ಮನರಂಜನೆ

ಪಾರ್ಟಿ ಮೂಡ್‍ನಲ್ಲಿ ಯಶ್‍; ಹುಟ್ಟುಹಬ್ಬಕ್ಕೆ ‘ಟಾಕ್ಸಿಕ್‍’ ಚಿತ್ರದ ನೋಟ ಬಿಡುಗಡೆ

ಯಶ್‍ ಅಭಿನಯದ ‘ಟಾಕ್ಸಿಕ್‍’ ತಂಡದಿಂದ ಅವರ ಹುಟ್ಟುಹಬ್ಬವಾದ ಇಂದು ಒಂದು ಆಶ್ಚರ್ಯ ಕಾದಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿತ್ತು. ಸ್ವತಃ ಯಶ್‍ ತಮ್ಮ ಖಾತೆಗಳ ಮೂಲಕ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್‍ ಇದೆ ಎಂದು ಘೋಷಿಸಿದ್ದರು. ಆದರೆ, ಆ ಆಶ್ಚರ್ಯವೇನು ಎಂಬುದನ್ನು ಅವರು ಬಹಿರಂಗಗೊಳಿಸಿಲ್ಲ. ‘Unleashing him’ ಎಂದಷ್ಟೇ ಬರೆದುಕೊಂಡಿದ್ದರು.

ಅದಕ್ಕೆ ಸರಿಯಾಗಿ ಇಂದು ಚಿತ್ರದ ನಾಯಕನನ್ನು ಪರಿಚಯಿಸುವ ಟೀಸರ್ ಬಿಡುಗುಡೆಯಾಗಿದೆ. ಯಶ್‍ ಈ ಟೀಸರ್‌ನಲ್ಲಿ ಕಾರ್‌ನಿಂದ ಬಂದು ಕ್ಲಬ್‍ ಎದುರು ಇಳಿಯುತ್ತಾರೆ. ಕ್ಲಬ್‍ನಲ್ಲಿ ಕಣ್ಣುಕುಕ್ಕುವ ಬೆಳಕಿನ ಮಧ್ಯೆ, ಲಲನೆಯರು ಕುಣಿಯುತ್ತಿರುತ್ತಾರೆ. ಅವರ ಮಧ್ಯೆ, ಯಶ್‍ ಸಿಗರೇಟ್‍ ಹೊತ್ತಿಸಿಕೊಂಡು ಒಳಗೆ ನಡೆಯುತ್ತಾ ಸಾಗುತ್ತಾರೆ. ಮೋಜಿನ ಅಮಲಿನಲ್ಲಿ ತೇಲುತ್ತಾ ಇರುವ ಜನರ ಮಧ್ಯೆ ನಡೆದು ಹೋಗುತ್ತಾರೆ. ಪಿಯಾನೋ ಎದುರು ಕುಳಿತ ಹುಡುಗಿಯೊಬ್ಬಳನ್ನು ತನ್ನೆಡೆಗೆ ಸೆಳೆಯುವುದರ ಜೊತೆಗೆ ಅವಳ ಮೇಲೆ ಬಾಟಲಿಯಲ್ಲಿದ್ದ ಮದ್ಯವನ್ನು ಸುರಿಯುವ ಮೂಲಕ ಈ ಟೀಸರ್‍ ಮುಗಿಯುತ್ತದೆ.

ಕಳೆದ ವರ್ಷದ ಯಶ್‍ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಟಾಕ್ಸಿಕ್‍’ ಚಿತ್ರದ ಘೋಷಣೆಯಾಗಿತ್ತು. ಈ ವರ್ಷ ಚಿತ್ರದ ಟೀಸರ್‍ ಕೂಡ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ, ಯಾವುದೇ ದಿನಾಂಕ ಘೋಷಣೆಯಾಗಿಲ್ಲ. ಮೊದಲು ಚಿತ್ರವು 2025ರ ಏಪ್ರಿಲ್‍.10ರಂದು ಜಗತ್ತಿನಾದ್ಯಂತ ಬಿಡುಗಡೆ ಎಂದು ಹೇಳಲಾಗಿತ್ತು. ಆದರೆ, ಚಿತ್ರೀಕರಣ ಮುಗಿಯದ ಕಾರಣ, ಮೊದಲು ಘೋಷಣೆಯಾದ ದಿನದಂದು ಚಿತ್ರ ಬಿಡುಗಡೆಯಾಗುತ್ತಿಲ್ಲ. ಬದಲಿಗೆ, ಬೇರೆ ದಿನಾಂಕದಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಆದರೆ, ಯಾವ ದಿನ ಎಂದು ಚಿತ್ರತಂಡ ಇನ್ನಷ್ಟೇ ಅಧಿಕೃತವಾಗಿ ಹೇಳಬೇಕಿದೆ.

‘ಟಾಕ್ಸಿಕ್‍’ ಚಿತ್ರದಲ್ಲಿ ಯಶ್‍, ಕಿಯಾರಾ ಅಡ್ವಾಣಿ, ನಯನತಾರಾ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ, ಶ್ರುತಿ ಹಾಸನ್‍, ಅನಿಲ್‍ ಕಪೂರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಗೀತೂ ಮೋಹನ್‍ ದಾಸ್‍ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದರೆ, ಕೆ.ವಿ.ಎನ್. ಪ್ರೊಡಕ್ಷನ್ಸ್ ಮತ್ತು ಮಾನ್‍ಸ್ಟರ್‍ ಮೈಂಡ್‍ ಕ್ರಿಯೇಷನ್ಸ್ ಬ್ಯಾನರ್‍ ಅಡಿ ವೆಂಕಟ್‍ನಾರಾಯಣ್‍ ಮತ್ತು ಯಶ್‍ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಹುವಾಯಿಯಿಂದ ಹೊಸ ಸ್ಮಾರ್ಟ್‌ ಗಡಿಯಾರ

ಅತ್ಯುತ್ತಮ ವಿನ್ಯಾಸ, ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಹೆಲ್ತ್ ಮತ್ತು ಮೋಷನ್ ಟ್ರ್ಯಾಕಿಂಗ್ ಹಾಗೂ ಇನ್‌ಬಿಲ್ಟ್ ಕರೆ ಸೌಲಭ್ಯಗಳು ಮತ್ತು ನ್ಯಾವಿಗೇಷನ್…

8 mins ago

ಮತ್ತೆ ಮತ್ತೆ ಕುವೆಂಪು; 32 ಲೇಖನಗಳ ಗುಚ್ಛ

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಾರ್ಥಕ ಕಾರ್ಯ  ಡಾ. ಮುಳ್ಳೂರು ನಂಜುಂಡಸ್ವಾಮಿ ಮೈ ಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ…

16 mins ago

ಅಲಕ್ಷಿತ ಜಾತಿಗಳೂ ಶಿಕ್ಷಣ ವಂಚಿತ ಯುವಸಮೂಹವೂ

ಉನ್ನತ ಶಿಕ್ಷಣ ದುಬಾರಿಯಾಗುತ್ತಿರುವುದು ದಲಿತ ವಿದ್ಯಾರ್ಥಿಗಳಿಗೆ ಮಾರಕವಾಗುತ್ತಿದೆ ನಾ. ದಿವಾಕರ ದಿನಗೂಲಿ ಕಾರ್ಮಿಕರ ಮಗ ಅತುಲ್ ಕುಮಾರ್ ಪರಿಶಿಷ್ಟ ಜಾತಿಗೆ…

2 hours ago

ಓದುಗರ ಪತ್ರ | ತಂಗುದಾಣಕ್ಕೆ ಶೆಲ್ಟರ್ ನಿರ್ಮಿಸಿ

ಮೈಸೂರಿನ ಕುವೆಂಪುನಗರದ ಅಕ್ಷಯ ಭಂಡಾರ್ ಸಮೀಪದ ಬಸ್ ತಂಗುದಾಣಕ್ಕೆ ಶೆಲ್ಟರ್ ಇಲ್ಲದೆ ಪ್ರಯಾಣಿಕರು ಬಿಸಿಲು, ಮಳೆ ಎನ್ನದೆ ರಸ್ತೆ ಬದಿಯಲ್ಲಿಯೇ…

2 hours ago

ಓದುಗರ ಪತ್ರ | ಆಚರಣೆಗಷ್ಟೇ ಸೀಮಿತವಾಗದಿರಲಿ

ದೇಶದ ಬೆನ್ನೆಲುಬು ರೈತ. ಇಡೀ ನಾಡಿಗೆ ಅನ್ನ ಕೊಡುವ ರೈತರ ದಿನಾಚರಣೆಯನ್ನು ಸರ್ಕಾರ ಹೆಸರಿಗಷ್ಟೇ ಆಚರಣೆ ಮಾಡುತ್ತಿದೆಯೇ ವಿನಾ ರೈತರಿಗೆ…

2 hours ago

ಓದುಗರ ಪತ್ರ | ಬಸ್ ನಿಲ್ದಾಣದೊಳಗೆ ದ್ವಿಚಕ್ರ ವಾಹನಗಳನ್ನು ನಿಷೇಧಿಸಿ

ಗುಂಡ್ಲುಪೇಟೆ ತಾಲ್ಲೂಕಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ನಿತ್ಯ ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಸ್ ನಿಲ್ದಾಣಕ್ಕೆ ರಾಜ್ಯ…

2 hours ago