karoo2
ಸುಮಾರು ಐದು ವರ್ಷಗಳ ಹಿಂದೆ ‘ಕಮರೊಟ್ಟು ಚೆಕ್‍ಪೋಸ್ಟ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು ಪರಮೇಶ್. ಚಿತ್ರ ಅಷ್ಟಾಗಿ ಓಡದಿದ್ದರೂ, ಮೆಚ್ಚುಗೆಗೆ ಪಾತ್ರವಾಯಿತಂತೆ. ಅದರಿಂದ ಪ್ರೇರಣೆಗೊಂಡು, ಇದೀಗ ‘ಕಮರೊ2’ ಎಂಬ ಮುಂದುವರೆದ ಭಾಗವನ್ನು ನಿರ್ದೇಶಿಸಿದ್ದು, ಚಿತ್ರ ಆಗಸ್ಟ್ 01ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
‘ಕಮರೊ2’ ಚಿತ್ರವನ್ನು ಕನಸು ಪಿಕ್ಚರ್ಸ್ ಸಂಸ್ಥೆಯಡಿ ಪವನ್ ಗೌಡ ನಿರ್ಮಿಸಿದ್ದು, ಪರಮೇಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಸ್ವಾಮಿನಾಥನ್, ರಜನಿ ಭಾರದ್ವಾಜ್, ರಾಘವೇಂದ್ರ ರಾಜಕುಮಾರ್, ಅಶ್ವತ್ಥ್ ನೀನಾಸಂ, ನಾಗೇಂದ್ರ ಅರಸ್ ಮುಂತಾದವರು ನಟಿಸಿದ್ದಾರೆ.
ಈ ಚಿತ್ರದ ನಿರ್ದೇಶಕ ಪರಮೇಶ್, ‘ನಾನು ಈ ಹಿಂದೆ ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಪ್ಯಾರಾ ನರ್ಮಲ್ ಜಾನರ್‌ನ ‘ಕಮರೊಟು ಚೆಕ್‍ಪೋಸ್ಟ್’ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದೆ. ಅದು ನನ್ನ ತಂತ್ರಜ್ಞಾನದ ಅನುಭವಕ್ಕಾಗಿ ಮಾಡಿದ ಚಿತ್ರ. ಅದರಲ್ಲಿ ಯಾವುದೇ ಪರಿಚಿತ ಕಲಾವಿದರು ಅಭಿನಯಿಸಿರಲಿಲ್ಲ. ಆದರೂ ಆ ಚಿತ್ರ ಮೆಚ್ಚುಗೆ ಪಡೆದಿತ್ತು. ಅದರ ಮುಂದುವರೆದ ಭಾಗವಾಗಿ ‘ಕಮರೊ2’ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಇದು ಸಹ ಹಾರಾರ್ ಕಥೆಯೊಂದಿಗೆ ಅತೀಂದ್ರೀಯ ಶಕ್ತಿಗಳ ಕುರಿತಾದ ಚಿತ್ರಕ್ಕೆ ಮಂಗಳೂರಿನ ಉಡುಪಿ, ಚಿಕ್ಕ ಮಂಗಳೂರು ಸುತ್ತಮುತ್ತಲ್ಲಿನಲ್ಲಿ ಚಿತ್ರೀಕರಣ ಆಗಿದೆ’ ಎಂದರು.
ಈ ಚಿತ್ರದ ಕಥೆ ಕೇಳಿದ ಪವನ್ ಗೌಡ ನಿರ್ಮಾಣಕ್ಕೆ ಮುಂದಾದರಂತೆ. ‘ಪ್ರಿಯಾಂಕಾ ಉಪೇಂದ್ರ ಇದುವರೆಗೂ ಮಾಡಿರದ ಪಾತ್ರದಲ್ಲಿ ನಟಿಸಿದ್ದಾರೆ. ಅವರಿಗೆ ಕಥೆ ಹೇಳುವಾಗ ಒಪ್ಪಿಕೊಳ್ಳುತ್ತಾರೊ? ಇಲ್ಲವೊ? ಎಂಬ ಭಯವಿತ್ತು. ಆದರೆ, ಕಥೆ ಕೇಳಿದ ತಕ್ಷಣ ಒಪ್ಪಿಕೊಂಡರು. ಕನ್ನಡದ ‘ಮಿಥುನ ರಾಶಿ’ ಸೇರಿದಂತೆ ತಮಿಳಿನ ಧಾರಾವಾಹಿಗಳಲ್ಲೂ ನಟಿಸಿ ಜನಪ್ರಿಯರಾಗಿರುವ ಅನಂತಸ್ವಾಮಿ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸಹ ಇದ್ದಾರೆ. ಈ ಚಿತ್ರ ಪ್ರೇಕ್ಷಕರನ್ನು ಕುರ್ಚಿ ತುದಿಯಲ್ಲಿ ಕೂರಿಸುವುದರ ಜೊತೆಗೆ ಕೊಟ್ಟ ದುಡ್ಡಿಗೆ ಮೋಸ ಮಾಡದಂತೆ ರೂಪುಗೊಂಡಿದೆ’ ಎಂದರು.
ಪ್ರಿಯಾಂಕ ಉಪೇಂದ್ರಗೆ ಪರಮೇಶ್ ಹೇಳಿದ ಕಥೆ ಬಹಳ ಇಷ್ಟವಾಯಿತಂತೆ. ‘ನನ್ನ ಪಾತ್ರ ಚೆನ್ನಾಗಿದೆ. ಗುಟಮಟ್ಟದಲ್ಲಂತೂ ಯಾವುದೇ ಭಾಷೆಗಳ ಚಿತ್ರಗಳಿಗೂ ಕಡಿಮೆ ಇಲ್ಲದಂತೆ ಬಹಳ ಉತ್ತಮಾವಾಗಿ ಚಿತ್ರಿಸಿದ್ದಾರೆ. ಇಂತಹ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರಬೇಕು’ ಎಂದರು.
‘ಕಮರೊ2’ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ಪ್ರಜ್ವಲ್ ಗೌಡ ಛಾಯಾಗ್ರಹಣವಿದೆ.
ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ…
ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…
ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ ಹಬ್ಬಕ್ಕೆ ಅಗತ್ಯ ಸಿದ್ಧತೆ ವಿರಾಜಪೇಟೆ: ಕೇರಳ ಹಾಗೂ…
ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…
‘ವಿದ್ಯಾವಿಕಾಸ’ ಯೋಜನೆಯಡಿ ಅಗತ್ಯವಿದ್ದರೆ ಚಪ್ಪಲಿ ನೀಡಲು ಸಿದ್ಧತೆ ಮೈಸೂರು: ‘ವಿದ್ಯಾವಿಕಾಸ’ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ೧೦ನೇ…