ಅವಿನಾಶ್ ವಿಜಯ್‍ಕುಮಾರ್ ನಿರ್ಮಿಸಿ-ನಿರ್ದೇಶಿಸಿರುವ ‘ಮೈ ಹೀರೋ’ ಎಂಬ ಚಿತ್ರವು ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಿಡುಗಡೆಯಾಗುತ್ತಿದೆ. ದತ್ತಣ್ಣ, ಅಂಕಿತಾ ಅಮರ್, ಪ್ರಕಾಶ್ ಬೆಳವಾಡಿ ಮುಂತಾದವರು ನಟಿಸಿರುವ ಈ ಚಿತ್ರದಲ್ಲಿ ಹಾಲಿವುಡ್‍ನ ಜನಪ್ರಿಯ ನಟ ಎರಿಕ್ ರಾಬರ್ಟ್ಸ್ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿರುವುದು ವಿಶೇಷ.
ಹೌದು, ಹಾಲಿವುಡ್‍ನ ಜನಪ್ರಿಯ ನಟಿ ಜ್ಯೂಲಿಯಾ ರಾಬರ್ಟ್ಸ್ ಅವರ ಸಹೋದರ ಎರಿಕ್ ರಾಬರ್ಟ್ಸ್, ‘ಮೈ ಹೀರೋ’ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ರನ್‍ಅವೇ ಟ್ರೈನ್’, ‘ದಿ ಸ್ಪೆಷಲಿಸ್ಟ್’ ಸೇರಿದಂತೆ ನೂರಾರು ಚಿತ್ರಗಳಲ್ಲಿ ನಟಿಸಿರುವ ಅವರು, ‘ಮೈ ಹೀರೋ’ ಚಿತ್ರದಲ್ಲಿ ಮತ್ತೊಬ್ಬ ಹಾಲಿವುಡ್ ನಟ ಜಿಲಾಲಿ ರಜ್ ಕಲ್ಲಹ್ ಜೊತೆಗೆ ನಟಿಸಿದ್ದಾರೆ.
ಅಮೇರಿಕದಿಂದ ಭಾರತಕ್ಕೆ ಬರುವ ಒಬ್ಬ ವ್ಯಕ್ತಿಯ ಜೀವನದಲ್ಲಿ ನಡೆವ ಒಂದು ಘಟನೆಯೇ ಈ ಚಿತ್ರದ ಕಥಾವಸ್ತು. ಭಾರತಕ್ಕೆ ಬರುವ ಆತನಿಗೆ ಒಬ್ಬ ಹುಡುಗ ಸಿಗುತ್ತಾನೆ. ಅವನ ಮೂಲ ಕರ್ನಾಟಕದಲ್ಲಿರುತ್ತದೆ. ಅವನನ್ನು ಕರೆದುಕೊಂಡು ಆ ವ್ಯಕ್ತಿ ಮಧ್ಯಪ್ರದೇಶದಿಂದ ಕರ್ನಾಕದವರೆಗೂ ಬರುತ್ತಾರೆ. ಇಷ್ಟಕ್ಕೂ ಆ ಹುಡುಗ ಯಾರು ಮತ್ತು ಆತ ಮಧ್ಯಪ್ರದೇಶದಲ್‍ಲೇಕೆ ಇರುತ್ತಾನೆ ಎನ್ನುವುದೇ ಚಿತ್ರದ ಕಥೆ.
ಎರಿಕ್ ರಾಬರ್ಟ್ಸ್ ಅವರಿಗೆ ಸಂಭಾವನೆ ಕೊಡುವುದಕ್ಕೆ ತಮ್ಮಿಂದ ಸಾಧ್ಯವಿರಲಿಲ್ಲ ಎಂದ ಅವಿನಾಶ್, ‘ಹಾಲಿವುಡ್‍ನಲ್ಲಿ ದೊಡ್ಡ ನಟ ಅವರು. ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅವರು ನಟಿಸಿದ್ದಾರೆ. ಅವರಿಗೆ ಸ್ಕ್ರಿಪ್ಟ್ ಕಳಿಸಿದ್ದೆ. ಅವರಿಗೆ ಇಷ್ಟವಾಗಿತ್ತು. ಅವರ ಸಂಭಾವನೆ ಕೊಡುವುದಕ್ಕೆ ನಮ್ಮಿಂದ ಸಾಧ್ಯವಿರಲಿಲ್ಲ. ಈ ವಿಷಯ ಹೇಳುವುದಕ್ಕೆ ಬಹಳ ಮುಜುಗರವಾಗಿತ್ತು. ಆದರೂ ನಾವು ನೇರವಾಗಿಯೇ ಹೇಳಿದೆವು. ತಮಗೆ ಕಥೆ ಮತ್ತು ಪಾತ್ರ ಇಷ್ಟವಾಯ್ತು ಎಂದು ಚಿತ್ರದಲ್ಲಿ ನಟಿಸಿವುದಕ್ಕೆ ಒಪ್ಪಿಕೊಂಡರು’ ಎಂದರು ಅವಿನಾಶ್.
ಇದೊಂದು ನೈಜ ಘಟನೆಯನ್ನಾಧರಿಸಿದ ಚಿತ್ರವಂತೆ. ಈ ಕುರಿತು ಮಾತನಾಡುವ ಅವಿನಾಶ್ ವಿಜಯಕುಮಾರ್, ‘ವರ್ಣಭೇದ ಮತ್ತು ಹಿಂದಿಳಿದ ಸಮುದಾಯಗಳ ಶೋಷಣೆ ಬಗ್ಗೆ ಆಗಾಗ ಓದುತ್ತಲೇ ಇರುತ್ತೇವೆ. ಕೆಲವು ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಒಂದು ವರದಿ ಪ್ರಕಟವಾಗಿತ್ತು. ಅದು ಈ ಚಿತ್ರಕ್ಕೆ ಮೂಲ ಪ್ರೇರಣೆ. ದಲಿತ ಹುಡುಗನೊಬ್ಬ ದೇವರು ಮುಟ್ಟಿದ್ದಕ್ಕೆ ಜನ ಅವನನ್ನು ಊರು ಬಿಟ್ಟು ಓಡಿಸಿದ್ದರು. ಅದಕ್ಕೂ ಮುನ್ನ, ಹಾಲಿವುಡ್ ನಟ ಸಿಲಿವೆಸ್ಟರ್ ಸ್ಟಲೋನ್ ಕೆಲವು ವರ್ಷಗಳ ಹಿಂದೆ ಭಾರತಕ್ಕೆ ಬಂದು ತಮ್ಮ ಮೃತ ಮಗನ ಶ್ರಾದ್ಧ ಮಾಡಿದ್ದರು. ಇವೆರಡೂ ವಿಷಯಗಳನ್ನು ಸೇರಿಸಿ ಒಂದು ಕಥೆ ಮಾಡಿದ್ದೇನೆ. ವಿದೇಶದಿಂದ ಬರುವ ವ್ಯಕ್ತಿಯಾಗಿ ಜಿಲಾಲಿ ರಜ್ ಕಲ್ಲಹ್ ಕಾಣಿಸಿಕೊಂಡರೆ, ಕರ್ನಾಟಕದಿಂದ ಮಧ್ಯಪ್ರದೇಶಕ್ಕೆ ಹೋಗುವ ಹುಡುಗನಾಗಿ ಬಾಲನಟ ವೇದಿಕ್ ಅಭಿನಯಿಸಿದ್ದಾರೆ’ ಎಂದರು.
ಇದು ಎಲ್ಲಾ ಕಡೆ ಸಲ್ಲುವಂತಹ ಒಂದು ಕಥೆ ಎನ್ನುವ ಅವಿನಾಶ್, ‘ಅಮೇರಿಕಾದಂತಹ ದೇಶಗಳಲ್ಲಿ ಈಗಲೂ ವರ್ಣಭೇದವಿದೆ. ಪ್ರಪಂಚದಾದ್ಯಂತ ಶ್ರೀಮಂತ-ಬಡವ ಎಂಬ ತಾರತಮ್ಯವಿದ್ದೇ ಇದೆ. ಅದೆಲ್ಲವನ್ನೂ ಇಲ್ಲಿ ಸೂಚ್ಯವಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ. ಇದೊಂದು ಮನರಂಜನಾತ್ಮಕ ಚಿತ್ರವಾಗಿರುತ್ತದೆ. ಚಿಕ್ಕಮಗಳೂರು, ಮಧ್ಯಪ್ರದೇಶ, ಅಮೇರಿಕಾ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ಚಿತ್ರದ ಶೇ. 60ರಷ್ಟು ಭಾಗದಲ್ಲಿ ಇಂಗ್ಲೀಷ್ ಇರುತ್ತದೆ. ಪಿವಿಆರ್-ಐನಾಕ್ಸ್ ಈ ಚಿತ್ರವನ್ನು ಎಲ್ಲೆಡೆ ಬಿಡುಗಡೆ ಮಾಡುತ್ತಿದೆ’ ಎಂದರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…