ಹಲವು ವರ್ಷಗಳ ಕಾಲ ಒಟ್ಟಾಗಿ ವೇದಿಕೆ ಹಂಚಿಕೊಳ್ಳದ ಟಾಲಿವುಡ್ ಬ್ರದರ್ಸ್ ಇದೀಗ ಜೊತೆಯಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸಖತ್ ಬ್ಯುಸಿಯಾಗಿರುವ ತೆಲುಗಿನ ಪವರ್ ಸ್ಟಾರ್ ಪವರ್ ಕಲ್ಯಾಣ್ ಅವರು ತಮ್ಮ ಅಣ್ಣನ ಶೂಟಿಂಗ್ ಸ್ಪಾಟ್‌ಗೆ ಭೇಟಿ ನೀಡಿದ್ದಾರೆ.
ಸದ್ಯ ರಾಜಕೀಯದಿಂದ ದೂರ ಉಳಿದು ‘ವಿಶ್ವಂಭರ’ ಸಿನಿಮಾ ಶೂಟ್ನಲ್ಲಿ ಚಿರಂಜೀವಿ ಬ್ಯುಸಿ ಇದ್ದಾರೆ. ಈ ಸಿನಿಮಾ ಸೆಟ್‌ಗೆ ನಟ ಪವನ್ ಕಲ್ಯಾಣ್ ಭೇಟಿ ನೀಡಿದ್ದಾರೆ.
ಇನ್ನು ‘ವಿಶ್ವಂಭರ’ ಚಿತ್ರತಂಡ ಶೂಟಿಂಗ್ ಸೆಟ್‌ಗೆ ಪವನ್ ಕಲ್ಯಾಣ್ ಭೇಟಿ ನೀಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿದೆ.
2008ರಲ್ಲಿ ಚಿರಂಜೀವಿ ಅವರು ‘ಪ್ರಜಾ ರಾಜ್ಯಂ’ ಪಕ್ಷವನ್ನು ಸ್ಥಾಪಿಸಿದರು. ರಾಜಕೀಯದ ಬಗ್ಗೆ ಗಮನ ಹರಿಸಲು ಅವರು ನಟನೆಗೆ ಒಂದು ಬ್ರೇಕ್ ಕೊಟ್ಟಿದ್ದರು. 10 ವರ್ಷಗಳ ಕಾಲ ಅವರು ರಾಜಕೀಯದಲ್ಲಿ ಬ್ಯುಸಿ ಆದರು. ನಂತರ ಅವರು ಮರಳಿ ಚಿತ್ರರಂಗಕ್ಕೆ ಬಂದಿದ್ದಾರೆ. ಆ ಸಂದರ್ಭದಲ್ಲಿ ಪವನ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದರು. ಈಗ ಪವನ್ ಕಲ್ಯಾಣ್ ರಾಜಕೀಯದಲ್ಲಿ ಬ್ಯುಸಿ ಆಗಿದ್ದು, ಚಿರಂಜೀವಿ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
‘ವಿಶ್ವಂಭರ’ ಸಿನಿಮಾ ಶೂಟ್ನಲ್ಲಿ ಚಿರಂಜೀವಿ, ತ್ರಿಶಾ ಬ್ಯುಸಿ ಇದ್ದರು. ಈ ವೇಳೆ ಪವನ್ ಕಲ್ಯಾಣ್ ಅವರ ಆಗಮನ ಆಗಿದೆ. ಇಬ್ಬರೂ ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಿದ್ದಾರೆ. ಯಾವುದಾದರೂ ರಾಜಕೀಯ ವಿಚಾರ ಚರ್ಚೆಗೆ ಬಂದಿದೆಯೇ ಎನ್ನುವ ಕುತೂಹಲವೂ ಮೂಡಿದೆ. ಪವನ್ ಕಲ್ಯಾಣ್ ಅವರಿಗೆ ಗಿಡ ನೀಡಿ ಸ್ವಾಗತಿಸಲಾಗಿದೆ.
‘ವಿಶ್ವಾಂಭರ’ ಚಿತ್ರವನ್ನು ಮಲ್ಲಿಡಿ ವಸಿಷ್ಠ ಅವರು ನಿರ್ದೇಶನ ಮಾಡುತ್ತಿದ್ದಾರೆ. ಮೆಗಾಸ್ಟಾರ್ ನಟನೆಯ ‘ವಿಶ್ವಂಭರ’ ಸಿನಿಮಾ 2025ರಲ್ಲಿ ರಿಲೀಸ್ ಆಗಲಿದೆ.
ಧನುರ್ಮಾಸ ಆರಂಭವಾದ ಕೂಡಲೇ ಎಲ್ಲೆಡೆ ದೇವಸ್ಥಾನಗಳಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ಬೆಳಗಿನ ಜಾವ ಪೂಜೆ ಆರಂಭವಾಗುತ್ತದೆ. ಮಹಿಳೆಯರು ಬೆಳಗಿನ ಚಳಿಯಲ್ಲಿಯೇ ದೇವಾಲಯಗಳಿಗೆ…
ಮೈಸೂರು : ಚಲಿಸುತ್ತಿದ್ದ ವೇಳೆಯೇ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಹೊತ್ತಿ ಉರಿದಿರುವ ಘಟನೆ…
ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ಪಟ್ಟಣದಿಂದ ಊಟಿ ಮತ್ತು ಸುಲ್ತಾನ್ ಬತ್ತೇರಿಗೆ ಹಾದು ಹೋಗಿರುವ ರಸ್ತೆಗಳಲ್ಲಿ ಮತ್ತು…
ಮೈಸೂರು ನಗರದ ಸಬ್ ಅರ್ಬನ್ ಬಸ್ ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳ ಬಳಿ ಆಟೋಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದು,…
ಹೊಸದಿಲ್ಲಿ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಶಿಲ್ಪಿ ರಾಮ್ ಸುತಾರ್ ಗುರುವಾರ ( 100) ವಿಧಿವಶರಾಗಿದ್ದಾರೆ. ಮಹಾರಾಷ್ಟ್ರದ ಧುಲೆ…
ಕೇರಳ ಅಂತಾರಾಷ್ಟ್ರೀಯ ಚಿತ್ರೋತ್ಸವದ ೩೦ನೇ ಆವೃತ್ತಿ ಕಳೆದ ಶುಕ್ರವಾರ ಉದ್ಘಾಟನೆಯಾಗಿ ಇಂದು ಕೊನೆಯಾಗುತ್ತಿದೆ. ಭಾರತದಲ್ಲಿ ನಡೆಯುತ್ತಿರುವ ಮಾನ್ಯತೆ ಪಡೆದ ಐದು…