Categories: ಮನರಂಜನೆ

ಟೈಗರ್‌ ಶ್ರಾಫ್‌ಗೆ ಆಕ್ಷನ್‌ ಕಟ್‌ ಹೇಳುತ್ತಿರುವ ಕನ್ನಡಿಗ ಎ.ಹರ್ಷ

ಬೆಂಗಳೂರು: ಕನ್ನಡದ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಎ. ಹರ್ಷ ಈಗ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕನ್ನಡದಲ್ಲಿ ವೇದ, ಭಜರಂಗಿ, ಭಜರಂಗಿ-2 ಸಿನಿಮಾ ನಿರ್ದೇಶನ ಮಾಡಿರುವ ಹರ್ಷ, ತೆಲುಗು ಪ್ರಾಜೆಕ್ಟ್‌ ನಂತರ ಬಾಲಿವಡ್‌ ನಟ ಟೈಗರ್‌ ಶ್ರಾಫ್‌ ನಟನೆಯ ಭಾಗಿ-4 ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವು 2025ರ ಸೆಪ್ಟೆಂಬರ್‌.5ಕ್ಕೆ ತೆರೆ ಕಾಣಲಿದೆ.

ಸಜೀದ್‌ ನಾಡಿಯಾಡ್ವಾಲಾ ಎಂಟರ್ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲಿ ಭಾಗಿ-1 ಚಿತ್ರ ಬಿಡುಗಡೆಯಾಗಿತ್ತು. ಸಬೀರ್‌ ಖಾನ್‌ ಇದನ್ನು ನಿರ್ದೇಶಿಸಿದರು.

ನಂತರ ಅಹಮದ್‌ ಖಾನ್‌ ನಿರ್ದೇಶನದಲ್ಲಿ ಭಾಗಿ-2 ಹಾಗೂ ಭಾಗಿ-3 ಕ್ರಮವಾಗಿ 2018 ಮತ್ತು 2020ರಲ್ಲಿ ತೆರೆಗೆ ಅಪ್ಪಳಿಸಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್‌ ಮಾಡಿದ್ದವು. ಈ ಸಿನಿಮಾಗಳಿಗೂ ಫಾಕ್ಸ್‌ ಸ್ಟಾರ್‌ ಸ್ಟುಡಿಯೋ ಜೊತೆಯಲ್ಲಿ ನಾಡಿಯಾಡ್ವಾಲಾ ಗ್ರ್ಯಾಂಡ್ಸ್ವನ್‌ ಬ್ಯಾನರ್‌ ನಿರ್ಮಾಣ ಮಾಡಿತ್ತು.

ನಾಡಿಯಾಡ್ವಾಲಾ ಗ್ರ್ಯಾಂಡ್ಸ್ವನ್‌ ಎಂಟರ್ಟೈನ್ಮೆಂಟ್‌ ಬ್ಯಾನರ್‌ ಅಡಿಯಲ್ಲೇ ಭಾಗಿ-4 ಚಿತ್ರವನ್ನು ನಿರ್ಮಾಣ ಮಾಡಲಿದ್ದು, ಭರ್ಜರಿ ಕಲೆಕ್ಷನ್‌ ನಿರೀಕ್ಷೆಯಲ್ಲಿದ್ದಾರೆ.

ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ಭಾಗಿ-4 ನಿರ್ದೇಶನದ ಸುಳಿವು ನೀಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಮೇ-1ರಿಂದ ಮೈಸೂರು-ಹೈದರಾಬಾದ್‌ಗೆ ಮತ್ತೊಂದು ವಿಮಾನ ಸಂಚಾರ: ಯದುವೀರ್

ಮೈಸೂರು : ಸಾಂಸ್ಕ ತಿಕ ನಗರಿಯ ಜನತೆಯ ಅನುಕೂಲಕ್ಕಾಗಿ ಮೈಸೂರಿನಿಂದ ಮುತ್ತಿನ ನಗರಿ ಹೈದರಾಬಾದ್‌ಗೆ ಮತ್ತೊಂದು ವಿಮಾನ ಸಂಚಾರ ಅತಿ…

8 hours ago

ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು

ನವದೆಹಲಿ : ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆ (Women’s Reservation Bill) ಭಾರೀ…

9 hours ago

ಹೊರ್ಮುಜ್ ಜಲಸಂಧಿ ಹಡಗುಗಳ ಸಂಚಾರಕ್ಕೆ ಮುಕ್ತ ; ಇರಾನ್‌ ಮಹತ್ವದ ಘೋಷಣೆ,

ಟೆಹ್ರಾರ್‌ : ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಪೂರ್ಣ ಮುಕ್ತಿ ನೀಡಿದೆ ಎಂದು ಮಹತ್ವದ ಘೋಷಣೆ ಮಾಡಿದೆ.…

9 hours ago

ಹನೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೃಹತ್‌ ಪ್ರತಿಭಟನೆ

ಹನೂರು : ಕುಡಿಯುವ ನೀರು, ಇ-ಸ್ವತ್ತು, ಪೋಡಿ ಹಾಗೂ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸುವಂತೆ…

10 hours ago

ಮೈಸೂರಿನ ರೈಲ್ವೆ ಗೂಡ್ಸ್‌ ಶೆಡ್‌ ಸ್ಥಾಳಾಂತಕ್ಕೆ ಹುನ್ನಾರ : ಎಂ.ಲಕ್ಷ್ಮಣ್‌ ಆರೋಪ

ಮೈಸೂರು : ನಗರದಲ್ಲಿರುವ ರೈಲ್ವೇ ಗೂಡ್ಸ್‌ ಶೆಡನ್ನು ಪಾಂಡವಪುರಕ್ಕೆ ಸ್ಥಳಾಂತರಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿ.ಸೋಮಣ್ಣ ಅವರು ಹುನ್ನಾರ…

10 hours ago

ಮಹಿಳಾ ಮೀಸಲಾತಿ ಕಾಯ್ದೆ ಏ.16 ರಿಂದಲೇ ಜಾರಿ

ಕಾನೂನು ಸಚಿವಾಲಯದಿಂದ ಅಧಿಸೂಚನೆ ಪ್ರಕಟ ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನ ಒದಗಿಸುವ ಮಹಿಳಾ ಮೀಸಲಾತಿ…

10 hours ago