ಮನರಂಜನೆ

‘ಎಡಗೈ’ ಜೊತಯಾದ ‘ಬ್ಲಿಂಕ್’ ಮತ್ತು ‘ಶಾಖಹಾರಿ’ ನಿರ್ಮಾಪಕರು

ಕಳೆದ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಹಣಕಾಸಿನ ವಿಷಯದಲ್ಲಿ ದೊಡ್ಡ ಸದ್ದು ಮಾಡದ ಮತ್ತು ಕಂಟೆಂಟ್‍ ವಿಷಯದಲ್ಲಿ ಗಮನಸೆಳೆದ ಚಿತ್ರಗಳೆಂದೆರೆ ಅದು ‘ಬ್ಲಿಂಕ್‍’ ಮತ್ತು ‘ಶಾಖಾಹಾರಿ’. ಆ ಚಿತ್ರಗಳ ನಂತರ ಆ ನಿರ್ಮಾಪಕರು, ಹೊಸ ಚಿತ್ರಗಳನ್ನು ನಿರ್ಮಿಸದಿದ್ದರೂ, ಒಂದಿಷ್ಟು ಚಿತ್ರಗಳ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ’ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು, ದಿಗಂತ್‍ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಬಿಡುಗಡೆಗೆ ಕೈಜೋಡಿಸಿದ್ದಾರೆ.

ದಿಗಂತ್ ನಟನೆಯ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರೀಕರಣ ಮುಗಿದು ಹಲವು ಸಮಯವಾದರೂ, ಚಿತ್ರವು ಕಾರಣಾಂತರಗಳಿಂದ ಬಿಡುಗಡೆ ಮುಂದಕ್ಕೆ ಹೋಗುತ್ತಲೇ ಇತ್ತು. ಈಗ ‘ಬ್ಲಿಂಕ್‍’ ನಿರ್ಮಾಪಕ ರವಿಚಂದ್ರ ಎ.ಜೆ ಮತ್ತು ‘ಶಾಖಾಹಾರಿ’ ನಿರ್ಮಾಪಕ ರಾಜೇಶ್ ಕೀಳಂಬಿ ಈ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈ ಮೂಲಕ ಚಿತ್ರಕ್ಕೆ ಮತ್ತೆ ಜೀವ ಬಂದಿದೆ.

ಇದನ್ನೂ ಓದಿ:- ಶಂಕರನ ಮಗ ಹಾಗೂ ಸಿಂಬನ ಕಥೆಯೇ ‘ನಾನು ಮತ್ತು ಗುಂಡ 2’

ಇದಕ್ಕೂ ಮೊದಲು ತಮ್ಮ ಜನನಿ ಪಿಕ್ಚರ್ಸ್ ಬ್ಯಾನರ್ ಅಡಿ ‘BTS’, ‘ನೋಡಿದವರು ಏನಂತರೆ’, ‘ಅನಾಮಧೇಯ ಅಶೋಕ್ ಕುಮಾರ್’ ಮತ್ತು ‘ಭಾವ ತೀರ ಯಾನ’ ಸೇರಿದಂತೆ ಕೆಲವು ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಾಪಕ ರವಿಚಂದ್ರ ವಿತರಿಸಿದ್ದರು. ಈ ಸಾಲಿಗೆ ಈಗ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರ ಸಹ ಸೇರಿದೆ.

ಈ ಕುರಿತು ಮಾತನಾಡುವ ನಿರ್ದೇಶಕ ಸಮರ್ಥ್‍ ಕಡಕೋಳ್‍, ‘ರಾಜೇಶ್‍ ಮತ್ತು ರವಿಚಂದ್ರ ಅವರ ಆಗಮನದಿಂದ ಚಿತ್ರಕ್ಕೆ ಮತ್ತಷ್ಟು ಬಲ ಬಂದಂತೆ ಆಗಿದೆ. ಇಬ್ಬರೂ ನಮ್ಮ ಚಿತ್ರದ ಬಿಡುಗಡೆಗೆ ಕೈ ಜೋಡಿಸಿರುವುದು ಖುಷಿಯಾಗಿದೆ’ ಎನ್ನುತ್ತಾರೆ.

‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ದಿಗಂತ್‍ ಜೊತೆಗೆ ನಿಧಿ ಸುಬ್ಬಯ್ಯ, ಧನು ಹರ್ಷ, ನಿರೂಪ್ ಭಂಡಾರಿ, ‘ಭಜರಂಗಿ’ ಲೋಕಿ, ಕೃಷ್ಣ ಹೆಬ್ಬಾಳೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿಗೆ ತಾತ್ಕಾಲಿಕ ರಿಲೀಫ್!

ಬೆಂಗಳೂರು: ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಗೆ ತಡೆ…

13 hours ago

ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು!

ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕೋಹಳ ಬಳಿಯ ಮೈಸೂರು–ಮಾನಂದವಾಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್ಆರ್‌ಟಿಸಿ ಬಸ್…

13 hours ago

174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ಗೆ ಇಸ್ರೇಲ್‌ನ ಶೌರ್ಯ ಪ್ರಶಸ್ತಿ!

ಜೆರುಸೇಲಂ: ಭೀಕರ ವಿಮಾನ ಅವಘಡವನ್ನು ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ…

15 hours ago

ರಾಜ್ಯ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್‌ಗೆ ಸಂಚು?: ಶಾಸಕ ಗಣಿಗ ರವಿ ಗಂಭೀರ ಆರೋಪ!

ಮಂಡ್ಯ: ರಾಜ್ಯದ ಸಚಿವರಿಗೆ ಮುಜುಗರ ಉಂಟುಮಾಡಲು ಕೇಂದ್ರ ಸಚಿವರೊಬ್ಬರು ಹಾಗೂ ಕರ್ನಾಟಕದ ಬಿಜೆಪಿ ನಾಯಕರೊಬ್ಬರು ಸ್ಟಿಂಗ್ ಆಪರೇಷನ್‌ಗೆ ಸಂಚು ರೂಪಿಸಿದ್ದಾರೆ…

15 hours ago

ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷ

ಸಿದ್ದಾಪುರ: ಸಿದ್ದಾಪುರ ಮೈಸೂರು ಮುಖ್ಯ ರಸ್ತೆಯ ಘಟ್ಟತಳ ಹೇರೂರು ಎಸ್ಟೇಟ್ ಬಳಿ ಗುರುವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು ಬಳಿಕ ಸಮೀಪದ…

15 hours ago

ಓದುಗರ ಪತ್ರ: ಬಂತು ಎಟಿಎಂನಲ್ಲಿ ‘ತೇಪೆ’ ಹಾಕಿದ ನೋಟು!

ಒಂದು ಕಾಲದಲ್ಲಿ (ಒಂದಾನೊಂದು ಕಾಲದಲ್ಲಿ ಎಂಬ ಮಾತಿನಂತೆ) ಎಟಿಎಂ ಯಂತ್ರಗಳಿಂದ ಹಣ ಡ್ರಾ ಮಾಡಿದಾಗ ಸಾಮಾನ್ಯವಾಗಿ ಹೊಸ ಗರಿಗರಿನೋಟುಗಳು ಬರುತ್ತಿದ್ದವು.…

16 hours ago