ಮನರಂಜನೆ

ಆ.22 ಅಲ್ಲ, ಸೆ. 12ರಂದು ‘S/O ಮುತ್ತಣ್ಣ’ ಬಿಡುಗಡೆ …

ಪ್ರಣಾಮ್‍ ಅಭಿನಯದ ‘S/O ಮುತ್ತಣ್ಣ’ ಚಿತ್ರವು ಆಗಸ್ಟ್ 22ರಂದು ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಘೋಷಣೆಯಾಗಿತ್ತು. ಇದೀಗ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ.

ಹೌದು, ಈ ಶುಕ್ರವಾರ ಬಿಡುಗಡೆ ಆಗಬೇಕಿದ್ದ ಪ್ರಣಮ್‍ ದೇವರಾಜ್‍ ಅಭಿನಯದ ‘S/O ಮುತ್ತಣ್ಣ’ ಚಿತ್ರವು ಸೆಪ್ಟೆಂಬರ್.12ಕ್ಕೆ ಮುಂದೂಲ್ಪಟ್ಟಿದೆ. ಕನ್ನಡ, ತೆಲುಗು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗಲಿದೆ. ಇನ್ನು, ಆಗಸ್ಟ್.22ರಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ‘S/O ಮುತ್ತಣ್ಣ’ ಚಿತ್ರಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್‍ ಕೊಮ್ಮೆ ಸಂಕಲನವಿದೆ. ಶ್ರೀಕಾಂತ್‍ ಹುಣಸೂರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಗಿರಿ ಶಿವಣ್ಣ, ತಬಲಾ ನಾಣಿ, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ.

‘S/O ಮುತ್ತಣ್ಣ’ ಹೆಸರೇ ಹೇಳುವಂತೆ ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರ. ಈ ಚಿತ್ರದಲ್ಲಿ ಮುತ್ತಣ್ಣ, ಶಿವು ಎಂಬ ತಂದೆ-ಮಗನಾಗಿ ರಂಗಾಯಣ ರಘು ಹಾಗೂ ಪ್ರಣಮ್‍ ದೇವರಾಜ್‍ ಕಾಣಿಸಿಕೊಂಡಿದ್ದಾರೆ. ಜೊತೆಗೆ ಸಾಕ್ಷಿ ಎಂಬ ಪಾತ್ರದಲ್ಲಿ ಖುಷಿ ರವಿ ನಟಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಕಾಶಿ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ.

ಮನೆಯಲ್ಲಿ ಅಪ್ಪನ ಜೊತೆಗೆ ಹೇಗಿರುತ್ತೀನೋ, ಅದೇ ರೀತಿ ರಘು ಅವರ ಜೊತೆಗೂ ಇದ್ದೇನೆ ಎನ್ನುವ ಪ್ರಣಮ್‍, ‘ಈ ಚಿತ್ರದಲ್ಲಿ ನಟಿಸಿದ್ದಕ್ಕೆ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳಲಿಲ್ಲ. ಮನೆಯಲ್ಲಿ ಅಪ್ಪನ ಜೊತೆಗೆ ಇರುವ ಹಾಗೆಯೇ ಇದ್ದೇನೆ. ಇದೊಂದು ತಂದೆ-ಮಗನ ಬಾಂಧವ್ಯದ ಚಿತ್ರ. ಜೊತೆಗೆ ಪ್ರೇಮ ಕಥಾನಕವೂ ಹೌದು. ಈ ಚಿತ್ರದ ವಿಶೇಷವೆಂದರೆ ಇದರಲ್ಲಿ ಸಾಹಸ ಸನ್ನಿವೇಶಗಳಿಲ್ಲ’ ಎನ್ನುತ್ತಾರೆ.

ಆಂದೋಲನ ಡೆಸ್ಕ್

Recent Posts

ದೆಹಲಿಯಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್‌ ಘೋಷಣೆ

ನವದೆಹಲಿ: ರಾಷ್ಟ್ರ ರಾಜಧಾನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸತತ ಎರಡನೇ ದಿನವೂ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ…

14 hours ago

ರಾಜ್ಯದಲ್ಲಿ ಮತ್ತಷ್ಟು ತಗ್ಗಲಿದೆ ಮಳೆ: ಹವಾಮಾನ ಇಲಾಖೆ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ…

16 hours ago

ನೇಪಾಳಕ್ಕೆ ಮತ್ತೆ ವಿನಾಶಕಾರಿ ಪ್ರವಾಹದ ಎಚ್ಚರಿಕೆ

ಕಠ್ಮಂಡು: ನೇಪಾಳಕ್ಕೆ ಮತ್ತೆ ವಿನಾಶಕಾರಿ ಪ್ರವಾಹದ ಆತಂಕ ಎದುರಾಗಿದೆ. ದಾರ್ಚುಲಾ ಜಿಲ್ಲೆಯ ಅಪಿ ಹಿಮಾಲ್ ಗ್ರಾಮೀಣ ಪುರಸಭೆಯ ಭಟ್ಟಾರ್ ಪ್ರದೇಶದಲ್ಲಿ…

16 hours ago

ಓದುಗರ ಪತ್ರ: ಸಚಿವರಿಬ್ಬರ ಹೇಳಿಕೆಗಳು ‘ಲಕ್ಷ್ಮಣರೇಖೆ’ ಮೀರದಿರಲಿ

ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಜಲಸಂಪನ್ಮೂಲ ಸಚಿವ ಎನ್.ಚಲುವರಾಯ ಸ್ವಾಮಿಯವರ ನಡುವಿನ ಆರೋಪ ಮತ್ತು ಪ್ರತ್ಯಾರೋಪಗಳು…

22 hours ago

ಓದುಗರ ಪತ್ರ: ‘ಸಂಧ್ಯಾ ಕಿರಣ’ ಯೋಜನೆಯ ವ್ಯಾಪ್ತಿಗೆ ವಯೋನಿಗದಿ ಬೇಡ

ಸರ್ಕಾರವು ೭೦ ವರ್ಷದೊಳಗಿನ ನಿವೃತ್ತ ಸರ್ಕಾರಿ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಮತ್ತು ಅವರ ಅರ್ಹ ಅವಲಂಬಿತ ವಿಕಲಚೇತನ ಮಕ್ಕಳ ಆರೋಗ್ಯ…

22 hours ago

ಓದುಗರ ಪತ್ರ: ಗುರು-ಶಿಷ್ಯರ ಸಂಬಂಧ ವರ್ಣನಾತೀತ

ನಮ್ಮಲ್ಲಿ ಗುರುವಿಗೆ ಅಗ್ರಸ್ಥಾನ ಕೊಟ್ಟಿದ್ದೇವೆ. ಒಂದು ಅಕ್ಷರ ಕಲಿಸಿದವರನ್ನು ಗುರುವೆಂದು ಒಪ್ಪಿಕೊಂಡಿದ್ದೇವೆ. ಗುರುವು ನಮಗೆ ಒಳ್ಳೆಯ ಮಾರ್ಗ,ನಡತೆ ಹಾಗೂ ಜ್ಞಾನವನ್ನು…

22 hours ago