ಮುಂಬೈ : ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಇತ್ತು. ಅಲ್ಲದೇ ಇಬ್ಬರೂ ಎಂಗೇಜ್ ಆಗಿದ್ದಾರೆ. 2026ರ ಫೆಭ್ರವರಿಯಲ್ಲೇ ಈ ಜೋಡಿ ಹಸೆಮಣೆ ಏರುತ್ತಿದ್ದಾರೆ. ಉದಯಪುರದ ಅರಮನೆಯಲ್ಲಿ ಮದುವೆ ನಡೆಯಲಿದೆ ಎಂಬೆಲ್ಲ ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಲೇ ಇದೆ. ಆದರೆ ಇದು ಯಾವುದಕ್ಕೂ ಈ ಜೋಡಿ ಎಲ್ಲಿಯೂ ಉತ್ತರಿಸಿಲ್ಲ.
ಇದೀಗ ಎಲ್ಲ ವದಂತಿಗಳಿಗೆ ನಟಿ ರಶ್ಮಿಕಾ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ರಶ್ಮಿಕಾ ಅವರು ವಿಜಯ್ ದೇವರಕೊಂಡ ಅವರನ್ನ ಮದುವೆ ಆಗುವುದಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. ಫ್ಯಾನ್ಸ್‌ವೊಬ್ಬರು ಕೇಳಿದ ಪ್ರಶ್ನೆಗೆ ಮುಗುಳುನಕ್ಕ ನಟಿ ನೇರವಾಗಿ ಉತ್ತರಿಸಿದ್ದಾರೆ. ಆ ರೂಮರ್ಸ್ ಎಲ್ಲರಿಗೂ ಗೊತ್ತಿದೆ, ಅದು ಸತ್ಯ ಎಂದಿದ್ದಾರೆ. ಇದೇ ವೇಳೆ ಮದುವೆ ಆಗೋದಾದ್ರೆ ಯಾರನ್ನ ಆಗ್ತೀರಾ ಎಂಬ ಫ್ಯಾನ್ ಪ್ರಶ್ನೆಗೆ ಹಿಂದೆ ಮುಂದೆ ಯೋಚನೆ ಮಾಡದೇ ವಿಜಯ್‌ನ ಮದುವೆ ಆಗ್ತೀನಿ ಎಂದಿದ್ದಾರೆ.
ಇದನ್ನು ಓದಿ: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ; ಮದುವೆ ಯಾವಾಗ?
ಎಲ್ಲಿ ಮದುವೆ?
ಸಹಜವಾಗಿ ದಕ್ಷಿಣ ಭಾರತದಲ್ಲಿ ಮದುವೆಯನ್ನು ಹುಡುಗಿಯ ಮನೆಯವರೇ ನಡೆಸಿಕೊಡುವುದರಿಂದ ರಶ್ಮಿಕಾ ಅವರ ತವರೂರಾದ ಕೊಡಗಿನಲ್ಲೇ ಮದುವೆ ನಡೆಯುಬಹುದು ಎಂದು ಕೆಲವರು ಊಹಿಸಿದ್ದರು. ಇನ್ನೂ ಕೆಲವರು ರಶ್ಮಿಕಾ ಅವರು ತೆಲುಗು ಚಿತ್ರರಂಗದಲ್ಲೇ ಈಗ ಹೆಚ್ಚು ಸಕ್ರಿಯವಾಗಿರುವುದರಿಂದ ಮದುವೆ ಹೈದರಾಬಾದ್ ನಲ್ಲೇ ನಡೆಯಬಹುದು ಎಂದು ಊಹಿಸಿದ್ದರು. ಆದ್ರೆ ಇವರಿಬ್ಬರ ಮದುವೆ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ರಾಜಸ್ಥಾನದ ಉದಯಪುರದ ಅರಮನೆಯೊಂದರಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ. ಇದಕ್ಕಾಗಿ ಅಲ್ಲಿನ ಐಷಾರಾಮಿ ಪ್ಯಾಲೇಸ್-ಹೋಟೆಲೊಂದರ ಹುಡುಕಾಟದಲ್ಲಿ ರಶ್ಮಿಕಾ ಮದುವೆ ಜವಾಬ್ದಾರಿ ಹೊತ್ತಿರುವ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದು ಹುಡುಕಾಟ ನಡೆಸಿದೆ. ಮೂರು ಪ್ಯಾಲೇಸ್ ಹೋಟೆಲ್‌ಗಳನ್ನ ಫೈನಲೈಸ್ ಮಾಡಲಾಗಿದ್ದು ಅವುಗಳಲ್ಲೊಂದನ್ನು ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ ಎನ್ನಲಾಗಿದೆ.
ನವೀನ್ ಡಿಸೋಜ ಮಡಿಕೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳ ಸಾಧನೆ ಜಿಲ್ಲೆಯಾದ್ಯಂತ ನಿರಂತರ ವ್ಯಾಪಕ ತಪಾಸಣಾ ಕ್ರಮ ಮಡಿಕೇರಿ: ಪ್ರಾದೇಶಿಕ…
ನಾಗರಹೊಳೆ ಅರಣ್ಯದ ಮಧ್ಯಭಾಗದಲ್ಲಿರುವ ದೇವಸ್ಥಾನಕ್ಕೆ ವಿವಿಧೆಡೆಯಿಂದ ಸಾವಿರಾರು ಮಂದಿ ಭೇಟಿ ಪಿರಿಯಾಪಟ್ಟಣ: ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ಮೀಸಲು…
ಎಂ.ಗೂಳೀಪುರ ನಂದೀಶ್ ಕೆಸ್ತೂರು ಪ್ರೌಢಶಾಲೆಯ ಸುತ್ತುಗೋಡೆಯಲ್ಲಿ ಕನ್ನಡ ಸಾಹಿತಿಗಳ, ಸಾಧಕರ ಸೊಗಸಾದ ಚಿತ್ರಗಳ ಚಿತ್ತಾರ ಯಳಂದೂರು: ಶಾಲೆಯ ಸುತ್ತುಗೋಡೆಯಲ್ಲಿ ರಾರಾಜಿಸುತ್ತಿರುವ…
ಎಂ.ಬಿ.ರಂಗಸ್ವಾಮಿ ಮೂಗೂರಿನ ತ್ರಿಪುರ ಸುಂದರಿ ದೇಗುಲದ ನೂತನ ಕಲ್ಯಾಣಿಯಲ್ಲಿ ೪ ವರ್ಷಗಳಿಂದ ನಡೆಯದ ತೆಪ್ಪೋತ್ಸವ ಮೂಗೂರು: ಐತಿಹಾಸಿಕ ಹಿನ್ನೆಲೆಯುಳ್ಳ ಧಾರ್ಮಿಕ…
ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ನಡೆದಿದೆ ಎನ್ನಲಾದ ಹಗರಣದ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮಾಜಿ ಆಯುಕ್ತ ದಿನೇಶ್…