manju vishnuvardhan
ಬೆಂಗಳೂರು : ವಿಷ್ಣುವರ್ಧನ್ ಅವರ ಸ್ಮಾರಕ ಮತ್ತು ಪುಣ್ಯಭೂಮಿಯ ಕುರಿತು ದಿನಕ್ಕೊಂದು ಬೆಳವಣಿಗೆಗಳಾಗುತ್ತಿವೆ.
ಸೋಮವಾರವಷ್ಟೇ, ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಮಾತನಾಡಿ, ಕೆಂಗೇರಿ ಬಳಿಯಲ್ಲೇ ವಿಷ್ಣುವರ್ಧನ್ ಅವರ ಸ್ಮಾರಕ ಕಟ್ಟಲಾಗುವುದು ಮತ್ತು ಸೆ.18ರಂದು ಅಡಿಗಲ್ಲು ಹಾಕಲಾಗುವುದು ಎಂದು ಹೇಳಿದ್ದರು. ಅದರ ಜೊತೆಗೆ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ವಾಪಸ್ಸು ಪಡೆಯುವುದಕ್ಕೆ ಕಾನೂನು ರೀತಿ ಹೋರಾಟ ಮಾಡುವುದಾಗಿ ತಿಳಿಸಿದ್ದರು. ಈಗ ಹಿರಿಯ ನಿರ್ಮಾಪಕ ಕೆ. ಮಂಜು ಸಹ ಆ ಜಾಗಕ್ಕಾಗಿ ಕಾನೂನು ರೀತಿಯಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರವ ಕೆ.ಮಂಜು, ‘ಸಮಾಧಿ ಜಾಗ ನಮಗೆ ಬೇಕೇ ಬೇಕು. ಕಾನೂನು ರೀತಿಯಲ್ಲಿ ಆ ಜಾಗಕ್ಕೆ ಹೋರಾಟ ಮಾಡುತ್ತೇವೆ. ಸರಕಾರದ ಗಮನಕ್ಕೆ ತಂದು ನಾವು ಹೋರಾಟ ಮಾಡುತ್ತೇವೆ. ಬಾಲಣ್ಣ ಅವರ ಮೊಮ್ಮಗ ಕಾರ್ತಿಕ್ ಅವರನ್ನ ಭೇಟಿ ಆಗಿ ಮಾತಾಡಿದ್ದೇನೆ. ನಮಗೆ ಆ 10 ಗುಂಟೆ ಜಾಗ ಬೇಕೇಬೇಕು ಅಂತ ಮನವಿ ಮಾಡಿದ್ದೇನೆ. ಅಂತ್ಯಕ್ರಿಯೆ ಆದ ಜಾಗ ನಮಗೆ ಪವಿತ್ರವಾದ ಜಾಗ ಅಂತ ಕೇಳಿಕೊಂಡಿದ್ದೇನೆ. ಅಭಿಮಾನ್ ಸ್ಟುಡಿಯೋ ಸರಕಾರದ ಜಾಗ. ನಮಗೆ 10 ಗುಂಟೆ ಜಾಗ ಬೇಕು’ ಎಂದರು. ವಿಷ್ಣುವರ್ಧನ್ ಮನೆಯ ಅನ್ನ ತಿಂದಿದ್ದೇನೆ ಎಂದಿರುವ ಅವರು, ‘ಅಭಿಮಾನಿಗಳ ಅಭಿಮಾನ ನೋಡಿ ವಿಷ್ಣುವರ್ಧನ್ ಕಣ್ಣೀರು ಹಾಕುತ್ತಿದ್ದರು. ನಾನು ಇದುವರೆಗೂ ಮೈಸೂರಿಗೆ ಹೋಗಿಲ್ಲ. ಪ್ರತೀ ವರ್ಷ ಹೋಗೋದೇ ಅಭಿಮಾನ್ ಸ್ಟುಡಿಯೋಗೆ. ಹಾಗಾಗಿ, ನಮಗೆ ಅಲ್ಲೇ ಜಾಗ ಬೇಕು ಮತ್ತು ಅದಕ್ಕೆ ಏನೆಲ್ಲಾ ಹೋರಾಟ ಮಾಡಬೇಕೋ, ಕಾನೂನು ರೀತಿಯಲ್ಲಿ ಖಂಡಿತಾ ಹೋರಾಡುತ್ತೇವೆ’ ಎಂದು ಹೇಳಿದರು.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…