love matru
ಈ ಹಿಂದೆ ‘ಆ ದಿನಗಳು’ ಚೈತನ್ಯ, ‘ದುನಿಯಾ’ ಸೂರಿ ಮುಂತಾದವರ ಗರಡಿಯಲ್ಲಿ ಪಳಗಿರುವ ವಿರಾಟ್ ಬಿಲ್ವ, ಇದೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ. ಹೆಸರು ‘ಲವ್ ಮ್ಯಾಟ್ರು’. ಹೆಸರು ಕೇಳುತ್ತಿದ್ದಂತೆಯೇ, ಇದೊಂದು ಪಕ್ಕಾ ಪ್ರೇಮಕಥೆ ಎಂದು ಸ್ಪಷ್ಟವಾಗುತ್ತದೆ. ಈ ಚಿತ್ರ ಸಂಪೂರ್ಣವಾಗಿದ್ದು, ಆಗಸ್ಟ್ 01ರಂದು ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಈ ಚಿತ್ರದ ಕುರಿತು ಮಾತನಾಡುವ ವಿರಾಟ ಬಿಲ್ವ, ‘ಪ್ರೀತಿ ಎಂಬ ಭಾವನೆಯನ್ನು ಹೇಳುವ ಕಥೆ ಇದು. ಇದು ಎರಡು ತಲೆಮಾರಿನ ಪ್ರೇಮಕಥೆ. ಎರಡ ಕಡೆ ಇಬ್ಬರು ನಾಯಕಿಯರು ಇರುವುದರಿಂದ, ಎರಡು ತ್ರಿಕೋನ ಪ್ರೇಮಕಥೆಗಳಿರಬಹುದು ಎಂದನಿಸಬಹುದು. ಇದು ತ್ರಿಕೋನ ಪ್ರೇಮಕಥೆಯಲ್ಲ, ಬೇರೆ ಆಯಾಮದಲ್ಲಿರುವ ಕಥೆ. ನಮ್ಮ ತಲೆಮಾರಿನ ಜೀವನದಲ್ಲಿ ನಡೆದಿರುವ ಮತ್ತು ಹಿರಿಯರ ಜೀವನದಲ್ಲಿ ನಡೆದಿರಬಹುದಾದ ಕಥೆಗಳನ್ನು ಆಧರಿಸಿ ಈ ಚಿತ್ರ ಮಾಡಿದ್ದೇವೆ. ಆ ಕಾಲಘಟ್ಟದ ಮತ್ತು ಈ ಕಾಲಘಟ್ಟದ ಪ್ರೀತಿಯನ್ನು ಸೇರಿಸಿ ಮಾಡಿ ಈ ಕಥೆ ಮಾಡಿದ್ದೇವೆ. ಚಿತ್ರದಲ್ಲಿ ಒಳ್ಳೆಯ ತಾರಾಗಣವಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಒಂದು ಪ್ರಮೋಷನಲ್ ಹಾಡಿದೆ’ ಎಂದರು.
ವಿರಾಟ್ ಜೊತೆಗೆ ಅಚ್ಯುತ್ ಕುಮಾರ್ ಇದಕ್ಕೂ ಮೊದಲು ಕೆಲಸ ಮಾಡಿದ್ದರಂತೆ. ‘ನನ್ನ ಕೆಲವು ಚಿತ್ರಗಳಿಗೆ ವಿರಾಟ್ ಸಹಾಯಕ ನಿರ್ದೇಶಕರಾಗಿದ್ದರು. ಅವರು ಸಿನಿಮಾ ಮಾಡುತ್ತಿದ್ದೀನಿ ಎಂದಾಗ ಖುಷಿಯಿಂದ ಒಪ್ಪಿ ನಟಿಸಿದೆ. ಹಾಡುಗಳು ಚೆನ್ನಾಗಿದೆ. ಸಿನಿಮಾ ಸಹ ಚೆನ್ನಾಗಿ ಮೂಡಿಬಂದಿದೆ’ ಎಂದರು.
ಈ ಚಿತ್ರದಲ್ಲಿ ವರ್ಷ ಎಂಬ ಪಾತ್ರ ಮಾಡಿದ್ದೇನೆ ಎಂದ ಸೋನಾಲ್, ‘ಚಿಕ್ಕವಯಸ್ಸಿನಲ್ಲಿ ಅಪ್ಪ-ಅಮ್ಮ ಅವಳಿಂದ ದೂರ ಆಗಿರುತ್ತಾರೆ. ನಂತರ ಜೀವನದ ಏಳುಬೀಳುಗಳನ್ನು ಹೇಗೆ ಎದುರಿಸುತ್ತಾಳೆ? ಪ್ರೀತಿಯಲ್ಲಿ ಬಿದ್ದಾಗ ಏನೆಲ್ಲಾ ಆಗುತ್ತದೆ? ಎಂಬುದು ನನ್ನ ಪಾತ್ರ’ ಎಂದರು.
ಸಿಲ್ವರಿಥಮ್ ಪ್ರೊಡಕ್ಷನ್ ಮತ್ತು INK ಸಿನಿಮಾಸ್ ಸಂಸ್ಥೆ ನಿರ್ಮಾಣ ಮಾಡಿರುವ ‘ಲವ್ ಮ್ಯಾಟ್ರು’ ಚಿತ್ರದಲ್ಲಿ ವಿರಾಟ್ ಜೊತೆಗೆ ಸೋನಲ್ ಮಾಂತೆರೋ, ಸುಶ್ಮಿತಾ ಗೋಪಿನಾಥ್, ಅಚ್ಯುತ್ ಕುಮಾರ್, ಸುಮನ್ ರಂಗನಾಥ್, ಅನಿತಾ ಭಟ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ದೇವೇಂದ್ರ ಆರ್. ನಾಯ್ಡು ಮತ್ತು ಪರಮೇಶ್ ಸಿ.ಎಂ ಛಾಯಾಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನವಿದೆ.
ಹೊಸದಿಲ್ಲಿ : ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಅಶಾಂತಿ ಸೃಷ್ಟಿಸುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಸಿಖ್ ಫಾರ್ ಜಸ್ಟೀಸ್ ನಿಯೋಜಿತ ಭಯೋತ್ಪಾದಕ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಪಿ.ದೊಡ್ಡಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ಬೀಡುಬಿಟ್ಟು ಕಬ್ಬಿನ ಬೆಳೆ ಫಸಲನ್ನು ನಾಶಗೊಳಿಸಿರುವ ಘಟನೆ…
ಮಡಿಕೇರಿ : ಮೈಸೂರು-ಗೋಣಿಕೊಪ್ಪ ಹೆದ್ದಾರಿಯ ದಕ್ಷಿಣ ಕೊಡಗಿನ ತಿತಿಮತಿ ವ್ಯಾಪ್ತಿಯಲ್ಲಿ ಹುಲಿಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದು, ಹುಲಿ ಸೆರೆಗೆ ಶಾಸಕ…
ನಂಜನಗೂಡು : ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಖಾಸಗಿ ಶಾಲೆಗಳನ್ನು ಸಹ ನಾಚಿಸುವಂತಹ ಆಧುನಿಕ ಸೌಲಭ್ಯಗಳನ್ನು…
ಬೃಹತ್ ಕೈಗಾರಿಕೆ ಸಚಿವಾಲಯ ಅಧೀನದ ಎಆರ್‌ಎಐ ಘಟಕ ಸ್ಥಾಪನೆಗೆ ಪರಿಶೀಲನೆ ನಡೆಯುತ್ತಿದೆ : ಕುಮಾರಸ್ವಾಮಿ ಮಂಡ್ಯ : ಜಿಲ್ಲೆಯಲ್ಲಿ ಕೈಗಾರಿಕೆ…
ಮಂಡ್ಯ : ಕರ್ನಾಟಕ ರಾಜ್ಯವೇ ನನ್ನ ಪರಿಮಿತಿ. ಜನರು ಎಲ್ಲಿ ಅಪೇಕ್ಷೆ ಮಾಡುತ್ತಾರೆ ಅಲ್ಲಿಂದ ನನ್ನ ಸ್ಪರ್ಧೆ ಮಾಡುತ್ತೇನೆ ಎನ್ನುವ…