ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ‘ರಕ್ತ ಕಾಶ್ಮೀರ’ ಚಿತ್ರವು ಮುಂದಕ್ಕೆ ಹೋಗಿದೆ. ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಮಧ್ಯೆ, ಚಿತ್ರದ ಒಂದು ಹಾಡನ್ನು ಬಾಬು ತೋರಿಸಿದ್ದಾರೆ. ಕನ್ನಡ ಚಿತ್ರರಂಗದ 15 ಪ್ರಮುಖ ನಟರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಾಡಿನ ಕುರಿತು ಮಾತನಾಡುವ ಬಾಬು, ‘ಈ ಹಿಂದೆಯೂ ಈ ತರಹದ್ದೊಂದು ಪ್ರಯತ್ನವಾಗಿರಲಿಲ್ಲ. ಮುಂದೆಯೂ ಆಗುವುದಿಲ್ಲ. ಕನ್ನಡದಲ್ಲೇ ಯಾವ ನಿರ್ದೇಶಕರಿಗೂ 15 ಹೀರೋಗಳನ್ನು ನಿರ್ದೇಶಿಸುವ ತಾಖತ್ತು ಇಲ್ಲ. 15 ಹೀರೋಗಳನ್ನು ಆರು ದಿನಗಳ ಕಾಲ ನಿರ್ದೇಶಿಸುವುದು ಸುಲಭದ ಮಾತಲ್ಲ. ಅಂಥದ್ದರಲ್ಲಿ 15 ಜನರೂ, ನನ್ನ ಹಿರಿತನ, ಅನುಭವ ನೋಡಿ ನನಗೊಂದು ಅವಕಾಶ ಕೊಟ್ಟರು. ಅಂಬರೀಶ್, ವಿಷ್ಣುವರ್ಧನ್, ಶಿವರಾಜಕುಮಾರ್, ಪುನೀತ್, ದರ್ಶನ್, ಜಗ್ಗೇಶ್, ರಮೇಶ್, ಆದಿತ್ಯ, ಶ್ರೀನಾಥ್, ದೊಡ್ಡಣ್ಣ, ಜೈಜಗದೀಶ್ ನಟಿಸಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ.
ಮಲ್ಟಿಸ್ಟಾರರ್ ಚಿತ್ರಗಳು ಮತ್ತೆ ಕನ್ನಡಕ್ಕೆ ಬರಲೇ ಬೇಕು ಎನ್ನುವ ಬಾಬು, ‘ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಲೇ ಇದೆ. ಈ ಹಿಂದೆ ಕೆಲವು ಅಪರೂಪದ ಕಾಂಬಿನೇಷನ್‍ನ ಚಿತ್ರಗಳು ಬಂದಿವೆ. ಅದು ಪುನಃ ಬರಬೇಕು. ನಮ್ಮಲ್ಲಿ ಹಲವು ಹೀರೋಗಳನ್ನಿಟ್ಟುಕೊಂಡು ಚಿತ್ರ ಮಾಡುವ ನಿರ್ದೇಶಕರೇ ಇಲ್ಲ ಎನ್ನುತ್ತಾರೆ. ಅದಕ್ಕೆ ಇದೊಂದು ಹಾಡು ಉದಾಹರಣೆ. ನಿರ್ದೇಶಕರು ಖಂಡಿತಾ ಇದ್ದಾರೆ. ಹೀರೋಗಳು ಮನಸ್ಸು ಮಾಡಬೇಕು. ಕನ್ನಡದಲ್ಲಿ ಇನ್ನೂ ದೊಡ್ಡದೊಡ್ಡ ಚಿತ್ರಗಳನ್ನು ಮಾಡಬೇಕೆಂದರೆ, ಕನ್ನಡದ ಮಣ್ಣಿನ ಕಥೆಗಳು ಇವೆ. ಹೀರೋಗಳು ಸಹ ಇದ್ದಾರೆ. ಆದರೆ, ಅವರೆಲ್ಲಾ ಗೋಡೆ ಕಟ್ಟಿಕೊಂಡಿದ್ದಾರೆ. ಗೋಡೆ ಒಡೆಯಬೇಕು. ಕನ್ನಡ ಚಿತ್ರರಂಗದ ಬೆಳವಣಿಗೆಯನ್ನು ಆ ಗೋಡೆ ನಿಲ್ಲಿಸುತ್ತಿದೆ. ಎಲ್ಲರೂ ಒಟ್ಟಿಗೆ ಸೇರಿ ಒಳ್ಳೆಯ ಸಿನಿಮಾಗಳನ್ನು ಮಾಡಬಹುದು. ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದು ಸುಳ್ಳು. ಅದಕ್ಕೆ ಇಚ್ಛಾಶಕ್ತಿ ಮತ್ತು ಎಲ್ಲರ ಸಹಕಾರ ಬೇಕು. 15 ಹೀರೋಗಳು ಸಹಕಾರ ಕೊಡದಿದ್ದರೆ, ಈ ತರಹದ ಹಾಡು ಮೂಡಿಬರುವುದಕ್ಕೆ ಸಾಧ್ಯವಿರಲಿಲ್ಲ. ಒಂದು ಪ್ರಯತ್ನ ಯಶಸ್ವಿಯಾಗಬೇಕೆಂದರೆ, ಎಲ್ಲರ ಸಹಕಾರ ಮುಖ್ಯ. ಎರಡೂ ಕೈಗಳು ಸೇರಿದರೆ ಹೇಗೆ ಚಪ್ಪಾಳೆಯಾಗುತ್ತದೋ, ಕಲಾವಿದರು ಮತ್ತು ನಿರ್ದೇಶಕರು ಸೇರಿದರೆ ಒಂದೊಳ್ಳೆಯ ಚಿತ್ರವಾಗುತ್ತದೆ’ ಎನ್ನುತ್ತಾರೆ.
ನಮ್ಮಲ್ಲೂ ಬುದ್ಧಿವಂತರಿಗೆ ಅವಕಾಶಗಳು ಸಿಗುತ್ತಿಲ್ಲ ಎನ್ನುವ ಅವರು, ‘ಅವಕಾಶಗಳು ಸಿಕ್ಕರೆ, ನಾವೂ ಯಾರಿಗೂ ಕಡಿಮೆ ಇಲ್ಲ. 70ರ ದಶಕದಿಂದ 90ರ ದಶಕದವರೆಗೂ ನಮ್ಮಲ್ಲಿ ಹಲವು ಪ್ರಯತ್ನಗಳಾಗಿವು. ಭಾರತದಲ್ಲಿ ನಾವೇ ನಂಬರ್ ಒನ್ ಆಗಿದ್ದೆವು. ಶುಕ್ರವಾರದಿಂದ ಭಾನುವಾರದವರೆಗೂ ಭಾರತೀಯ ಚಿತ್ರರಂಗ ಬೆಂಗಳೂರಿನಲ್ಲಿ ಇರುತ್ತಿತ್ತು. ನಾವು ಮಾಡುವ ಕಥೆಗಳ ಬಗ್ಗೆ ಹಲವರಿಗೆ ಆಸಕ್ತಿ ಇತ್ತು. ಒಂದು ಚಿತ್ರ ಗೆದ್ದಿದೆ ಎಂದು ಗೊತ್ತಾದರೆ, ಹಕ್ಕು ಪಡೆಯಲು 10 ಜನ ಬರುತ್ತಿದ್ದರು. ನಮ್ಮ ಹಲವು ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಮತ್ತು ರೀಮೇಕ್ ಆಗಿವೆ’ ಎನ್ನುತ್ತಾರೆ.
MDM ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ರಕ್ತ ಕಾಶ್ಮೀರ’ ಚಿತ್ರದಲ್ಲಿ ಉಪೇಂದ್ರ, ರಮ್ಯಾ ಮುಂತಾದವರು ನಟಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧ ಸಮರ ಸಾರುವ ಈ ಚಿತ್ರದಲ್ಲಿ ಉಪೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಾಮರಾಜನಗರ : ಟೊಮೆಟೊ ದರ ಕುಸಿತ ಖಂಡಿಸಿ, ಬೆಲೆ ತಾರತಮ್ಯ ವಿರೋಧಿಸಿ ತಾಲ್ಲೂಕಿನ ಚಿಕ್ಕಹೊಳೆ ಚೆಕ್‌ಪೋಸ್ಟ್ ಬಳಿ ಸಾಮೂಹಿಕ ನಾಯಕತ್ವದ…
ಅಮೃತಸರ : ಪಂಜಾಬ್ ಪೊಲೀಸರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪೋಷಿತ ಭಯೋತ್ಪಾದಕ ಘಟಕವೊಂದನ್ನು ಭೇದಿಸಿ, ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.…
ಹೊಸದಿಲ್ಲಿ : ಇರಾನ್ ನಮ್ಮ ಜೊತೆ ಮಾತುಕತೆಗೆ ಸಿದ್ಧವಿದೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ತಳ್ಳಿ ಹಾಕಿರುವ…
ನಂಜನಗೂಡು : ನವಜಾತ ಶಿಶುವನ್ನು ನಾಲೆಗೆ ಎಸೆದ ದುರಂತ ಘಟನೆ ನಂಜನಗೂಡು ತಾಲ್ಲೂಕಿನ ನಗರ್ಲೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶ್ರೀ…
ಬಾಗಲಕೋಟೆ : ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ…
ಹನೂರು : ಶ್ರೀಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದಲ್ಲಿ ನಡೆಯುವ ದಾಸೋಹ, ಲಾಡು ಪ್ರಸಾದ ತಯಾರಿಸಲು ಯಾವುದೇ ರೀತಿಯ ಸಿಲಿಂಡರ್ ಕೊರತೆಯಾಗಿಲ್ಲ…