ಮನರಂಜನೆ

ತಮಿಳಿನ ‘ರಾಜಪುತ್ರನ್‍’ ಚಿತ್ರದಲ್ಲಿ ಕೋಮಲ್‍ ನಟನೆ; ಮೇ.30ಕ್ಕೆ ಚಿತ್ರ ಬಿಡುಗಡೆ

ಕೋಮಲ್‍ ಅಭಿನಯದ ನಾಲ್ಕು ಚಿತ್ರಗಳು ಬೇರೆ ಬೇರೆ ಹಂತಗಳಲ್ಲಿವೆ. ‘ಕೋಣ’, ‘ಕುಟೀರ’, ‘ರೋಲೆಕ್ಸ್’ ಮತ್ತು ‘ಕಾಲಾಯ ನಮಃ’ ಚಿತ್ರಗಳ ಪೈಕಿ ಯಾವ ಚಿತ್ರ ಮೊದಲು ಬಿಡುಗಡೆಯಾಗುತ್ತದೆ ಎಂದು ಈಗಲೇ ಅಂದಾಜು ಮಾಡುವುದು ಕಷ್ಟ. ಹೀಗಿರುವಾಗಲೇ, ಅವರು ಸದ್ದಿಲ್ಲದೆ ಒಂದು ತಮಿಳು ಚಿತ್ರದಲ್ಲಿ ನಟಿಸಿದ್ದು, ಆ ಚಿತ್ರ ಇದೇ ಮೇ.30ರಂದು ಬಿಡುಗಡೆ ಆಗುತ್ತಿದೆ.

ಒಂದು ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿರುವುದಾಗಿ ಕೋಮಲ್‍ ಸುಮಾರು ಒಂದು ವರ್ಷದ ಹಿಂದೆಯೇ ಹೇಳಿಕೊಂಡಿದ್ದರು. ತಮಿಳಿನ ಜನಪ್ರಿಯ ನಟು ಪ್ರಭು ಅವರೊಂದಿಗಿನ ವಿಡಿಯೋವೊಂದನ್ನು ಸೋಷಿಯಲ್‍ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ರಾಜಪುತ್ರನ್‍’ ಹೆಸರಿನ ಆ ಚಿತ್ರ ಮೇ.30ರಂದು ಬಿಡುಗಡೆಯಾಗುತ್ತಿದೆ.

‘ರಾಜಪುತ್ರನ್‍’ ಚಿತ್ರದ ಟ್ರೇಲರ್ ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದು, ಈ ಟ್ರೇಲರ್‌ನಲ್ಲಿ ಬಾಯಲ್ಲಿ ಸಿಗಾರ್ ಹಚ್ಚಿಕೊಂಡು, ಕಣ್ಣಿಗೆ ಕೂಲಿಂಗ್‍ ಗ್ಲಾಸ್‍ ಹಾಕಿಕೊಂಡು ಎಂಟ್ರಿ ಕೊಡುವ ದೃಶ್ಯವನ್ನು ನೋಡಬಹುದು. ಈ ಚಿತ್ರದಲ್ಲಿ ಹಿರಿಯ ನಟ ಪ್ರಭು ಜೊತೆಗೆ ವೆಟ್ರಿ, ಕೃಷ್ಣ ಪ್ರಿಯಾ, ಮನ್ಸೂರ್‍ ಅಲಿಖಾನ್‍ ಮುಂತಾದವರು ನಟಿಸಿದ್ದು, ಮಹಾಕಂದನ್‍ ನಿರ್ದೇಶನ ಮಾಡಿದ್ದಾರೆ.

ಕೋಮಲ್‍ ಇದಕ್ಕೂ ಮುನ್ನ ಕಳೆದ 2014ರಲ್ಲಿ ಬಿಡುಗಡೆಯಾಗಿದ್ದ ‘ಐಂದಾಂ ತಲೈಪಮುರೈ ಸಿದ್ಧ ವೈದ್ಯ ಶಿಖಾಮಣಿ’ ಎಂಬ ಚಿತ್ರದಲ್ಲಿ ನಟಿಸಿದ್ದರು. ಭರತ್‍, ನಂದಿತಾ, ಶ್ವೇತಾ ಮುಂತಾದವರು ನಟಿಸಿದ್ದ ಈ ಚಿತ್ರ ಬಿಡುಗಡೆಯಾಗಿ ಸುಮಾರು 11 ವರ್ಷಗಳ ನಂತರ ಕೋಮಲ್‍ ಅಭಿನಯದ ಇನ್ನೊಂದು ತಮಿಳು ಚಿತ್ರ ಬಿಡುಗಡೆಯಾಗುವುದಕ್ಕೆ ಸಿದ್ಧವಾಗುತ್ತಿದೆ.

ಇನ್ನು, ಕೋಮಲ್‍ ಅಭಿನಯದ ಕನ್ನಡ ಚಿತ್ರವೊಂದು ಬಿಡುಗಡೆಯಾಗದೆ ಆರೇಳು ತಿಂಗಳುಗಳಾಗಿವೆ. ಕಳೆದ ವರ್ಷ ಅಕ್ಟೋಬರ್‍ ತಿಂಗಳಲ್ಲಿ ಅವರ ಅಭಿನಯದ ಮತ್ತು ನಿರ್ಮಾಣದ ‘ಯಲಾ ಕುನ್ನಿ’ ಚಿತ್ರ ಬಿಡುಗಡೆ ಆಗಿತ್ತು. ಆದರೆ, ಚಿತ್ರ ಹೆಚ್ಚು ಸದ್ದು ಮಾಡಲಿಲ್ಲ.

ಆಂದೋಲನ ಡೆಸ್ಕ್

Recent Posts

ವರ್ತಕರಿಗೆ ಹಬ್ಬದ ನಿರಾಳತೆ: ದೀಪಾವಳಿ ನಂತರಕ್ಕೆ UPI ಮರ್ಚೆಂಟ್‌ ಶುಲ್ಕ ಜಾರಿ ಮುಂದೂಡಿಕೆ

ನವದೆಹಲಿ: ವರ್ತಕರಿಗೆ ದೀಪಾವಳಿ ಸಂದರ್ಭದಲ್ಲಿ ತಾತ್ಕಾಲಿಕ ನಿರಾಳತೆ ಸಿಕ್ಕಿದೆ. ಅಕ್ಟೋಬರ್‌ 15ರಿಂದ ಜಾರಿಯಾಗಬೇಕಿದ್ದ ಆಯ್ದ UPI ಮರ್ಚೆಂಟ್‌ ಪಾವತಿಗಳ ಮೇಲಿನ…

12 hours ago

ಸ್ಟಿಂಗ್ ಆಪರೇಷನ್ ಬಗ್ಗೆ ಕುಮಾರಸ್ವಾಮಿಯನ್ನೇ ಕೇಳಿ: ಸಚಿವ ಪುಟ್ಟರಂಗಶೆಟ್ಟಿ

ಮೈಸೂರು: ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಸಂಬಂಧಿಸಿದಂತೆ ಪುಟ್ಟರಂಗಶೆಟ್ಟಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ಸ್ಟಿಂಗ್ ಆಪರೇಷನ್ ಅಂದರೇನು ಎಂಬುದು…

13 hours ago

ಸ್ಟಿಂಗ್ ಆಪರೇಷನ್ ಆರೋಪ: ಸಾಕ್ಷಿ ಬಿಡುಗಡೆಗೆ ಶಾಸಕ ತನ್ವೀರ್ ಸೇಠ್ ಒತ್ತಾಯ

ಮೈಸೂರು: ಸ್ಟಿಂಗ್ ಆಪರೇಷನ್ ಬಗ್ಗೆ ದಿನಕ್ಕೊಂದು ಹೇಳಿಕೆ ನೀಡುವ ಬದಲು, ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಶಾಸಕ ತನ್ವೀರ್ ಸೇಠ್…

14 hours ago

ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಮೈಸೂರು: ಅಪಪ್ರಚಾರ ನೋಡ್ಕೊಂಡು ಸುಮ್ಮನಿರಲು ಆಗುತ್ತಾ? ತಂದೆಯವರ ತೇಜೋವಧೆಗೆ ಷಡ್ಯಂತ್ರ ನಡೆಯುತ್ತಿದೆ: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರು: ಮಾಜಿ ಮುಖ್ಯಮಂತ್ರಿ…

14 hours ago

ಕಾಡಾನೆ ದಾಳಿ: ರೈತ ಸಾವು

ನಂಜನಗೂಡು: ಜಮೀನಿಗೆ ರಾತ್ರಿ ಕಾವಲು ಕಾಯಲು ತೆರಳಿದ್ದ ರೈತ, ಬೆಳಿಗ್ಗೆ ಮನೆಗೆ ಮರಳುವಾಗ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ನಂಜನಗೂಡು ತಾಲ್ಲೂಕಿನ…

14 hours ago

ಓದುಗರ ಪತ್ರ: ರಾಜಕಾರಣಿಗಳದ್ದು ‘ಆಚಾರವಿಲ್ಲದ ನಾಲಿಗೆ’ ಆಗಬಾರದಲ್ಲವೇ?

ಕೆಲವು ಜನಪ್ರತಿನಿಧಿಗಳೂ ಸೇರಿದಂತ ಹಲವು ರಾಜಕಾರಣಿಗಳು ಸಾರ್ವಜನಿಕ ವೇದಿಕೆಗಳಲ್ಲಿ ಹಾಗೂ ಇತರ ಸಭೆ-ಸಮಾರಂಭಗಳಲ್ಲಿ ಪ್ರಜ್ಞಾವಂತರೇನೂ ಸಾಮಾನ್ಯ ಜನರಿಗೂ ಮುಜುಗರವಾಗುವಂತಹ ಮಾತುಗಳನ್ನು…

17 hours ago