ಮನರಂಜನೆ

ಬೆಂಗಳೂರು ಬಿಟ್ಟು ದೂರ ತೀರದಲ್ಲಿ ಚಿತ್ರ ತೋರಿಸಿದ ಮಂಸೋರೆ

ಸಾಮಾನ್ಯವಾಗಿ ಒಂದು ಚಿತ್ರದ ಪ್ರೀಮಿಯರ್‌ ಪ್ರದರ್ಶನ ಬೆಂಗಳೂರಿನಲ್ಲಿ ನಡೆದು, ಆ ನಂತರ ಬೇರೆ ಊರುಗಳಲ್ಲಿ ಚಿತ್ರ ಬಿಡುಗಡೆಯಾಗುತ್ತದೆ. ಈ ವಾರ ಬಿಡುಗಡೆಯಾಗುತ್ತಿರುವ ತಮ್ಮ ‘ದೂರ ತೀರ ಯಾನ’ ಚಿತ್ರದ ಮೂಲಕ ಹೊಸ ಪ್ರಯೋಗವನ್ನು ಮಂಸೋರೆ ಮಾಡುತ್ತಿದ್ದಾರೆ. ಈಗಾಗಲೇ ಅವರು ತಮ್ಮ ಚಿತ್ರವನ್ನು ಬೆಂಗಳೂರಿಗೂ ಮೊದಲೇ ಧಾರವಾಡದ ಪದ್ಮ ಚಿತ್ರಮಂದಿರದಲ್ಲಿ ತೋರಿಸಿದ್ದಾರೆ.

ಇಷ್ಟಕ್ಕೂ ಬೆಂಗಳೂರು ಬಿಟ್ಟು, ಧಾರವಾಡದಲ್ಲಿ ಮಂಸೋರೆ ಚಿತ್ರ ತೋರಿಸಿದ್ದು ಯಾಕೆ? ಈ ಕುರಿತು ಮಾತನಾಡಿರುವ ಅವರು, ‘ಧಾರವಾಡದಲ್ಲಿ ಪ್ರೀಮಿಯರ್‍ ಶೋ ಮಾಡಿದ್ದೇವೆ. ಸಾಮಾನ್ಯವಾಗಿ, ನಾವು ಬೆಂಗಳೂರಿನಲ್ಲಿ ಸೆಲೆಬ್ರಿಟಿಗಳನ್ನು ಕರೆದು ಪ್ರೀಮಿಯರ್‍ ಶೋ ಮಾಡುತ್ತೇವೆ. ಇಲ್ಲಿ ಸಿಕ್ಕ ಪ್ರತಿಕ್ರಿಯೆನ್ನು ಕರ್ನಾಟಕದ ಜನರ ಜೊತೆಗೆ ಹಂಚಿಕೊಳ್ಳುತ್ತೇವೆ. ಮೊದಲು ಪ್ರೇಕ್ಷಕರು ಚಿತ್ರ ನೋಡಲಿ, ಆ ನಂತರ ಸೆಲೆಬ್ರಿಟಿಗಳು ಚಿತ್ರ ನೋಡಲಿ ಎಂಬುದು ನಮ್ಮ ಉದ್ದೇಶ. ಪ್ರೇಕ್ಷಕರೇ ನಮ್ಮ ಚಿತ್ರದ ಸೆಲೆಬ್ರಿಟಿ.‌ ಅವರು ನೋಡಿ ನಮ್ಮ ಚಿತ್ರ ಚೆನ್ನಾಗಿದೆ ಎಂದು ಇನ್ನೊಬ್ಬರಿಗೆ ಹೇಳಿದಾಗ ಖಂಡಿತವಾಗಿ ಹೆಚ್ಚಿನ ಜನರು ಚಿತ್ರಮಂದಿರಗಳಿಗೆ ಬರುತ್ತಾರೆ. ಸಿನಿಮಾ ಬದುಕಿರುವುದೇ ಪ್ರೇಕ್ಷಕರಿಂದ. ಪ್ರೇಕ್ಷಕರು ನೋಡಿದರೆ ಮಾತ್ರ ಚಿತ್ರ ಮಾಡಬಹುದು. ಚಿತ್ರ ತಯಾರಕರು ಮತ್ತು ಪ್ರೇಕ್ಷಕರು ಒಂದು ಗಾಡಿಗೆ ಎರಡು ಚಕ್ರಗಳಿದ್ದಂತೆ. ಅವೆರಡೂ ಜೊತೆಯಾಗಿ ಹೋದರೆ ಮಾತ್ರ, ಸಿನಿಮಾ ತಯಾರಾಗುತ್ತದೆ. ಒಂದು ಚಕ್ರ ಪಕ್ಕಕ್ಕೆ ಹೋದರೂ, ಇಡೀ ಬಾಡಿ ಅಲ್ಲೇ ಉಳಿಯುತ್ತದೆ’ ಎಂದರು.

ಕನ್ನಡದಲ್ಲಿ ನಡೆಯುತ್ತಿರುವ ಒಳ್ಳೆಯ ಪ್ರಯತ್ನಗಳ ಬಗ್ಗೆ ಬೇರೆ ಕಡೆ ಗಮನಸೆಳೆಯುವ ಪ್ರಯತ್ನ ಇದು ಎಂದ ಮಂಸೋರೆ, ‘ಇಂಟರ್ನೆಟ್‍ ಬರುವ ಮುನ್ನ ಸುದ್ದಿ ಎಲ್ಲರಿಗೂ ಸರಿಯಾಗಿ ತಲುಪುತ್ತಿತ್ತು. ಆದರೆ, ಇಂಟರ್ನೆಟ್‍ ಬಂದ ಮೇಲೆ, ಒಂದು ಪೋಸ್ಟರ್ ಒಂದು ಪ್ರದೇಶ ಬಿಟ್ಟು ಇನ್ನೊಂದು ಕಡೆ ಹೋಗಲ್ಲ. ನಮ್ಮ ಪ್ರಚಾರ ಸರಿಯಾಗಿ ತಲುಪುತ್ತಿಲ್ಲ. ಎಷ್ಟೋ ಬಾರಿ ಒಳ್ಳೆಯ ಸಿನಿಮಾಗಳು ಬಂದರೂ, ಅದು ಬೇರೆ ಕಡೆ ತಲುಪುವುದಿಲ್ಲ. ಹಾಗಾಗಿ, ನಾವು ನಮ್ಮ ಚಿತ್ರವನ್ನು ಬೇರೆ ಪ್ರದೇಶದಲ್ಲಿ ತೋರಿಸಿ, ಅಲ್ಲಿ ಜನ ಚಿತ್ರ ನೋಡಿ, ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಒಳ್ಳೆಯ ಪ್ರಯತ್ನಗಳ ಬಗ್ಗೆ ಅಲ್ಲೂ ವಿಷಯಗಳು ಮುಟ್ಟಲಿ ಎಂಬ ನಂಬಿಕೆ ಮೇಲೆ ಈ ಪ್ರದರ್ಶನ ಮಾಡಿದ್ದೇವೆ. ಈ ಚಿತ್ರವನ್ನು ಹೆಚ್ಚಾಗಿ ಮಲ್ಟಿಪ್ಲೆಕ್ಸ್‌ಗಳಲ್ಲೇ ನಾವು ಬಿಡುಗಡೆ ಮಾಡುತ್ತಿದ್ದೇವೆ’ ಎಂದರು.

ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ದೂರ ತೀರ ಯಾಬ’ ಚಿತ್ರವನ್ನು ಡಿ ಕ್ರಿಯೇಶನ್ಸ್ ಬ್ಯಾನರ್‍ ಅಡಿ ದೇವರಾಜ್‍ ನಿರ್ಮಿಸಿದ್ದಾರೆ. ಇದು ಅವರ ನಿರ್ಮಾಣದ ಐದನೇ ಚಿತ್ರ. ಪ್ರಯಾಣದಲ್ಲಿ ನಡೆಯುವ ಪ್ರೇಮಕಥೆ ಇರುವ ಈ ಚಿತ್ರಕ್ಕೆ ಮಂಸೋರೆ ಕಥೆ ಬರೆದಿದ್ದಾರೆ. ಚೇತನಾ ತೀರ್ಥಹಳ್ಳಿ ಸಂಭಾಷಣೆ ಬರೆದಿದ್ದಾರೆ.

‘ದೂರ ತೀರ ಯಾನ’ ಚಿತ್ರದಲ್ಲಿ ವಿಜಯ್‍ ಕೃಷ್ಣ, ಪ್ರಿಯಾಂಕಾ ಜೊತೆಗೆ ಶ್ರುತಿ ಹರಿಹರನ್‍, ಶರತ್ ಲೋಹಿತಾಶ್ವ, ಅರುಣ್‍ ಸಾಗರ್‍ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಶೇಖರ್‍ ಚಂದ್ರ ಛಾಯಾಗ್ರಹಣ ಮತ್ತು ಬಕ್ಕೇಶ್‍ ಸಂಗೀತವಿದೆ.

ಆಂದೋಲನ ಡೆಸ್ಕ್

Recent Posts

ಹೊರ್ಮುಜ್‌ ಬಿಕ್ಕಟ್ಟು | ಇರಾನ್‌ನ ಬಂದರುಗಳಿಗೆ ಅಮೆರಿಕದ ದಿಗ್ಬಂಧನ ಪ್ರಾರಂಭ

ಟೆಹ್ರಾನ್‌ : ಇರಾನಿನ ಬಂದರುಗಳು ಸಾಗುವ ಸಮುದ್ರ ಸಂಚಾರದ ಮೇಲೆ ಅಮೆರಿಕ ಮಿಲಿಟರಿ ದಿಗ್ಬಂಧನವನ್ನು ನಿಗದಿತ ಗಡುವಿನಂತೆ ಆರಂಭಿಸಿದೆ. ಈ…

8 hours ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ : ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ : ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮಧ್ಯಂತರ…

9 hours ago

ಅನಗತ್ಯ ಹೇಳಿಕೆ ನೀಡಿದರೆ ಶಿಸ್ತುಕ್ರಮ ; ಕೈ ಶಾಸಕರಿಗೆ ಡಿ.ಕೆ.ಶಿ ಎಚ್ಚರಿಕೆ

ಬೆಂಗಳೂರು : ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ…

9 hours ago

ಹೆದ್ದಾರಿ ತಡೆದು ಪ್ರತಿಭಟನೆ : ಬಂಡೀಪುರ ರಾತ್ರಿ ಸಂಚಾರ ತೆರವು ಮಾಡದಂತೆ ಆಗ್ರಹ

ಚಾಮರಾಜನಗರ : ವಯನಾಡು ಸಂಸದೆ ಪ್ರಿಯಾಂಕ ವಾದ್ರಾ ಅವರು ಬಂಡೀಪುರ ರಾತ್ರಿ ಸಂಚಾರ ನಿಷೇಧ ಮುಕ್ತ ಮಾಡುವುದಾಗಿ ಹೇಳಿರುವುದು ಮತ್ತು…

10 hours ago

ಕೊಡಗು | ತೆರೆದ ಬಾವಿಗೆ ಬಿದ್ದ ಕಾಡಾನೆ ಮರಿ , ರಕ್ಷಣೆ

ಮಡಿಕೇರಿ : ಕಾಡಾನೆ ಮರಿಯೊಂದು ಬಾವಿಗೆ ಬಿದ್ದು ನರಳಾಡಿದ ಘಟನೆ ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಪೆರಾಜೆ ಸಮೀಪದ ಕಲ್ಚೆರ್ಪೆಯಲ್ಲಿ…

10 hours ago

ಹೊರ್ಮುಜ್‌ ಬಿಕ್ಕಟ್ಟು | ಅಮೆರಿಕ ದಿಗ್ಬಂಧನ ಬೆನ್ನಲ್ಲೇ ಇರಾನ್‌ ವಾರ್ನಿಂಗ್‌

ಟೆಹ್ರಾನ್ : ಕದನ ವಿರಾಮ ಒಪ್ಪಂದಕ್ಕೆ ಬರಲು ವಿಫಲವಾದ ನಂತರ, ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ದಿಗ್ಬಂಧನ ವಿಧಿಸುವುದಾಗಿ…

11 hours ago