Midnight duet by Muthanna’s son...
ಏಳು ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು ದೇವರಾಜ್ ಅವರ ಎರಡನೇ ಮಗ ಪ್ರಣಾಮ್ ಅಭಿನಯದ ಮೊದಲ ಚಿತ್ರ ‘ಕುಮಾರ್ 21 ಎಫ್’. ಆ ಚಿತ್ರದ ನಂತರ ಪ್ರಣಾಮ್ ಇನ್ನೊಂದಿಷ್ಟು ಚಿತ್ರಗಳಲ್ಲಿ ನಟಿಸಿದರಾದರೂ, ಯಾವುದೂ ಬಿಡುಗಡೆಯಾಗಿಲ್ಲ. ಈ ಮಧ್ಯೆ, ಪ್ರಣಾಮ್ ಅಭಿನಯದ ಎರಡನೇ ಚಿತ್ರ ಏಳು ವರ್ಷಗಳ ನಂತರ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಪ್ರಣಾಮ್ ಅಭಿನಯದ ‘S/O ಮುತ್ತಣ್ಣ’ ಚಿತ್ರವು ಆಗಸ್ಟ್.22ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಸಂಜಿತ್ ಹೆಗ್ಡೆ ಹಾಡಿರುವ ‘ಮಿಡ್‍ನೈಟ್ ರಸ್ತೆಯಲ್ಲಿ…’ ಎಂಬ ಹಾಡನ್ನು ಯೋಗರಾಜ್ ಭಟ್ ಬರೆದಿದ್ದು, ಸಚಿನ್ ಬಸ್ರೂರು ಸಂಗೀತ ಸಂಯೋಜಿಸಿದ್ದಾರೆ. ಧನಂಜಯ್ ಮಾಸ್ಟರ್ ನೃತ್ಯ ಸಂಯೋಜಿಸಿರುವ ಈ ಹಾಡಿಗೆ ಪ್ರಣಾಂ ಮತ್ತು ಖುಷಿ ಹೆಜ್ಜೆ ಹಾಕಿದ್ದಾರೆ.
ತಂದೆ-ಮಗನ ಬಾಂಧವ್ಯದ ಕುರಿತಾದ ಈ ಚಿತ್ರವನ್ನು ಶ್ರೀಕಾಂತ್ ಹುಣಸೂರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಕುರಿತು ಮಾತನಾಡುವ ಅವರು, ‘2018ರಲ್ಲಿ ಮಾಡಿಕೊಂಡ ಕಥೆ ಇದು. ನನಗೆ ಆ ಸಮಯದಲ್ಲಿ ಬಜೆಟ್ ಇರಲಿಲ್ಲ. ನಾವೇ ಗೆಳೆಯರು ಒಂದಿಷ್ಟು ಜನ ಸೇರಿ ಈ ಚಿತ್ರವನ್ನು ನಿರ್ಮಿಸಬೇಕೆಂಬ ಯೋಚನೆ ಇತ್ತು. ಆ ಸಂದರ್ಭದಲ್ಲಿ ಪುರಾತನ ಫಿಲಂಸ್‍ನವರು ಪರಿಚಯಾಗಿ ಚಿತ್ರ ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದರು. ಈ ಚಿತ್ರಕ್ಕೆ ಪ್ರಣಾಮ್ ಸೂಕ್ತ ಎಂದರು. ಅವರ ಮನೆಗೆ ಹೋದಾಗ ದೇವರಾಜ್ ಅವರ ಭೇಟಿ ಆಯ್ತು. ಈ ಚಿತ್ರದಲ್ಲಿ ಐಟಂ ಸಾಂಗ್ ಇಲ್ಲ, ಫೈಟ್ ಇಲ್ಲ, ಕಮರ್ಷಿಯಲ್ ಅಂಶಗಳಿಲ್ಲ, ಮಲಯಾಳಂ ಚಿತ್ರದ ಫೀಲ್ ಕೊಡುವಂತಹ ಚಿತ್ರ ಇದು ಎಂದೆ. ಪ್ರಣಾಮ್‍ಗೆ ಈ ತರಹದ ಕಥೆ ಬೇಕು ಎಂದು ದೇವರಾಜ್ ಒಪ್ಪಿಕೊಂಡರು. ಅಲ್ಲಿಂದ ಚಿತ್ರ ಶುರುವಾಯ್ತು’ ಎಂದರು.
ಚಿತ್ರದಲ್ಲಿ ಪ್ರಣಾಂ ಮತ್ತು ಅವರ ತಂದೆ ಪಾತ್ರ ಮಾಡಿರುವ ರಂಗಾಯಣ ರಘು ಇಬ್ಬರೂ ಪೈಪೋಟಿಯಲ್ಲಿ ನಟಿಸಿದ್ದಾರೆ ಎನ್ನುವ ಶ್ರೀಕಾಂತ್, ‘ಮುತ್ತಣ್ಣ, ಶಿವು ಎರಡು ಪಾತ್ರಗಳೂ ಅದ್ಭುತವಾಗಿದೆ. ಇನ್ನು, ಈ ಹಾಡನ್ನು ಕೇವಲ ಎರಡು ದಿನಗಳಲ್ಲಿ ಮಾಡಿದ್ದೇವೆ. ಈ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರಣಾಂ ಅವರ ನೃತ್ಯದ ವೇಗಕ್ಕೆ ಖುಷಿ ಮ್ಯಾಚ್ ಮಾಡಿದ್ದಾರೆ. ಮೊದಲೇ ಕೆಲವು ದಿನಗಳ ಕಾಲ ರಿಹರ್ಸಲ್ ಮಾಡಿ ಕೇವಲ ಎರಡು ದಿನಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ’ ಎಂದರು.
ಈ ಚಿತ್ರ ತನ್ನ ಪಾಲಿಗೆ ರೀಲಾಂಚ್ ಇದ್ದಂತೆ ಎನ್ನುವ ಪ್ರಣಾಮ್, ‘ಈ ಚಿತ್ರದಲ್ಲಿ ನಟಿಸಿದ್ದಿಕ್ಕೆ ಯಾವುದೇ ಪೂರ್ವತಯಾರಿ ಮಾಡಿಕೊಳ್ಳಲಿಲ್ಲ ಎನ್ನುವ ಪ್ರಣಾಮ್, ‘ನಾನು ಮನೆಯಲ್ಲಿ ಅಪ್ಪನ ಜೊತೆಗೆ ಹೇಗಿರುತ್ತೀನೋ, ಅದೇ ರೀತಿ ರಘು ಅವರ ಜೊತೆಗೂ ಇದ್ದೇನೆ. ಇದೊಂದು ತಂದೆ – ಮಗನ ಬಾಂಧವ್ಯದ ಚಿತ್ರ. ಜೊತೆಗೆ ಪ್ರೇಮ ಕಥಾನಕವೂ ಹೌದು. ಈ ಚಿತ್ರದ ವಿಶೇಷವೆಂದರೆ ಇದರಲ್ಲಿ ಸಾಹಸ ಸನ್ನಿವೇಶಗಳಿಲ್ಲ’ ಎಂದರು.
ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ‘S/O ಮುತ್ತಣ್ಣ’ ಚಿತ್ರಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಶ್ರೀಕಾಂತ್ ಹುಣಸೂರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಗಿರಿ ಶಿವಣ್ಣ, ತಬಲಾ ನಾಣಿ, ಸುಧಾ ಬೆಳವಾಡಿ, ಸುಚೇಂದ್ರ ಪ್ರಸಾದ್ ಮುಂತಾದವರು ನಟಿಸಿದ್ದಾರೆ.
ಬಾರಾಮತಿ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರಿಂದು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ದುರಂತ ಸಂಭವಿಸುವ ಕೇವಲ 23 ನಿಮಿಷಗಳ ಮೊದಲು…
ಬೆಂಗಳೂರು: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ನಿಧನರಾಗಿದ್ದು, ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.…
ನವದೆಹಲಿ: ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನರಾಗಿದ್ದಾರೆ. ಅಜಿತ್…
ಬಾರಾಮತಿ: ಮಹಾರಾಷ್ಟ್ರದ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಡಿಸಿಎಂ ಅಜಿತ್ ಪವಾರ್ ಸಾವನ್ನಪ್ಪಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ…
ಬೆಲೆಯಲ್ಲಿ ನಾವು ತಗ್ಗೋದೇ ಇಲ್ಲ ಅಂತ ಚಿನ್ನ ಬೆಳ್ಳಿ! ಬೆಲೆ ಎಷ್ಟಾದರೂ ನಾವು ಬಗ್ಗೋದೇ ಇಲ್ಲ ಅಂತ ಕೆಲ ಗ್ರಾಹಕರು…
ವಿದೇಶಿ ನೆಲದಲ್ಲಿ ದೇಶವನ್ನು ಟೀಕಿಸುವುದಿಲ್ಲ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಿಲುವು ಸ್ವಾಗತಾರ್ಹವಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲೇ ಅವರು…