ಸಿನಿಮಾಗಳಿಗೆ ಏನೇನೋ ಸ್ಫೂರ್ತಿಯಾಗುತ್ತಿರುತ್ತವೆ. ಹಾಗೆಯೇ, ಈ ಚಿತ್ರಕ್ಕೆ ಲಂಗೋಟಿಯೇ ಸ್ಫೂರ್ತಿ ಎಂದರೆ ಆಶ್ಚರ್ಯವಾಗಬಹುದು. ಬೇರೆ ಯಾರಾದರೂ ಈ ಮಾತನ್ನು ಹೇಳಿದ್ದರೆ ನಂಬುವುದು ಕಷ್ಟವಾಗುತ್ತಿತ್ತು. ಆದರೆ, ನಿರ್ದೇಶಕರೇ ಹೇಳಿರುವುದರಿಂದ ನಂಬಲೇಬೇಕು.
ಸುಮಾರು 10 ವರ್ಷಗಳ ಹಿಂದೆ ‘ಮಿರ್ಚಿ ಮಂಡಕ್ಕಿ ಖಡಕ್ ಚಾಯ್’ ಚಿತ್ರವನ್ನು ನಿರ್ದೇಶಿಸಿದ್ದ ಸಂಜೋತ ಭಂಡಾರಿ, ಈಗ ‘ಲಂಗೋಟಿ ಮ್ಯಾನ್’ ಎಂಬ ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಶರಣ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಚಿತ್ರದ ಕಥೆ ತಾನು ಮಾಡಿದ್ದು ಎನ್ನುವುದಕ್ಕಿಂತ ಕಥೆಯೇ ಹುಡುಕಿಕೊಂಡು ಬಂತು ಎಂದು ಸಂಜೋತ ಹೇಳಿಕೊಂಡಿದ್ದಾರೆ. ‘ನಾನು ಬೇರೆ ಒಂದು ಚಿತ್ರದ ಕಥೆ ಮಾಡುತ್ತಿದ್ದಾಗ ಈ ಕಲ್ಪನೆ ಬಂತು. ಪದೇಪದೇ ಈ ವಿಷಯ ತಲೆಯಲ್ಲಿ ಕೊರೆಯುತ್ತಲೇ ಇದೆ. ಕೊನೆಗೆ ಅದನ್ನು ಬಿಟ್ಟು, ಈ ಕಥೆಯನ್ನು ಕೈಗೆತ್ತಿಕೊಂಡೆ. ಅದೇ ‘ಲಂಗೋಟಿ ಮ್ಯಾನ್’ ಸಿನಿಮಾ ಸ್ವರೂಪ ಪಡೆದುಕೊಂಡಿತು. ಈ ಚಿತ್ರದಲ್ಲಿ ನಿಜವಾದ ಹೀರೋ ಅಂದರೆ ಅದು ಲಂಗೋಟಿ. ಕಥೆ ಹಾಗೂ ಸಂಭಾಷಣೆಯಲ್ಲೂ ಅನೇಕ ಮಿತ್ರರು ಸಹಾಯ ಮಾಡಿದ್ದಾರೆ’ ಎಂದು ಎಲ್ಲರನ್ನೂ ಸ್ಮರಿಸಿದರು.
ಟೀಸರ್‍ನಲ್ಲಿರುವ ಅರೆಬೆತ್ತಲೆ ದೃಶ್ಯದ ಬಗ್ಗೆ ಮಾತನಾಡಿದ ನಾಯಕ ಆಕಾಶ್ ರಾಂಬೊ, ‘ಅರೆಬೆತ್ತಲೆ ಅಲ್ಲ, ಬೇಕಾದರೆ ಬೆತ್ತಲೆಯಾಗಿಯೇ ಓಡುತ್ತೀನಿ ಎಂದೆ. ಖುಷಿಯಾಗಿಯೇ ಮಾಡಿದ್ದೀನಿ. ಯಾವುದೇ ಹಿಂಜರಿಕೆ ಇರಲಿಲ್ಲ. ಒಳ್ಳೆಯದಾಗುತ್ತದೆ ಎಂದು ನಂಬಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಲಂಗೋಟಿ ಹಾಕೋಕೆ ಇಷ್ಟವಿರುವುದಿಲ್ಲ. ಆದರೂ ಚಿಕ್ಕ ವಯಸ್ಸಿನಿಂದ ಲಂಗೋಟಿ ಹಾಕುತ್ತಿರುತ್ತೇನೆ. ಅಂಡರ್‍ವೇರ್ ಹಾಕಬೇಕು ಎಂಬ ಆಸೆ ಇರುತ್ತದೆ. ನಾನು ಅಂಡರ್‍ವೇರ್ ಹುಡುಕಾಟದಲ್ಲಿರುತ್ತೇನೆ. ಅದು ನನ್ನಿಂದ ದೂರ ಹೋಗುತ್ತಿರುತ್ತದೆ. ಆಗ ಏನೆಲ್ಲಾ ಆಗುತ್ತದೆ ಎನ್ನುವುದೇ ಚಿತ್ರದ ಕಥೆ’ ಎಂದರು.
ನಾಯಕಿ ಸಂಹಿತಾ ವಿನ್ಯಾ, ‘ಲಂಗೋಟಿ ಮ್ಯಾನ್’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರಂತೆ. ‘ಇದುವರೆಗೂ ನಾನು ನಟಿಸಿದ ಯಾವುದೇ ಚಿತ್ರದಲ್ಲೂ ಇಂಥದ್ದೊಂದು ಚಿತ್ರ ಮಾಡಿಲ್ಲ. ಇದು ಹೊಸ ತರಹದ ಪಾತ್ರ ನನಗೆ. ಹೇಗೆ ಮೂಡಿಬರುತ್ತದೆ ಎಂಬ ಕುತೂಹಲದಲ್ಲಿ ಕಾಯುತ್ತಿದ್ದೇನೆ. ನಾನಿರುವುದೇ ಬೇರೆ, ಈ ಪಾತ್ರವೇ ಬೇರೆ. ನನಗೂ, ಪಾತ್ರಕ್ಕೂ ಸಂಬಂಧವೇ ಇಲ್ಲ’ ಎಂದರು.
ತನು ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಲಂಗೋಟಿ ಮ್ಯಾನ್’ ಚಿತ್ರದಲ್ಲಿ ಆಕಾಶ್ ರಾಂಬೊ, ಸಂಹಿತಾ ವಿನ್ಯಾ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಸಂಹಿತ ವಿನ್ಯ, ಸ್ನೇಹ ಋಷಿ, ಪವನ್, ಆಟೋ ನಾಗರಾಜ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ, ರವಿವರ್ಮ (ಗಂಗು) ಅವರ ಛಾಯಾಗ್ರಹಣವಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…