ಬಾಲಿವುಡ್ ನಟ ಅಕ್ಷಯ್ ಕುಮಾರ್ ಹೊಸ ದಾಖಲೆ ಬರೆದಿದ್ದಾರೆ. ಇತ್ತೀಚೆಗೆ ಅವರ ಚಿತ್ರವೊಂದು ಬಿಡುಗಡೆಯಾಗಿದ್ದು, ಕಳೆದ 15 ವರ್ಷದಲ್ಲೇ ಅವರ ವೃತ್ತಿ ಜೀವನದಲ್ಲಿ ಅತ್ಯಂತ ಕಡಿಮೆ ಗಳಿಕೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಮೊನ್ನೆ ಶುಕ್ರವಾರ (ಜುಲೈ 12) ಅಕ್ಷಯ್ ಕುಮಾರ್ ಅಭಿನಯದ ‘ಸರ್ಫಿರಾ’ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆ ಯಾಗಿದೆ. ಈ ಚಿತ್ರವು ತಮಿಳಿನ ‘ಸೂರರೈ ಪೊಟ್ರು’ ಚಿತ್ರದ ರೀಮೇಕ್ ಆಗಿದ್ದು, ತಮಿಳು ಚಿತ್ರ ದೊಡ್ಡ ಹಿಟ್ ಆಗುವುದರ ಜೊತೆಗೆ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಾಕಷ್ಟು ಪ್ರಶಂಸೆಯನ್ನೂ ತನ್ನದಾಗಿಸಿಕೊಂಡಿತ್ತು. ಆದರೆ, ಹಿಂದಿ ರೀಮೇಕ್ ಚಿತ್ರವು ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಸೋತಿದೆ.
ಸರ್ಫಿರಾ ಚಿತ್ರವನ್ನು ಮೂಲ ಚಿತ್ರವನ್ನು ನಿರ್ದೇಶಿಸಿದ್‍ದ ಸುಧಾ ಕೊಂಗರಾ ಚಿತ್ರ ನಿರ್ದೇಶಿಸಿದ್ದು, ಅರುಣ್ ಭಾಟಿಯಾ, ಸೂರ್ಯ, ಜ್ಯೋತಿಕಾ ಮುಂತಾದವರು ಚಿತ್ರವನ್ನು ನಿರ್ಮಿಸಿದ್ದಾರೆ. ಅಕ್ಷಯ್ ಕುಮಾರ್ ಒಡೆತನದ ಕೇಪ್ ಆಫ್ ಗುಡ್ ಫಿಲಂಸ್ ಸಹ ಈ ಚಿತ್ರದ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಅಕ್ಷಯ್ ಕುಮಾರ್ ಅಭಿನಯದ ಎಲ್ಲಾ ಚಿತ್ರಗಳ ನಿರ್ಮಾಣದಲ್ಲೂ ಈ ಸಂಸ್ಥೆ ತೊಡಗಿಸಿಕೊಳ್ಳುವ ಹಾಗೆ ಈ ಚಿತ್ರದಲ್ಲೂ ತೊಡಗಿಸಿಕೊಂಡಿದೆ.
ಈ ಚಿತ್ರದ ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ? ಜಗತ್ತಿನಾದ್ಯಂತ ಬಿಡುಗಡೆಯಾದ ಈ ಚಿತ್ರವು ಕೇವಲ 2.40 ಕೋಟಿ ರೂ ಗಳಿಸುವುದರಲ್ಲಿ ಯಶಸ್ವಿಯಾಗಿದೆ. ಈ ಹಿಂದೆ, ಅಂದರೆ 15 ವರ್ಷಗಳ ಹಿಂದೆ ಅಕ್ಷಯ್ ಅಭಿನಯದ ‘ತಸ್ವೀರ್’ ಚಿತ್ರವು ಮೊದಲ ದಿನ ಕೇವಲ 1.4 ಕೋಟಿ ರೂ ಗಳಿಸಿತ್ತು. ಆಗಿನ ಕಾಲ ಬೇರೆ, ಈಗಿನ ಕಾಲ ಬೇರೆ. ಆ ಚಿತ್ರದ ನಂತರ ಅಕ್ಷಯ್ ಅಭಿನಯದ ಹಲವು ಚಿತ್ರಗಳು ಯಶಸ್ವಿಯಾಗುವುದರ ಜೊತೆಗ 100 ಕೋಟಿ ರೂ. ಗಳಿಕೆ ಮಾಡಿದೆ. ಐದು ವರ್ಷಗಳ ಹಿಂದೆ ಅಕ್ಷಯ್ ಅಭಿನಯದ ನಾಲ್ಕು ಚಿತ್ರಗಳು 200 ಕೋಟಿ ರೂ ಗಳಿಕೆ ಮಾಡಿತ್ತು. ಆ ನಂತರ ಕ್ರಮೇಣ ಅವರ ಚಿತ್ರಗಳು ಸೋಲ ತೊಡಗಿದವು. ಕೆಲವು ಚಿತ್ರಗಳು 100 ಕೋಟಿ ರೂ. ಕ್ಲಬ್ ಸೇರುವುದು ಕಷ್ಟವಾಯಿತು.
ಅಕ್ಷಯ್ ಅಭಿನಯದ ಹಿಂದಿನ ಚಿತ್ರ ‘ಬಡೇ ಮಿಯಾ ಚೋಟೇ ಮಿಯಾ’ ಚಿತ್ರವನ್ನು 350 ಕೋಟಿ ರೂ ಬಜೆಟ್‍ನಲ್ಲಿ ನಿರ್ಮಿಸಲಾಗಿತ್ತು. ಆದರೆ, ಚಿತ್ರವು ಅಂತಿಮವಾಗಿ 102.16 ಕೋಟಿ ರೂ ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಇನ್ನು, ‘ಸರ್ಫಿರಾ’ ಚಿತ್ರವು 80 ಕೋಟಿ ರೂ ಬಜೆಟ್‍ನಲ್ಲಿ ನಿರ್ಮಾನವಾದ ಚಿತ್ರವಾಗಿದ್ದು, ಮೊದಲ ದಿನ ಕೇವಲ 2.40 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. ಹೀಗೆ ಮುಂದುವರೆದರೆ, ಚಿತ್ರ 10 ಕೋಟಿ ರೂ. ಸಹ ಸಂಗ್ರಹಿಸುತ್ತದೋ, ಇಲ್ಲವೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಮಂಡ್ಯ: ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ. ಈ ನಿಟ್ಟಿನಲ್ಲಿ 10ನೇ ತರಗತಿವರೆಗೆ ಕನ್ನಡ ಮಾಧ್ಯಮ ಕಡ್ಡಾಯವಾಗಬೇಕು. ಇಂಗ್ಲೀಷ್ ಮಾಧ್ಯಮದ ಶಾಲೆ ತೆರೆಯುವುದನ್ನು…
ಹನೂರು: ತಾಲ್ಲೂಕಿನ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಪಲ್ಟಿಯಾಗಿ ಇಬ್ಬರು ಗಾಯಗೊಂಡಿರುವ ಘಟನೆ ಜರುಗಿದೆ.…
ಕಲಬುರ್ಗಿ: ಸಂವಿಧಾನದ ವಿಧಿ 371 ( ಜೆ ) ಜಾರಿಗೆ ಬಂದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಹಾಗೂ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು…
ಬೆಂಗಳೂರು: ಬಿಜೆಪಿ ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ ಎನ್ನುವುದು ನನ್ನ ಅನುಮಾನ ಎಂದು…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ…