಗ ನಟ-ನಿರ್ದೇಶಕ ಪ್ರಕಾಶ್‍ ಬೆಳವಾಡಿ, ಕನ್ನಡ ಚಿತ್ರರಂಗದ ಬಗ್ಗೆ ಬೇಸರದಿಂದ ಮಾತನಾಡಿದ್ದಾರೆ. ಬಹುಭಾಷೆಗಳಲ್ಲಿ ನಟಿಸುತ್ತಿರುವ ಅವರು, ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಬಹಳ ಹಿಂದುಳಿದಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ, Rapid Rashmi ನಡೆಸಿಕೊಡುವ ‘ಜಸ್ಟ್ ಕ್ಯೂರಿಯಸ್‍’ ಎಂಬ ಪಾಡ್‍ಕಾಸ್ಟ್ನಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ಕನ್ನಡ ಚಿತ್ರರಂಗ ಹೇಗಿದೆ ಮತ್ತು ಎತ್ತ ಸಾಗುತ್ತಿದೆ ಎಂಬುದರ ಬಗ್ಗೆ ಉದಾಹರಣೆ ಸಮೇತ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಕನ್ನಡದಲ್ಲಿ ನಾನೊಂದು ದೊಡ್ಡ ನಿರ್ಮಾಣ ಸಂಸ್ಥೆಯೊಂದರ ಚಿತ್ರದಲ್ಲಿ ನಟಿಸಿದ್ದೆ. ನಿರ್ದೇಶಕರಿಗೆ ನನಗೆ ಅಷ್ಟೊಂದು ಸಂಭಾವನೆ ಕೊಡುವುದಕ್ಕೆ ಇಷ್ಟವಿರಲಿಲ್ಲ. ಸಂಭಾವನೆ ಕಡಿಮೆ ಮಾಡಿಕೊಳ್ಳುವುದಕ್ಕೆ ನಾನು ತಯಾರಿರಲಿಲ್ಲ. ನಾಲ್ಕು ಕಂತಿನಲ್ಲಿ ಸಂಭಾವನೆ ಕೊಡುವುದಾಗಿ ಹೇಳಿ ಕೊನೆಯ ಕಂತಿನ ಸಂಭಾವನೆ ಕೊಡಲಿಲ್ಲ. ಕೊನೆಯ ದಿನದ ಚಿತ್ರೀಕರಣ ಸಂದರ್ಭದಲ್ಲಿ ಯಾರೋ ನಾಲ್ವರನ್ನು ನನ್ನ ಕ್ಯಾರಾವಾನ್‍ಗೆ ಕಳುಹಿಸಿದರು. ಅವರು ಚೆನ್ನಾಗಿ ಮಾಂಸ ತಿಂದು, ಟಾಯ್ಲೆಟ್‍ಗೆ ಹೋಗಿ ಗಲೀಜು ಮಾಡಿ ಬಂದರು. ಒಳಗೆ ಉಸಿರುಗಟ್ಟಿಸುವಂತಿತ್ತು. ನನಗೆ ಒಳಗಡೆ ಕೂರುವುದಕ್ಕೆ ಸಾಧ್ಯವಾಗಲಿಲ್ಲ. ಕೊನೆಗೆ ಹೊರಗೆ ಹೋಗಿ ಬಿಸಿಲಿನಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಬಂತು’ ಎಂದಿದ್ದಾರೆ.

ಆ ನಿರ್ಮಾಣ ಸಂಸ್ಥೆ ಯಾವದು ಎಂದು ಬಹಿರಂಗಪಡಿಸದ ಅವರು, ಆ ಸಂಸ್ಥೆಯವರನ್ನು ಕಂಡರೆ ತನಗೆ ಭಯ ಮತ್ತು ಇನ್ನೆಂದೂ ಅವರ ಚಿತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದಾರೆ. ‘ಯಾರು, ಯಾವ ಸಂಸ್ಥೆ ಎಂಬ ಹೆಸರು ಬೇಡ. ಅವರ ಕಂಡರೆ ನನಗೆ ಭಯ. ಮತ್ತೊಮ್ಮೆ ಅವಕಾಶ ಕೊಡುತ್ತಾರೋ, ಇಲ್ಲವೋ ಎಂಬ ಭಯವಲ್ಲ. ಅವಕಾಶ ಕೊಟ್ಟರೂ, ನಾನು ಅವರ ಸಂಸ್ಥೆಯ ಚಿತ್ರಗಳಲ್ಲಿ ಇನ್ನು ಮುಂದೆ ನಟಿಸುವುದಿಲ್ಲ. ದಿನಕ್ಕೆ 10 ಲಕ್ಷ ರೂ. ಸಂಭಾವನೆ ಕೊಟ್ಟರೂ ನನಗೆ ಅವರ ಚಿತ್ರ ಬೇಡ’ ಎಂದಿದ್ದಾರೆ.

ಇದು ಅತಿರೇಕದ ವರ್ತನೆ, ಎಲ್ಲರೂ ಆ ರೀತಿ ಇರುವುದಿಲ್ಲ ಎಂದಿರುವ ಪ್ರಕಾಶ್‍ ಬೆಳವಾಡಿ, ‘ಇಲ್ಲಿ ಬಹಳಷ್ಟು ಜನರಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದೇ ಗೊತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಕಾಂಟ್ರಾಕ್ಟ್ (ಕರಾರು) ಅನ್ನುವುದೇ ಇಲ್ಲ. ಬೇರೆ ಎಲ್ಲಾ ಚಿತ್ರರಂಗಗಳಲ್ಲೂ ಇದೆ. ಕನ್ನಡ ಚಿತ್ರರಂಗದಲ್ಲಿ ಮಾತ್ರ ಕಾಂಟ್ರಾಕ್ಟ್ ಎಂಬುದಿಲ್ಲ. ನಾವು ಬಹಳ ಹಿಂದುಳಿದಿದ್ದೇವೆ. ಇದೊಂದು ಅನಾಗರೀಕ ಚಿತ್ರರಂಗ’ ಎಂದು ಬೇಸರವನ್ನು ಹೊರಹಾಕಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಓವೆಲ್ ಮೈದಾನದಲ್ಲಿ ಆಸನಗಳನ್ನು ದುರಸ್ತಿ ಮಾಡಿ

ಮೈಸೂರಿನ ಕ್ರಾಫರ್ಡ್ ಹಾಲ್ ಎದುರಿನ ಓವೆಲ್ ಮೈದಾನದಲ್ಲಿ ಕ್ರೀಡಾಪಟುಗಳು ಪ್ರತಿನಿತ್ಯ ಕ್ರೀಡಾಭ್ಯಾಸ ನಡೆಸುತ್ತಾರೆ. ಸಾರ್ವಜನಿಕರೂ ಬೆಳಿಗ್ಗೆ ಹಾಗೂ ಸಂಜೆಯ ವೇಳೆ…

2 hours ago

ಓದುಗರ ಪತ್ರ: ಒಳಮೀಸಲಾತಿ; ಸಮಾನ ಅವಕಾಶ ಕಲ್ಪಿಸಿ

ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದು, ರಾಜ್ಯ ಸರ್ಕಾರ ಒಳಮೀಸಲಾತಿಯಲ್ಲಿ ಎಡಗೈ ಮತ್ತು ಬಲಗೈ ಪಂಗಡಗಳಿಗೆ ಸಮಾನವಾಗಿ ಸೌಲಭ್ಯ ಕಲ್ಪಿಸಬೇಕು.…

2 hours ago

ಓದುಗರ ಪತ್ರ: ನ್ಯಾಯಾಲಯದ ಬಳಿ ಸಿಗ್ನಲ್ ಲೈಟ್ ಅಳವಡಿಸಿ

ಮೈಸೂರಿನ ವಿವಿಧ ವೃತ್ತಗಳಲ್ಲಿ ಹೊಸದಾಗಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಿದ್ದಾರೆ. ಆದರೆ ಚಾಮರಾಜಪುರಂನ ನ್ಯಾಯಾಲಯದ ಬಳಿ ವಾಹನ ಸಂಚಾರ ಹೆಚ್ಚಾಗಿದ್ದು, ನ್ಯಾಯಾಲಯದ…

2 hours ago

ಓದುಗರ ಪತ್ರ: ನಂದಿ ಭವನ ಮುಂಭಾಗದ ಮೋರಿ ಶುಚಿಗೊಳಿಸಿ

ಚಾಮರಾಜನಗರ ಪಟ್ಟಣದಲ್ಲಿರುವ ನಂದಿ ಭವನದಲ್ಲಿ ಮದುವೆ ಮತ್ತು ಇತರ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮಗಳು ಮುಗಿದ ಮೇಲೆ ಉಳಿದ ಆಹಾರ ಪದಾರ್ಥಗಳನ್ನು…

2 hours ago

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ವಾಟ್ಸಾಪ್ ಹೇಳಿಕೆ, ಡೀಪ್ ಫೇಕ್ ಹಾವಳಿ, ಪಾಪರಾಜಿಗಳ ನಿಯಂತ್ರಣದತ್ತ

ನಕಲಿ ವಿಡಿಯೋಗಳ ಹಾವಳಿ, ಕೃತಕ ಬುದ್ಧಿಮತ್ತೆ ಬಳಸಿ ಡೀಪ್‌ಫೇಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವುದನ್ನು ತಡೆಯುವ…

2 hours ago

ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಚಿರತೆ ಹಾವಳಿ

ಮಹಾದೇಶ್ ಎಂ.ಗೌಡ ನಿರಂತರವಾಗಿ ಚಿರತೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಭೀತಿ ಹನೂರು: ರಾಜ್ಯದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ…

2 hours ago