ಮನರಂಜನೆ

ಟಾಲಿವುಡ್‍, ಬಾಲಿವುಡ್‍ಗೆ KVN ಪ್ರೊಡಕ್ಷನ್ಸ್; ಎರಡು ದೊಡ್ಡ ಚಿತ್ರಗಳ ನಿರ್ಮಾಣ

KVN ಪ್ರೊಡಕ್ಷನ್ಸ್ ಸಂಸ್ಥೆಯು ಕನ್ನಡವಲ್ಲದೆ ಈಗಾಗಲೇ ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಗಳನ್ನು ನಿರ್ಮಿಸುತ್ತಿದೆ. ಈಗ ತೆಲುಗು ಮತ್ತು ಹಿಂದಿ ಭಾಷೆಗಳು KVN ಪ್ರೊಡಕ್ಷನ್ಸ್ ಸಂಸ್ಥೆಯು ಎರಡು ದೊಡ್ಡ ಚಿತ್ರಗಳನ್ನು ನಿರ್ಮಿಸುವುದಕ್ಕೆ ಮುಂದಾಗಿದೆ.

ಈ ಪೈಕಿ ತೆಲುಗಿನಲ್ಲಿ KVN ಪ್ರೊಡಕ್ಷನ್ಸ್ ಸಂಸ್ಥೆಯು ಚಿರಂಜೀವಿ ಅಭಿನಯದ ಹೊಸ ಚಿತ್ರವನ್ನು ನಿರ್ಮಿಸುತ್ತಿದೆ. ಇದು ಚಿರಂಜೀವಿ ಅಭಿನಯದ 158ನೇ ಚಿತ್ರವಾಗಿದ್ದು, ಸದ್ಯಕ್ಕೆ ‘ಮೆಗಾ 158’ ಎಂಬ ಹೆಸರಿಡಲಾಗಿದೆ. ಈ ಹಿಂದೆ ‘ವಾಲ್ಟರ್‍ ವೀರಯ್ಯ’ ಚಿತ್ರವನ್ನು ನಿರ್ದೇಶಿಸಿದ್ದ ಬಾಬಿ ಕೊಲ್ಲಿ, ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇತ್ತೀಚೆಗೆ ಚಿರಂಜೀವಿ ಹುಟ್ಟುಹಬ್ಬದಂದು ಚಿತ್ರದ ಅಧಿಕೃತ ಘೋಷಣೆಯಾಗಿದ್ದು. ದಸರಾ ಸಮಯದಲ್ಲಿ ಚಿತ್ರದ ಮುಹೂರ್ತವಾಗಲಿದ್ದು, ವರ್ಷದ ಕೊನೆಯಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಲಿದೆ.

ಇನ್ನು, ಹಿಂದಿಯಲ್ಲಿ ಅಕ್ಷಯ್‍ ಕುಮಾರ್ ಮತ್ತು ಸೈಫ್‍ ಅಲಿ ಖಾನ್‍ ಅಭಿನಯದಲ್ಲಿ ‘ಹೈವಾನ್‍’ ಎಂಬ ಚಿತ್ರದ ನಿರ್ಮಾಣಕ್ಕೆ ಸಂಸ್ಥೆಯು ಕೈಹಾಕಿದೆ. ಈ ಹಿಂದೆ ಅಕ್ಷಯ್‍ ಮತ್ತು ಸೈಫ್‍ ಇಬ್ಬರೂ ‘ಯೇ ದಿಲ್ಲಗಿ’, ‘ಮೇ ಕಿಲಾಡಿ ತೂ ಅನಾರಿ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. 2008ರಲ್ಲಿ ಬಿಡುಗಡೆಯಾದ ‘ತಶನ್‍’ ಚಿತ್ರದ ನಂತರ ಜೊತೆಯಾಗಿ ನಟಿಸಿರಲಿಲ್ಲ. ಈಗ 17 ವರ್ಷಗಳ ನಂತರ ಅಕ್ಷಯ್‍ ಮತ್ತು ಸೈಫ್‍ ಅಲಿ ಖಾನ್ ಜೊತೆಯಾಗಿ ನಟಿಸುತ್ತಿದ್ದಾರೆ.

‘ಹೈವಾನ್‍’ ಚಿತ್ರದ ಮುಹೂರ್ತ ಶನಿವಾರ ಆಗಿದ್ದು, ಈ ಸಂದರ್ಭದಲ್ಲಿ ಕೆ. ವೆಂಕಟ್‍ನಾರಾಯಣ್‍ ಸಹ ಹಾಜರಿದ್ದರು. ಈ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಥೆಸ್ಪಿಯನ್‍ ಫಿಲಂಸ್‍ ಜೊತೆಯಾಗಿ ನಿರ್ಮಿಸುತ್ತಿವೆ.

ಈ ಚಿತ್ರವನ್ನು ಮಲಯಾಳಂನ ಹಿರಿಯ ಮತ್ತು ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್‍ ನಿರ್ದೇಶನ ಮಾಡುತ್ತಿದ್ದಾರೆ. ಇದು ಮಲಯಾಳಂನ ‘ಒಪ್ಪಂ’ ಚಿತ್ರದ ರೀಮೇಕ್‍ ಆಗಿದ್ದು, ‘ಹೈವಾನ್‍’ ಚಿತ್ರದಲ್ಲಿ ಅಕ್ಷಯ್‍ ಕುಮಾರ್‍ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸೈಫ್‍ ಅಲಿ ಖಾನ್‍ ಅಂಧನಾಗಿ ನಟಿಸುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಮಂಡ್ಯ: ಕನ್ನಡ ಶಾಲೆಗಳ ಉಳಿವಿಗೆ ಹೋರಾಟ: ವಾಟಾಳ್‌ ನಾಗರಾಜ್‌ ಬಂಧನ

ಮಂಡ್ಯ: ಜಿಲ್ಲೆಯ 1463 ಕನ್ನಡ ಶಾಲೆಗಳನ್ನು ಉಳಿಸಿ ಹಾಗೂ ಉಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕೆಂದು ಆಗ್ರಹಿಸಿ ಮಂಡ್ಯ ನಗರದ ಸಂಜಯ…

6 mins ago

ಸಫಾರಿ ಸ್ಥಗಿತ, ಪುನರಾರಂಭ ಸಮರ್ಥಿಸಿಕೊಂಡ ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ಕಳೆದ ನವೆಂಬರ್‌ನಲ್ಲಿ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಿ, ಈಗ ಷರತ್ತುಬದ್ಧವಾಗಿ ಪುನಾರಂಭ ಮಾಡಿರುವುದನ್ನು ಅರಣ್ಯ,…

29 mins ago

ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವ: ಅದ್ಧೂರಿಯಾಗಿ ಜರುಗಿದ ಅಗ್ನಿ ಕುಂಡೋತ್ಸವ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಪಟ್ಟಣದ ಗ್ರಾಮ ದೇವತೆ ಶ್ರೀ ಬೆಟ್ಟಳ್ಳಿ ಮಾರಮ್ಮ ಜಾತ್ರಾ ಮಹೋತ್ಸವದ…

43 mins ago

ಕೊಡಗು| 13 ದಿನಗಳ ಅವಧಿಯಲ್ಲಿ ಕಾಡಾನೆ ದಾಳಿಗೆ ಮೂರನೇ ಬಲಿ: ಕಾಫಿ ಬೆಳೆಗಾರ ದಾರುಣ ಸಾವು

ಕೊಡಗು: ಕೊಡಗಿನಲ್ಲಿ ಕಾಡಾನೆ - ಮಾನವ ಸಂಘರ್ಷ ಅವ್ಯಾಹತವಾಗಿ ಮುಂದುವರೆದಿದ್ದು ಕಾಫಿ ಬೆಳೆಗಾರರೊಬ್ಬರು ಹತರಾಗಿದ್ದಾರೆ. ವಿರಾಜಪೇಟೆ ತಾಲ್ಲೂಕಿನ ಹಳೇ ಸಿದ್ದಾಪುರದ…

55 mins ago

ಮಂಡ್ಯ ಕೋರ್ಟ್‌ಗೆ ಮತ್ತೆ ಬಾಂಬ್ ಬೆದರಿಕೆ : ಸ್ಥಳಕ್ಕೆ ಪೊಲೀಸ್-ಬಾಂಬ್ ಸ್ಕ್ವಾಡ್ ದೌಡು

ಮಂಡ್ಯ : ಮಂಡ್ಯ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದಿದ್ದು, ಇ-ಮೇಲ್ ಮೂಲಕ “ಕೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದೇವೆ” ಎಂದು…

2 hours ago

ಯುದ್ಧ ನಿಲ್ಲಿಸಲು 3 ಷರತ್ತು ಮುಂದಿಟ್ಟ ಇರಾನ್‌!

ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಅಮೆರಿಕಾ ಹಾಗೂ ಇಸ್ರೇಲ್ ಜೊತೆ ನಡೆಯುತ್ತಿರುವ ಸಂಘರ್ಷವನ್ನು ಅಂತ್ಯಗೊಳಿಸಲು…

2 hours ago