ಬೆಂಗಳೂರು : ಸ್ಯಾಂಡಲ್‌ವುಡ್‌ನ ಅಭಿನಯಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೂ ಅನಂತ್ ಅಂಬಾನಿ ವಿವಾಹಕ್ಕೆ ಆಮಂತ್ರಣ ಬಂದಿದ್ದು, ಮದುವೆಗೆ ಹೋಗದಿರಲು ಸ್ವತಃ ಸುದೀಪ್ ಕಾರಣ ತಿಳಿಸಿದ್ದಾರೆ.
ಏಶಿಯಾದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತದ ಮುಖೇಶ್ ಅಂಬಾನಿಯ ಎರಡನೇ ಪುತ್ರ ಅನಂತ್ ಅಂಬಾನಿಯ ಅದ್ದೂರಿ ವಿವಾಹ ಮಹೋತ್ಸವದಲ್ಲಿ ದೇಶ-ವಿದೇಶಗಳಿಂದ ಚಿತ್ರನಟರು, ರಾಜಕಾರಣಿಗಳು ಹಾಗೂ ಬಿಸನೆಸ್‌ಮೆನ್‌ಗಳು ಭಾಗಿಯಾಗಿದ್ದರು.
ಕನ್ನಡ ಚಿತ್ರರಂಗದಿಂದ ನಟ ಯಶ್ ದಂಪತಿಗಳು ಭಾಗಿಯಾಗಿದ್ದ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಕಿಚ್ಚ ಸುದೀಪ್, ತಮಗೂ ಅನಂತ್ ಅಂಬಾನಿ ಮದುವೆಗೆ ಆಮಂತ್ರಣ ಬಂದಿದ್ದು, ವಿವಾಹ ಮಹೋತ್ಸವದಲ್ಲಿ ಭಾಗಿಯಾಗದಿರಲು ಕಾರಣ ಬಿಚ್ಚಿಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ನನಗೂ ಅನಂತ್ ಅಂಬಾನಿ ವಿವಾಹ ಮಹೋತ್ಸವದ ಆಮಂತ್ರಣ ಬಂದಿದೆ. ಆದರೆ ಆರೋಗ್ಯದ ಸಮಸ್ಯೆಯಿಂದ ಭಾಗಿಯಾಯಗಲು ಸಾಧ್ಯವಾಗಲಿಲ್ಲ. ವಿವಾಹ ನಡೆಯುತ್ತಿದ್ದ ಸ್ಥಳದಲ್ಲಿ ಕೆಲವು ಕಟ್ಟುಪಾಡು ಹಾಗೂ ನಿಯಮಗಳಿದ್ದ ಕಾರಣ ನನ್ನಿಂದ ಸಮಸ್ಯೆಯಾಗಬಾರದು ಎಂಬ ಕಾರಣದಿಂದ ವಿವಾಹಕ್ಕೆ ಭೇಟಿ ನೀಡಿರಲಿಲ್ಲ. ನನಗೂ ಜ್ವರ ಹಾಗೂ ನೆಗಡಿ ಇದ್ದ ಕಾರಣ ನನ್ನಿಂದ ತೊಂದುರೆಯಾಗಬಾರದು ಎಂದು ಸುಮ್ಮನಾದೆ ಎಂದು ಹೇಳಿದ್ದಾರೆ.
ಮುಂದುವರೆದು, ಮುಖೇಶ್ ಅಂಬಾನಿ ಅವರನ್ನು ಭೇಟಿಯಾಗುವುದು ನಮ್ಮ ಅದೃಷ್ಠ. ಮುಂದೊಂದು ದಿನ ಖಂಡಿತ ಅವರನ್ನು ಭೇಟಿಯಾಗುತ್ತೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆ ಅಮಿತ್…
ಮಂಡ್ಯ: ಹೆಣ್ಣು ಕಾನೂನು ಅರಿತಕೊಂಡಾಗಷ್ಟೇ, ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ಎದುರಿಸಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ…
ಮೈಸೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಮಾಸುವ ಮುನ್ನವೇ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕಿ ಸಾವನ್ನಪ್ಪಿರುವ…
ಬೆಂಗಳೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಅವರು ತಮ್ಮ ಮದುವೆ ಕರೆಯೋಲೆಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ.ಸುರೇಶ್ ಅವರಿಗೆ ನೀಡಿ…
ಕಲಬುರಗಿಯಲ್ಲಿ 371 ಹಾಸಿಗೆಗಳ ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಸಿಎಂ ಮಾತು.. ಕಲಬುರಗಿ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ…
ಬೆಳಗಾವಿ: ಎಂಎಲ್‌ಸಿ ಸಿ.ಟಿ.ರವಿ ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಪೊಲೀಸರ ವಿರುದ್ಧ ಫೇಕ್ ಎನ್‌ಕೌಂಟರ್ ಹೇಳಿಕೆ…