ಬೆಂಗಳೂರು : ಕನ್ನಡ ಬಿಗ್‌ಬಾಸ್ ಸೀಸನ್ 12ರ ಇಂದಿನ ವೀಕೆಂಡ್ ಎಪಿಸೋಡ್ಗೆ ಇಡೀ ಕರ್ನಾಟಕ ಜನತೆ ಕಾಯುತ್ತಿದೆ. ಈ ವಾರ ದೊಡ್ಮನೆಯೊಳಗೆ ಸಾಕಷ್ಟು ಘಟನೆಗಳು ನಡೆದಿವೆ. ಮುಖ್ಯವಾಗಿ ದೆವ್ವದ ಮ್ಯಾಟರ್ ವಾರಪೂರ್ತಿ ಮನೆಯೊಳಗೆ ಸೌಂಡ್ ಮಾಡಿತ್ತು. ತನ್ನಪಾಡಿಗಿದ್ದ ರಕ್ಷಿತಾ ಶೆಟ್ಟಿ ಅವರನ್ನು ಅಶ್ವಿನಿ ಗೌಡ ಹಾಗೂ ಜಾನ್ವಿ ಈ ದೆವ್ವದ ಮ್ಯಾಟರ್ ಒಳಗೆ ಕರೆತಂದು ಅತಂತ್ರ ಮಾಡಿಬಿಟ್ಟರು. ಇಲ್ಲಿಗೆ ನಿಲ್ಲದ ಅಶ್ವಿನಿ-ಜಾನ್ವಿ ಆಟ ರಕ್ಷಿತಾಗೆ ಅವಮಾನ ಆಗುವಂತೆ ನಡೆದುಕೊಂಡರು. ಈ ಎಲ್ಲ ವಿಚಾರದಿಂದ ಕಿಚ್ಚ ಸುದೀಪ್ ಕೆರಳಿ ಕೆಂಡವಾಗಿದ್ದಾರೆ.
ಅಶ್ವಿನಿ ಹಾಗೂ ಜಾನ್ವಿ ಅವರು ಬಿಗ್ ಬಾಸ್ ಮನೆಯಲ್ಲಿ ಗೆಜ್ಜೆ ಶಬ್ದ ಮಾಡಿ, ಅದನ್ನು ರಕ್ಷಿತಾ ಮೇಲೆ ಹಾಕಿದ್ದರು. ರಕ್ಷಿತಾ ನಾಗವಲ್ಲಿ ರೀತಿ ಆಡ್ತಾರೆ ಎಂದೆಲ್ಲ ಸುಳ್ಳು ಆರೋಪ ಮಾಡಿದ್ದರು. ಇದೇ ವಿಚಾರ ಇಟ್ಟುಕೊಂಡ ವಾರ ಪೂರ್ತಿ ಎಳೆದಾಡಿದ್ದರು. ರಕ್ಷಿತಾಗೆ ಪದೇ ಪದೇ ಕಿರುಕುಳ ಕೊಡುವ ಪ್ರಯತ್ನ ಮಾಡಿದ್ದರು. ಅಷ್ಟೇ ಅಲ್ಲದೆ ರಕ್ಷಿತಾಗೆ ಈಡಿಯೆಟ್, ಮುಚ್ಕೊಂಡು ಮಲ್ಕೋ ಎಂಬ ಪದವನ್ನೆಲ್ಲ ಉಪಯೋಗಿಸಿದ್ದಾರೆ.
ಇದೀಗ ಇಂದಿನ ಪ್ರೋಮೋ ಬಿಡುಗಡೆಯಾಗಿದೆ. ‘‘ನಾವು ಕೊಟ್ಟಿರೋ ಮಾತನ್ನು ತಪ್ಪಲ್ಲ, ತಪ್ಪಾಗಿ ಆಡಿರೋ ಮಾತಿಗೆ ಬುದ್ಧಿ ಕಲಿಸದೇ ಬಿಡಲ್ಲ. ಒಳ್ಳೆಯ ಕೆಲಸ ಮಾಡಿದಾಗ ನಾವು ಕೈ ತಟ್ಟಿ ಚಪ್ಪಾಳೆಯನ್ನು ಸಹ ಕೊಡ್ತೀವಿ. ಎಲ್ಲಿದ್ದೀವಿ ಅನ್ನೋದನ್ನು ಮರೆತು ಬಾಯಿಗೆ ಬಂದ ಹಾಗೆ ಮಾತಾಡಿದವರಿಗೆ ಚೂರು ತಲೆ ಮೇಲೆ ತಟ್ಟಿ ಬುದ್ದಿ ಹೇಳಬೇಕಾಗುತ್ತದೆ’’ ಎಂದು ಸುದೀಪ್ ಹೇಳಿ ವಿಷಯ ಕೈಗೆತ್ತಿಕೊಂಡಿದ್ದಾರೆ.
ಅಶ್ವಿನಿ ಅವರೆ ನಿಮ್ಮ ಸ್ಟೇಟ್ಮೆಂಟ್ ಹೇಳ್ತಾ ಹೋಗ್ತೀನಿ, ಇದನ್ನ ನೋಡಿದ್ರೆ ಹೇಳಬಹುದು ಇಲ್ಲಿಂದ ಬಂದಿದ್ಯಾ ನೀನು.. ಕಾರ್ಟೂನ್.. ಈ ಯಮ್ಮ ಅಂದಾಕ್ಷಣ ನೀವು ನನ್ನನ್ನ ಯಮ್ಮ.. ಗಿಮ್ಮ ಅಂತ ಕರೀಬೇಡಿ ನನ್ಗೆ ಒಂದು ಹೆಸರು ಇದೆ ಅಂತ ಹೇಳ್ತೀರ.. ಆದ್ರೆ ನೀವು ಅವರನ್ನು ಈಡಿಯೆಟ್ ಅಂತೀರಿ. ತಮಾಷೆ ಮಾಡ್ಕೊಂಡು ನಿಮ್ಮ ಪರ್ಸನಾಲಿಟಿಯನ್ನು ಕೊಲೆ ಮಾಡ್ತಾ ಇದ್ದೀರಾ.. ಒಬ್ಬರ ಮರಿಯಾದೆ.. ಒಬ್ಬರ ಅಸ್ತಿತ್ವ.. ಒಬ್ಬನ ಗೌರವ. ಇನ್ನೊಬ್ಬನ ಆಸ್ತಿ ಆಟಸಾಮಾನು ಆಗಬಾರದು.. ಯಾರ ಅಪ್ಪನ ಆಸ್ತಿನೂ ಅಲ್ಲ ಅದು’’ ಎಂದು ಕಿಚ್ಚ ಸುದೀಪ್ ಖಡಕ್ ಆಗಿ ಹೇಳಿದ್ದಾರೆ.
ಮೈಸೂರಿನಿಂದ ಚಾಮರಾಜನಗರಕ್ಕೆ ಪ್ರತಿನಿತ್ಯ ೬ ರೈಲುಗಳು ಸಂಚರಿಸುತ್ತಿವೆ. ಈಗ ಸಂಚರಿಸುವ ರೈಲುಗಳ ಜೊತೆ ಚಾಮರಾಜನಗರದಿಂದ ಮೈಸೂರಿಗೆ ಬೆಳಿಗ್ಗೆ ೪.೪೦ಕ್ಕೆ ,…
ವಸಂತಕುಮಾರ ಮೈಸೂರಮಠ, ಸಾಮಾಜಿಕ ಕಾರ್ಯಕರ್ತರು ಶ್ವಾನ ಮನುಷ್ಯನ ಅತ್ಯತ್ತಮ ಸ್ನೇಹಿತ ಎಂಬುದರಲ್ಲಿ ಸಂದೇಹವಿಲ್ಲ! ಆದರೆ ಅವು ಉಪದ್ರವಕಾರಿ ಯಾದಾಗ ಏನಾದರೂ…
ದೆಹಲಿ ಕಣ್ಣೋಟ ಶಿವಾಜಿ ಗಣೇಶನ್ ಬ್ರಿಟಿಷ್ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಹೆಸರಿಸಲಾಗಿದ್ದ ಸರ್ಕಾರಿ ಕಾರ್ಯಾಲಯಗಳು ಮತ್ತು ರಸ್ತೆಗಳ ಹೆಸರುಗಳನ್ನು ಕೇಂದ್ರದಲ್ಲಿ…
ಕೆ.ಬಿ.ರಮೇಶನಾಯಕ ಮೈಸೂರು: ದೇಶದಲ್ಲಿ ಇಂಡಿಗೋ ಏರ್ ಲೈನ್ಸ್ ಸಂಸ್ಥೆಯ ವಿಮಾನಗಳ ಸೇವೆ ವ್ಯತ್ಯಯಗೊಂಡಿದ್ದು, ಮೈಸೂರು ವಿಮಾನ ನಿಲ್ದಾಣದಿಂದ ಹೊರ ರಾಜ್ಯಗಳಿಗೆ…
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…