ಕನ್ನಡದಲ್ಲಿ ಇತ್ತೀಚೆಗೆ ಹಲವು ಪ್ರಯೋಗಗಳಾಗುತ್ತಿವೆ. ಇದೀಗ ನಿರ್ದೇಶಕ ಸಂಜೋತಾ ಭಂಡಾರಿ ತಾತನ ಲಂಗೋಟಿ ಮತ್ತು ಮೊಮ್ಮಗನ ಅಂಡರ್ವೇರ್ ಸುತ್ತ ಒಂದು ಸಂಘರ್ಷದ ಕಥೆಯನ್ನು ಮಾಡಿಕೊಂಡಿದ್ದಾರೆ. ಆ ಕಥೆಗೆ ಅವರು ಲಂಗೋಟಿ’ ಮ್ಯಾನ್ ಎಂದು ಹೆಸರಿಟ್ಟಿದ್ದು, ಇತ್ತೀಚೆಗೆ ಟ್ರೇಲರ್ ಬಿಡುಗಡೆಯಾಗಿದೆ.
‘ಲಂಗೋಟಿ ಮ್ಯಾನ್’ ಚಿತ್ರದ ಟೀಸರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿತ್ತು. ನಾಯಕ ಲಂಗೋಟಿ ತೊಟ್ಟು ಓಡುವ ದೃಶ್ಯದ ಬಗ್ಗೆ ವಿವಾದವಾಗಿತ್ತು. ಈ ವಿಷಯದಲ್ಲಿ ವಿವಾದ ಯಾಕೆ ಮಾಡಲಾಗುತ್ತಿದೆಯೋ ಗೊತ್ತಿಲ್ಲ ಎನ್ನುತ್ತಾರೆ ನಿರ್ದೇಶಕಿ ಸಂಜೋತ ಭಂಡಾರಿ. ‘’ಲಂಗೋಟಿ ಮ್ಯಾನ್’ ಚಿತ್ರವು ಅನಗತ್ಯ ಕಾರಣಕ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಚಿತ್ರ ನೋಡಿದ ಮೇಲೆ ಶೀರ್ಷಿಕೆ ಸೂಕ್ತ ಅಂತ ಗೊತ್ತಾಗಲಿದೆ. ಈ ಚಿತ್ರದಲ್ಲಿ ಯಾವ ಸಮಯದಾಯವನ್ನು ಅವಮಾನ ಮಾಡುವ ಮತ್ತು ನೋಯಿಸುವ ದೃಶ್ಯಗಳಲ್ಲಿ ಆ ಉದ್ದೇಶವೂ ನಮಗಿಲ್ಲ’ ಎಂದರು.
ಈ ಚಿತ್ರದಲ್ಲಿ ಆಕಾಶ್ ರಾಂಬೋ ನಾಯಕನ ಪಾತ್ರ ಮಾಡಿದ್ದಾರೆ. ಇದು ತಾತ ಮೊಮ್ಮಗನ ಸುತ್ತ ನಡೆಯುವ ಕಥೆ ಎನ್ನುವ ಆಕಾಶ್, ‘ತಾತನಿಗೆ ಮೊಮ್ಮಗ ಲಂಗೋಟಿ ಹಾಕಿಕೊಳ್ಳಬೇಕು ಎಂಬ ಬಯಕೆ. ಮೊಮ್ಮಗನಿಗೆ ಅಂಡರ್ ವೇರ್ ಹಾಕಿಕೊಳ್ಳುವ ಆಸೆ. ತಾತ ಇರುವವರೆಗೂ ಅಂಡರ್ ವೇರ್ ಹಾಕಲು ಬಿಡಲ್ಲ. ಅವರು ಸಾಯುತ್ತಿಲ್ಲ. ನಾನು ಅಂಡರ್ ವೇರ್ ಹಾಕಲು ಆಗುತ್ತಿಲ್ಲ ಎಂಬುದು ಮೊಮ್ಮಗನ ಕೊರಗು. ಈ ರೀತಿಯ ಕಥೆಯನ್ನು ಹಾಸ್ಯ ರೂಪದಲ್ಲಿ ಹೇಳಲಾಗಿದೆ’ ಎಂದರು.
ಸಂಹಿತ ವಿನ್ಯಾ ಇತ್ತೀಚಿನ ದಿನಗಳಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ‘ಲಂಗೋಟಿ ಮ್ಯಾನ್’ ಸಹ ಒಂದು. ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡಿದ್ದಾರಂತೆ. ‘ಈ ಚಿತ್ರದಲ್ಲಿ ನನ್ನದು ಪೊಲೀಸ್ ಅಧಿಕಾರಿಯ ಪಾತ್ರ. ಜೊತೆಗೆ ಇನ್ನೊಂದು ಪ್ರಮುಖ ಪಾತ್ರ ಚಿತ್ರದಲ್ಲಿದೆ. ಅದರ ಬಗ್ಗೆ ಗುಟ್ಟು ಬಿಟ್ಟುಕೊಡುವುದಿಲ್ಲ. ಅದನ್ನು ಚಿತ್ರದಲ್ಲೇ ನೋಡಬೇಕು. ಚಿತ್ರ ನೋಡದೆ ಯಾರೂ, ಯಾವುದೇ ತೀರ್ಮಾನಕ್ಕೆ ಬರಬಾರದು.. ಚಿತ್ರ ನೋಡಿದ ಮೇಲೆ ಚಿತ್ರಕ್ಕೆ ಶೀರ್ಷಿಕೆ ಏಕೆ ಈ ಶೀರ್ಷಿಕೆ ಇಡಲಾಗಿದೆ ಎಂದು ಗೊತ್ತಾಗಲಿದೆ’ ಎಂದರು.
ಹುಲಿ ಕಾರ್ತಿಕ್ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ‘ಈ ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಗಂಭೀರವಾದ ವಿಷಯಗಳನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ’ ಎಂದರು .
ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಲಂಗೋಟಿ ಮ್ಯಾನ್’ ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ, ರವಿವರ್ಮ (ಗಂಗು) ಅವರ ಛಾಯಾಗ್ರಹಣವಿದೆ. ‘ಲಂಗೋಟಿ ಮ್ಯಾನ್’ ಚಿತ್ರವು ಸೆಪ್ಟೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…